ದಕ್ಷಿಣ ಕನ್ನಡ: ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು ಆಕೆಯ ಕೈಕಾಲು ಕಟ್ಟಿ ದರೋಡೆ ಮಾಡಿರುವ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕು ವ್ಯಾಪ್ತಿಯ ವಿಟ್ಲ ಮೇಗಿನಪೇಟೆಯಲ್ಲಿ ನಡೆದಿದೆ. ಪೇಟೆಯ ನಿವಾಸಿ ಲಲಿತಾ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ.
ಲಲಿತಾರ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಹಾಕಿ ನಂತರ ದರೋಡೆಗೆ ಮುಂದಾದ ಖದೀಮರು ಚಿನ್ನಾಭರಣಕ್ಕಾಗಿ ಮನೆಯೆಲ್ಲಾ ಹುಡುಕಾಟ ನಡೆಸಿದ್ದಾರೆ. ಅವರ ದುರಾದೃಷ್ಟಕ್ಕೆ ಏನೂ ಸಿಗದ ಹಿನ್ನೆಲೆಯಲ್ಲಿ ಮಹಿಳೆಯ ಮೇಲಿದ್ದ ಬೆಳ್ಳಿಯ ಸರ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ SI ವಿನೋದ್ ಕುಮಾರ್ ರೆಡ್ಡಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
Published On - 11:45 am, Fri, 9 October 20