ಜಲಾವೃತಗೊಂಡ ಕಟ್ಟಡದಲ್ಲೇ 3 ದಿನದಿಂದ ಸಿಲುಕಿಕೊಂಡ ಕಾರ್ಮಿಕರು, ಸಹಾಯಕ್ಕೆ ಬಾರದ ಅಧಿಕಾರಿಗಳು

|

Updated on: Oct 18, 2020 | 1:00 PM

ಕಲಬುರಗಿ: ಭೀಮಾ ನದಿ ಹಿನ್ನೀರಿನ ಉಪನದಿ ಬೋರಿ ನದಿ ನೆರೆಯಲ್ಲಿ ಸಿಲುಕಿಕೊಂಡು 17 ಕಾರ್ಮಿಕರ ಪರದಾಡುತ್ತಿರುವಂತ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಬಳುಂಡಗಿ ಬಳಿ ನಡೆದಿದೆ. ಭೀಮಾ ಉಪನದಿ ಬೋರಿ ನದಿ ಪ್ರವಾಹದಿಂದ ನಿರ್ಮಾಣ ಹಂತದ ಕಟ್ಟಡ ಜಲಾವೃತಗೊಂಡಿದೆ. ಮುಳುಗಿರುವ ಕಟ್ಟಡದ ಟೆರೇಸ್​ನ ಮೇಲೆಯೇ 17 ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಿಲುಕಿರುವವರೆಲ್ಲ ಜಾರ್ಖಂಡ್, ಬಾಗಲಕೋಟೆ ಮೂಲದ ಕಾರ್ಮಿಕರು. ಇವರು ಅಮರ್ಜ ಡ್ಯಾಂ, ಕೆರೆ ತುಂಬುವ ಕಾಮಗಾರಿ ಹಿನ್ನೆಲೆಯಲ್ಲಿ ಬಳುಂಡಗಿ ಜಾಕ್ವೆಲ್ ಪಕ್ಕದ ಕಟ್ಟಡದಲ್ಲೆ ನೆಲೆಸಿದ್ದರು. ಮಳೆ […]

ಜಲಾವೃತಗೊಂಡ ಕಟ್ಟಡದಲ್ಲೇ 3 ದಿನದಿಂದ  ಸಿಲುಕಿಕೊಂಡ ಕಾರ್ಮಿಕರು, ಸಹಾಯಕ್ಕೆ ಬಾರದ ಅಧಿಕಾರಿಗಳು
Follow us on

ಕಲಬುರಗಿ: ಭೀಮಾ ನದಿ ಹಿನ್ನೀರಿನ ಉಪನದಿ ಬೋರಿ ನದಿ ನೆರೆಯಲ್ಲಿ ಸಿಲುಕಿಕೊಂಡು 17 ಕಾರ್ಮಿಕರ ಪರದಾಡುತ್ತಿರುವಂತ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಬಳುಂಡಗಿ ಬಳಿ ನಡೆದಿದೆ.

ಭೀಮಾ ಉಪನದಿ ಬೋರಿ ನದಿ ಪ್ರವಾಹದಿಂದ ನಿರ್ಮಾಣ ಹಂತದ ಕಟ್ಟಡ ಜಲಾವೃತಗೊಂಡಿದೆ. ಮುಳುಗಿರುವ ಕಟ್ಟಡದ ಟೆರೇಸ್​ನ ಮೇಲೆಯೇ 17 ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಿಲುಕಿರುವವರೆಲ್ಲ ಜಾರ್ಖಂಡ್, ಬಾಗಲಕೋಟೆ ಮೂಲದ ಕಾರ್ಮಿಕರು.

ಇವರು ಅಮರ್ಜ ಡ್ಯಾಂ, ಕೆರೆ ತುಂಬುವ ಕಾಮಗಾರಿ ಹಿನ್ನೆಲೆಯಲ್ಲಿ ಬಳುಂಡಗಿ ಜಾಕ್ವೆಲ್ ಪಕ್ಕದ ಕಟ್ಟಡದಲ್ಲೆ ನೆಲೆಸಿದ್ದರು. ಮಳೆ ಪ್ರವಾಹದಿಂದ ಕಳೆದ 3 ದಿನದಿಂದ ಕಟ್ಟಡದಲ್ಲಿಯೇ ಸಿಲುಕಿಕೊಂಡಿದ್ದಾರೆ. ಇಷ್ಟು ದಿನ ಕಳೆದರೂ ಅವರ ಸಹಾಯಕ್ಕಾಗಿ ಯಾರು ಮುಂದಾಗಿಲ್ಲ.