
ಬೆಂಗಳೂರು: ರಾಜ್ಯದಲ್ಲಿ ನಡೀತಿರೋ ಎರಡು ಕ್ಷೇತ್ರಗಳ ಉಪಚುನಾವಣೆ ಮತದಾನ ಗರಿಗೆದರಿದೆ. ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೌಂಟ್ ಕಾರ್ಮೆಲ್ ಶಾಲೆ ಮತಗಟ್ಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ ಮತದಾನ ಮಾಡಿದ್ದಾರೆ.
ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಅಬ್ಬರದ ಪ್ರಚಾರ ಕೈಗೊಂಡಿದ್ದರು. ಸದ್ಯ ಮತದಾನ ನಡೆಯುತ್ತಿದ್ದು, ಗೆಲುವು ಯಾರದಾಗಬಹುದು, ದರ್ಶನ್ ಪ್ರಚಾರಕ್ಕೆ ಜಯ ಸಿಗುತ್ತದಾ? ಆರ್.ಆರ್. ನಗರ ಮತದಾರರು ಮುನಿರತ್ನರನ್ನ ಗೆಲ್ಲಿಸುತ್ತಾರಾ ಎಂಬ ಪ್ರಶ್ನೆಗಳಿಗೆ ಇನ್ನೊಂದು ವಾರದಲ್ಲಿ ತೆರೆ ಬೀಳಲಿದೆ.