ಅಮ್ಮನ ಅಗಲಿಕೆಯಿಂದ ಖಿನ್ನತೆಗೆ ಒಳಗಾದ ಮಗ ಆತ್ಮಹತ್ಯೆಗೆ ಶರಣು

ಧಾರವಾಡ: ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕವಲಗೇರಿ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಸುಂಕಣ್ಣನವರ್(28) ನೇಣಿಗೆ ಶರಣಾದ ಮಗ. ಐದು ತಿಂಗಳ ಹಿಂದೆ ತಾಯಿ ಮೃತಪಟ್ಟಿದ್ದರು. ತಾಯಿ ಮರಣದ ನಂತರ ಖಿನ್ನತೆಗೆ ಒಳಗಾದ ಮಹಾಂತೇಶ ನಿನ್ನೆ ತಡರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರನ್ನು ಸಾಕಲಾಗದೆ ಮನೆಯಿಂದ ಹೊರ ಹಾಕುವ ಮಕ್ಕಳನ್ನು ನೋಡಿದ್ದೇವೆ. ಆದ್ರೆ ತಾಯಿಯೇ ದೇವರು ಅವಳಿಲ್ಲದಿದ್ರೆ ಜೀವನವೇ ಇಲ್ಲ ಅಂತ ಮಗ ಆತ್ಮಹತ್ಯೆ […]

ಅಮ್ಮನ ಅಗಲಿಕೆಯಿಂದ ಖಿನ್ನತೆಗೆ ಒಳಗಾದ ಮಗ ಆತ್ಮಹತ್ಯೆಗೆ ಶರಣು

Updated on: Nov 01, 2020 | 12:01 PM

ಧಾರವಾಡ: ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕವಲಗೇರಿ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಸುಂಕಣ್ಣನವರ್(28) ನೇಣಿಗೆ ಶರಣಾದ ಮಗ.

ಐದು ತಿಂಗಳ ಹಿಂದೆ ತಾಯಿ ಮೃತಪಟ್ಟಿದ್ದರು. ತಾಯಿ ಮರಣದ ನಂತರ ಖಿನ್ನತೆಗೆ ಒಳಗಾದ ಮಹಾಂತೇಶ ನಿನ್ನೆ ತಡರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಷಕರನ್ನು ಸಾಕಲಾಗದೆ ಮನೆಯಿಂದ ಹೊರ ಹಾಕುವ ಮಕ್ಕಳನ್ನು ನೋಡಿದ್ದೇವೆ. ಆದ್ರೆ ತಾಯಿಯೇ ದೇವರು ಅವಳಿಲ್ಲದಿದ್ರೆ ಜೀವನವೇ ಇಲ್ಲ ಅಂತ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಪರೂಪದಲ್ಲಿ ಅಪರೂಪವಾಗಿದೆ.