ಮೈಸೂರಲ್ಲಿ ಬಂದ್ ಕಾವು; ಅರೆಬೆತ್ತಲೆ ಪ್ರತಿಭಟನೆ, ಟೈರ್​ಗೆ ಬೆಂಕಿ..

|

Updated on: Dec 08, 2020 | 1:01 PM

ವಿನೋಬನಗರದಲ್ಲಿ ಪ್ರತಿಭಟನಾಕಾರರು ತೆರೆದಿದ್ದ ಬಟ್ಟೆ ಮಳಿಗೆಗೆ ಮುತ್ತಿಗೆ ಹಾಕಿ, ಬಾಗಿಲು ಮುಚ್ಚಿಸಿದರು. ನೀವು ಹೊಟ್ಟೆಗೆ ಏನು ತಿನ್ನುತ್ತೀರಿ ಎಂದು ಅಂಗಡಿಯವರಿಗೆ ಬೈದಿದ್ದಾರೆ. ಇವರ ಒತ್ತಡಕ್ಕೆ ಮಣಿದ ಅಂಗಡಿಯವರು ಬಾಗಿಲು ಮುಚ್ಚಿದ್ದಾರೆ.

ಮೈಸೂರಲ್ಲಿ ಬಂದ್ ಕಾವು; ಅರೆಬೆತ್ತಲೆ ಪ್ರತಿಭಟನೆ, ಟೈರ್​ಗೆ ಬೆಂಕಿ..
ಮೈಸೂರಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ
Follow us on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಬಂದ್ ಬಿಸಿ ತುಸು ಹೆಚ್ಚಾಗಿಯೇ ಇದೆ. ಇಲ್ಲಿನ ಗನ್​ಹೌಸ್ ವೃತ್ತದಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಇನ್ನು ಜೆಎಸ್​ಎಸ್​ ಕಾಲೇಜಿನ ಬಳಿ ಹೋರಾಟಗಾರರು ಏಕಾಏಕಿ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಹಿನ್ನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766 ಟ್ರಾಫಿಕ್​ ಜಾಮ್ ಆಗಿತ್ತು. ಈ ವಾಹನ ದಟ್ಟಣೆಯಲ್ಲಿ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಪೊಲೀಸರು ಬರುತ್ತಿದ್ದಂತೆ ಈ ಪ್ರತಿಭಟನಾಕಾರರು ಕಾಲ್ಕಿತ್ತಿದ್ದಾರೆ.

ಮಳಿಗೆಗೆ ಮುತ್ತಿಗೆ
ಹಾಗೇ ವಿನೋಬನಗರದಲ್ಲಿ ಪ್ರತಿಭಟನಾಕಾರರು ತೆರೆದಿದ್ದ ಬಟ್ಟೆ ಮಳಿಗೆಗೆ ಮುತ್ತಿಗೆ ಹಾಕಿ, ಬಾಗಿಲು ಮುಚ್ಚಿಸಿದರು. ನೀವು ಹೊಟ್ಟೆಗೆ ಏನು ತಿನ್ನುತ್ತೀರಿ ಎಂದು ಅಂಗಡಿಯವರಿಗೆ ಬೈದಿದ್ದಾರೆ. ಇವರ ಒತ್ತಡಕ್ಕೆ ಮಣಿದ ಅಂಗಡಿಯವರು ಬಾಗಿಲು ಮುಚ್ಚಿದ್ದಾರೆ.

ಭಾರತ್​ ಬಂದ್ ಇದುವರೆಗೆ ಯಾವತ್ತೂ ಯಶಸ್ವಿಯಾಗಿಲ್ಲ.. ತಲೆಕೆಡಿಸಿಕೊಳ್ಳಬೇಡಿ: ಮುಖ್ಯಮಂತ್ರಿ ಯಡಿಯೂರಪ್ಪ

Published On - 12:08 pm, Tue, 8 December 20