
ರಾಯಚೂರು: ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾವಹಿಸದೆ ನಿರ್ಲಕ್ಷ್ಯವಹಿಸಿರುವ ಆರೋಪ ಕೇಳಿ ಬಂದಿದ್ದು, ಸಿಂಧನೂರು ತಹಶೀಲ್ದಾರ್ ಪಿಡಿಒಗಳಿಗೆ ನೋಟಿಸ್ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗ್ರಾ.ಪಂ.ಗಳಾದ ಗುಂಜಳ್ಳಿ, ಸಾಲಗುಂದ, ವಿರುಪಾಪುರ, ಗೊರೆಬಾಳ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ನೋಟಿಸ್ ನೀಡಲಾಗಿದೆ. ಸಿಂಧನೂರು ತಾಲೂಕಿನಾದ್ಯಂತ ಹಳ್ಳಿ ಹಳ್ಳಿಗಳಿಗೂ ಕೊರೊನಾ ಹಬ್ಬುತ್ತಿದೆ.
ಕ್ವಾರಂಟೈನ್ ಆದವರು ಬಿಂದಾಸಾಗಿ ಓಡಾಡ್ತಿದ್ರೂ ಪಿಡಿಓಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇವರ ಈ ನಿರ್ಲಕ್ಷ್ಯಕ್ಕೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಪಿಡಿಒಗಳಿಗೆ ಕಾರಣ ಕೇಳಿ ಸಿಂಧನೂರು ತಹಶೀಲ್ದಾರ ಮಂಜುನಾಥ್ ನೋಟಿಸ್ ನೀಡಿದ್ದಾರೆ.