ಎಂಟಿಬಿ ನಾಗರ ಹಾವಿನಂತಾಗಬಾರದು, ಮನುಷ್ಯನಾಗಬೇಕು -ಸಿದ್ದರಾಮಯ್ಯ

|

Updated on: Nov 25, 2019 | 12:29 PM

ಬೆಂಗಳೂರು ಗ್ರಾಮಾಂತರ: ಎಂಟಿಬಿ ನಾಗರಾಜ್​ ಒಂಥರಾ ಗೋಸುಂಬೆ, ಊಸರವಳ್ಳಿ. ಪ್ರಜಾಪ್ರಭುತ್ವದಲ್ಲಿ ಬಟ್ಟೆ ಬದಲಿಸಿದಂತೆ ಪಕ್ಷ ಬದಲಿಸಬಾರದು. ಪಕ್ಷಾಂತರ ಮಾಡಿದವರು ರಾಜಕೀಯದಲ್ಲಿ ಇರಬಾರದು ಎಂದು ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಆರ್ಥಿಕ ತಜ್ಞ ಎಂದು ಮಂತ್ರಿ ಮಾಡಿರಲಿಲ್ಲ:  ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಪರ ಪ್ರಚಾರದ ವೇಳೆ ಎಂಟಿಬಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಪಿಳ್ಳಪ್ಪನಂತಹ ಅಣ್ಣನಿಗೇ ನಾಗರಾಜ್​ ಮೋಸ ಮಾಡಿದ್ದಾರೆ. ಎಂಟಿಬಿ ನಾಗರಾಜ್ ನಾಗರ ಹಾವಿನಂತಾಗಬಾರದು, ಮನುಷ್ಯನಾಗಬೇಕು. ಎಂಟಿಬಿ ದೊಡ್ಡ […]

ಎಂಟಿಬಿ ನಾಗರ ಹಾವಿನಂತಾಗಬಾರದು, ಮನುಷ್ಯನಾಗಬೇಕು -ಸಿದ್ದರಾಮಯ್ಯ
Follow us on

ಬೆಂಗಳೂರು ಗ್ರಾಮಾಂತರ: ಎಂಟಿಬಿ ನಾಗರಾಜ್​ ಒಂಥರಾ ಗೋಸುಂಬೆ, ಊಸರವಳ್ಳಿ. ಪ್ರಜಾಪ್ರಭುತ್ವದಲ್ಲಿ ಬಟ್ಟೆ ಬದಲಿಸಿದಂತೆ ಪಕ್ಷ ಬದಲಿಸಬಾರದು. ಪಕ್ಷಾಂತರ ಮಾಡಿದವರು ರಾಜಕೀಯದಲ್ಲಿ ಇರಬಾರದು ಎಂದು ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಆರ್ಥಿಕ ತಜ್ಞ ಎಂದು ಮಂತ್ರಿ ಮಾಡಿರಲಿಲ್ಲ: 
ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಪರ ಪ್ರಚಾರದ ವೇಳೆ ಎಂಟಿಬಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಪಿಳ್ಳಪ್ಪನಂತಹ ಅಣ್ಣನಿಗೇ ನಾಗರಾಜ್​ ಮೋಸ ಮಾಡಿದ್ದಾರೆ. ಎಂಟಿಬಿ ನಾಗರಾಜ್ ನಾಗರ ಹಾವಿನಂತಾಗಬಾರದು, ಮನುಷ್ಯನಾಗಬೇಕು. ಎಂಟಿಬಿ ದೊಡ್ಡ ಆರ್ಥಿಕ ತಜ್ಞ ಎಂದು ನಾವು ಮಂತ್ರಿ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Published On - 8:09 pm, Sun, 24 November 19