ಸೋಂಕಿತನ ದೇಹವನ್ನು ಅಂತ್ಯಕ್ರಿಯೆ ಮಾಡಲು ಟ್ರ್ಯಾಕ್ಟರ್ ಓಡಿಸಿದ ವೈದ್ಯ
ಹೈದರಾಬಾದ್: ಆಸ್ಪತ್ರೆ ವೈದ್ಯರು ತೆರೆದ ಟ್ರಾಕ್ಟರ್ನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ದೇಹ ಸಾಗಿಸಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಯಲ್ಲಿ ನಡೆದಿದೆ. ಪೆದ್ದಪಲ್ಲಿ ಜಿಲ್ಲೆಯ ಜಿಲ್ಲಾ ವೈದ್ಯಕೀಯ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಪೆಂಡ್ಯಲಾ ಶ್ರೀರಾಮ್ ಅವರು ಭಾನುವಾರ ಕರ್ತವ್ಯದಲ್ಲಿದ್ದಾಗ ಕೋವಿಡ್ -19 ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಆಸ್ಪತ್ರೆಯಲ್ಲಿ ಯಾವುದೇ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ಪುರಸಭೆ ಅಧಿಕಾರಿಗಳು ಅವರಿಗೆ ಟ್ರ್ಯಾಕ್ಟರ್ ನೀಡಿದ್ರು. ಆದರೆ ಚಾಲಕ ವಾಹನ ಚಲಾಯಿಸಲು ನಿರಾಕರಿಸಿದ್ದರಿಂದ, ಸ್ವತಃ ವೈದ್ಯರೇ ವಾಹನವನ್ನು ಓಡಿಸಿ ತಾವೇ ಮುಂದೆ […]
ಹೈದರಾಬಾದ್: ಆಸ್ಪತ್ರೆ ವೈದ್ಯರು ತೆರೆದ ಟ್ರಾಕ್ಟರ್ನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ದೇಹ ಸಾಗಿಸಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಯಲ್ಲಿ ನಡೆದಿದೆ.
ಪೆದ್ದಪಲ್ಲಿ ಜಿಲ್ಲೆಯ ಜಿಲ್ಲಾ ವೈದ್ಯಕೀಯ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಪೆಂಡ್ಯಲಾ ಶ್ರೀರಾಮ್ ಅವರು ಭಾನುವಾರ ಕರ್ತವ್ಯದಲ್ಲಿದ್ದಾಗ ಕೋವಿಡ್ -19 ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಆಸ್ಪತ್ರೆಯಲ್ಲಿ ಯಾವುದೇ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ಪುರಸಭೆ ಅಧಿಕಾರಿಗಳು ಅವರಿಗೆ ಟ್ರ್ಯಾಕ್ಟರ್ ನೀಡಿದ್ರು.
ಆದರೆ ಚಾಲಕ ವಾಹನ ಚಲಾಯಿಸಲು ನಿರಾಕರಿಸಿದ್ದರಿಂದ, ಸ್ವತಃ ವೈದ್ಯರೇ ವಾಹನವನ್ನು ಓಡಿಸಿ ತಾವೇ ಮುಂದೆ ನಿಂತು ಮೃತ ಸೋಂಕಿತನ ಅಂತ್ಯಸಂಸ್ಕಾರ ಮಾಡಿದ್ದಾರೆ. ಮೊನ್ನೆ ನಿಜಾಮಾಬಾದ್ನಲ್ಲಿ ಆಟೋದಲ್ಲಿ ಕೊರೊನಾ ಸೋಂಕಿತನ ಶವ ರವಾನೆ ಮಾಡಲಾಗಿತ್ತು. ಇದೀಗ ಪೆದ್ದಪಲ್ಲಿಯಲ್ಲಿ ತೆರೆದ ಟ್ರಾಕ್ಟರ್ ನಲ್ಲಿ ಸೋಂಕಿತನ ಶವ ರವಾನೆ ಮಾಡುವಂತ ಪರಿಸ್ಥಿತಿ ಉಂಟಾಗಿದೆ.