ಡ್ರಗ್ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಸೇರಿದ್ದ ಸುಶಾಂತ್ ಸಿಂಗ್ ರಜಪೂತ್ರ ಮಾಜಿ ಗೆಳತಿ ಹಾಗೂ ನಟಿ ರಿಯಾ ಚಕ್ರವರ್ತಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಜೈಲಿನಿಂದ ಹೊರ ಬಂದ ನಂತರ ಮನೆ ಸೇರಿದ್ದ ಅವರು ಈಗ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರದಲ್ಲಿ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬಂದಿದ್ದವು. ಅವರ ಖಾತೆಯಿಂದ ರಿಯಾ ಹಣ ವರ್ಗಾವಣೆ ಮಾಡಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆಗೆ ಮುಂದಾದ ಜಾರಿ ನಿರ್ದೇಶನಲಾಯಕ್ಕೆ (ಇಡಿ) ಡ್ರಗ್ ಜಾಲದ ವಾಸನೆ ಸಿಕ್ಕಿತ್ತು. ರಿಯಾ ಡ್ರಗ್ ಡೀಲರ್ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾದಕ ದ್ರವ್ಯ ನಿಯಂತ್ರಣ ಮಂಡಳಿಗೆ (ಎನ್ಸಿಬಿ) ತಿಳಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಎನ್ಸಿಬಿ ಅಧಿಕಾರಿಗಳು ರಿಯಾ ಅವರನ್ನು ಸೆಪ್ಟೆಂಬರ್ 8ರಂದು ಬಂಧಿಸಿದ್ದರು. ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್ 7ರಂದು ಅವರಿಗೆ ಜಾಮೀನು ಸಿಕ್ಕಿತ್ತು. ಇದಾದ ನಂತರ ರಿಯಾ ತಮ್ಮ ಮನೆ ಸೇರಿದ್ದರು. ಈಗ ಹೊಸ ವರ್ಷ ಆರಂಭವಾದ ನಂತರದಲ್ಲಿ ರಿಯಾ ಮನೆಯಿಂದ ಹೊರ ಬಂದಿದ್ದಾರೆ. ಈ ಮೂಲಕ ಸುಮಾರು 3 ತಿಂಗಳು ಮನೆಯಲ್ಲೇ ಕಾಲ ಕಳೆದಿದ್ದಾರೆ.
ರಿಯಾ ಹಾಗೂ ಸಹೋದರ ಶೋವಿಕ್ ಬಾಂದ್ರಾದ ನಿವಾಸದಿಂದ ಹೊರಗೆ ಕಾಣಿಸಿಕೊಂಡಿದ್ದಾರೆ. ಅವರು ತಮ್ಮನ ಜೊತೆ ವಾಕಿಂಗ್ ನಡೆಸಿದ್ದಾರೆ.
ರಿಯಾ ಚಕ್ರವರ್ತಿ ಮುಕ್ತ, ಮುಕ್ತ, ಮುಕ್ತಾ.. ಸಿಕ್ತು ಷರತ್ತು ಬದ್ಧ ಜಾಮೀನು