ಕೊರೊನಾ ವೇಳೆ ಮನೆಯಲ್ಲಿದ್ದ ಬಾಲಕಿ ಮೇಲೆ ವೃದ್ಧನಿಂದ ರೇಪ್: ಗರ್ಭಿಣಿ ಪೋಷಕರಿಂದ ದೂರು, ಕಾಮುಕ ಅರೆಸ್ಟ್

ಅಪ್ರಾಪ್ತೆಯ ಮೇಲೆ 61 ವರ್ಷದ ವೃದ್ಧ ಅತ್ಯಾಚಾರವೆಸಗಿದ್ದು ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಕೊರೊನಾ ವೇಳೆ ಮನೆಯಲ್ಲಿದ್ದ ಬಾಲಕಿ ಮೇಲೆ ವೃದ್ಧನಿಂದ ರೇಪ್: ಗರ್ಭಿಣಿ ಪೋಷಕರಿಂದ ದೂರು, ಕಾಮುಕ ಅರೆಸ್ಟ್
ಕಾಮುಕ ವೆಂಕಟೇಶ್
ಆಯೇಷಾ ಬಾನು

Updated on: Dec 04, 2020 | 10:42 AM

ಮಂಡ್ಯ: ಅಪ್ರಾಪ್ತೆಯ ಮೇಲೆ 61 ವರ್ಷದ ವೃದ್ಧ ಅತ್ಯಾಚಾರವೆಸಗಿದ್ದು ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯದ ಗಾಂಧಿನಗರ ನಿವಾಸಿ ವೆಂಕಟೇಶ್ ಬಂಧಿತ ಆರೋಪಿ.

15 ವರ್ಷದ ಬಾಲಕಿ ಮೇಲೆ 61 ವರ್ಷದ ವೃದ್ಧ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಮಂಡ್ಯ ನಿವಾಸಿ ವೆಂಕಟೇಶ್ ಎಂಬ ವೃದ್ಧ ಈ ಕೃತ್ಯ ಎಸಗಿದ್ದು ಈತ ಪಕ್ಕದ ಮನೆಯ ಬಾಲಕಿಯ ಮೇಲೆ ಕಾಮುಕ ದೃಷ್ಟಿ ಬೀರಿದ್ದಾನೆ. ಬಾಲಕಿಯ ಪೋಷಕರು ಕೆಲಸಕ್ಕೆ ತೆರಳಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರೋದ್ರಿಂದ ಬಾಲಕಿ ಮನೆಯಲ್ಲೇ ಇದ್ದಳು. ಈ ಸಮಯವನ್ನು ಬಳಸಿಕೊಂಡ ಕಾಮುಕ ವೃದ್ಧ ಬಾಲಕಿಯ ಮನೆಗೆ ಹೋಗಿ ಆಕೆಯ ಮೇಲೆ ಎರಗಿದ್ದಾನೆ. ಬಳಿಕ ಈ ವಿಷಯ ಯಾರಿಗೂ ಹೇಳದಂತೆ ಪ್ರಾಣ ಬೆದರಿಕೆ ಹಾಕಿದ್ದಾನೆ.

ಬಾಲಕಿ ದೌರ್ಜನ್ಯದ ಬಗ್ಗೆ ಹೇಳಿದರೂ ಪೋಷಕರ ನಿರ್ಲಕ್ಷ್ಯ:
ಪಕ್ಕದ ಮನೆ ತಾತ ಕೆಟ್ಟ ದೃಷ್ಟಿಯಿಂದ ನೋಡ್ತಾರೆ, ಮೈಕೈ ಮುಟ್ಟುತ್ತಾರೆ ಎಂದು ಬಾಲಕಿ ದೌರ್ಜನ್ಯದ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಳು. ಆದರೆ ಆತ ಹಿರಿಯರು, ಬಾಲಕಿಯೇ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆಂದು ಪೋಷಕರು ಸುಮ್ಮನಾಗಿದ್ದರು.

ಬಾಲಕಿ ಗರ್ಭಿಣಿಯಾದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿದ್ದು ಕಾಮುಕ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಕೊಯ್ದ ಅಪ್ರಾಪ್ತ ಯುವಕ ಬಂಧನ..!

Published On - 10:40 am, Fri, 4 December 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us