ಹಾದಿ ತಪ್ಪಿಸುತ್ತಿದೆ ಆನ್ ಲೈನ್ ಶಿಕ್ಷಣ: ಖಿನ್ನತೆಗೆ ಒಳಗಾಗುತ್ತಿದ್ದಾರೆ ವಿದ್ಯಾರ್ಥಿನಿಯರು..
ಬೆಂಗಳೂರು: ಕೊರೊನಾದಿಂದಾಗಿ ಮಕ್ಕಳು ಶಾಲೆಗೆ ಬರಲಾಗದು. ಆದರೆ ಅವರ ಭವಿಷ್ಯಕ್ಕೆ ಕುತ್ತಾಗಬಾರದೆಂದು ಆನ್ಲೈನ್ ಕ್ಲಾಸ್ಗಳನ್ನು ಆರಂಭಿಸಲಾಯಿತು. ಆದರೆ ಆನ್ಲೈನ್ ಕ್ಲಾಸ್ ಸೃಷ್ಟಿಸಿರೋ ಅವಾಂತರಗಳು ಒಂದಲ್ಲಾ ಎರಡಲ್ಲಾ. ಬಡ ಪೋಷಕರಿಗೆ ಕಣ್ಣೀರು ಹಾಕಿಸುತ್ತಿದೆ. ಆನ್ಲೈನ್ ಕ್ಲಾಸ್ ಅಂತ ಮೊಬೈಲ್ ಹಿಡಿದು ಕೂರುವ ಮಕ್ಕಳು ಮೊಬೈಲ್ ಬಳಕೆಯಿಂದ ಹಾದಿ ತಪ್ಪುತ್ತಿದ್ದಾರೆ. ಮಕ್ಕಳು ಮೊಬೈಲ್ನಲ್ಲಿ ಏನ್ ಮಾಡ್ತಾರೆ ಪೋಷಕರಿಗೆ ಗೊತ್ತೇ ಆಗ್ತಿಲ್ಲ. ಆನ್ಲೈನ್ ಕ್ಲಾಸ್ ಅಂತಾ ನೆಗ್ಲೆಟ್ ಮಾಡಿದ್ರೆ ಪೋಷಕರ ಗಮನಕ್ಕೆ ಬರೋ ಅಷ್ಟರಲ್ಲಿ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರಂತೆ. ಪೋಷಕರಿಗೆ ಕಣ್ಣೀರು […]

ಬೆಂಗಳೂರು: ಕೊರೊನಾದಿಂದಾಗಿ ಮಕ್ಕಳು ಶಾಲೆಗೆ ಬರಲಾಗದು. ಆದರೆ ಅವರ ಭವಿಷ್ಯಕ್ಕೆ ಕುತ್ತಾಗಬಾರದೆಂದು ಆನ್ಲೈನ್ ಕ್ಲಾಸ್ಗಳನ್ನು ಆರಂಭಿಸಲಾಯಿತು. ಆದರೆ ಆನ್ಲೈನ್ ಕ್ಲಾಸ್ ಸೃಷ್ಟಿಸಿರೋ ಅವಾಂತರಗಳು ಒಂದಲ್ಲಾ ಎರಡಲ್ಲಾ. ಬಡ ಪೋಷಕರಿಗೆ ಕಣ್ಣೀರು ಹಾಕಿಸುತ್ತಿದೆ.
ಆನ್ಲೈನ್ ಕ್ಲಾಸ್ ಅಂತ ಮೊಬೈಲ್ ಹಿಡಿದು ಕೂರುವ ಮಕ್ಕಳು ಮೊಬೈಲ್ ಬಳಕೆಯಿಂದ ಹಾದಿ ತಪ್ಪುತ್ತಿದ್ದಾರೆ. ಮಕ್ಕಳು ಮೊಬೈಲ್ನಲ್ಲಿ ಏನ್ ಮಾಡ್ತಾರೆ ಪೋಷಕರಿಗೆ ಗೊತ್ತೇ ಆಗ್ತಿಲ್ಲ. ಆನ್ಲೈನ್ ಕ್ಲಾಸ್ ಅಂತಾ ನೆಗ್ಲೆಟ್ ಮಾಡಿದ್ರೆ ಪೋಷಕರ ಗಮನಕ್ಕೆ ಬರೋ ಅಷ್ಟರಲ್ಲಿ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರಂತೆ.
ಪೋಷಕರಿಗೆ ಕಣ್ಣೀರು ತರಿಸುತ್ತಿದೆ ಆನ್ಲೈನ್ ಕ್ಲಾಸ್! ಮಕ್ಕಳು ಶಾಲೆಗಾದ್ರೂ ಹೋಗ್ತಿಲ್ಲ. ಮನೆಯಲ್ಲೇ ಓದಕೊಳ್ಳೀ ಅಂತ ಟೀಚರ್ ಹೇಳಿದಂಗೆ ಆನ್ಲೈನ್ ಶಿಕ್ಷಣ ಪಡೆಯಲಿ ಅಂತಾ ಪೋಷಕರು ಮಕ್ಕಳಿಗೆ ಮೊಬೈಲ್ ನೀಡಿದ್ದಾರೆ. ಆದರೆ ಮಕ್ಕಳು ಕ್ಲಾಸ್ ಇಲ್ಲದಾಗ ಬೇರೆ ಬೇರೆ ಚಟುವಟಿಕೆ, ಟಿವಿ ಶೋ, ಡ್ಯಾನ್ಸ್, ಕಾಮಿಡಿ ಶೋಗಳನ್ನು ನೋಡುತ್ತಿದ್ದಾರೆ. ಅದನ್ನ ನೋಡಿ ಡ್ಯಾನ್ಸ್, ಕಾಮಿಡಿ ಕಲಿಯಲು ಮುಂದಾಗಿದ್ದಾರಂತೆ. ಅಲ್ಲದೆ ತಮ್ಮ ಡ್ಯಾನ್ಸ್ ವಿಡಿಯೋ ಮಾಡಿ ಇನ್ಸ್ಟಾ, FB ಗೆ ಹಾಕುತ್ತಿದ್ದಾರೆ. ಆದರೆ ಈ ವಿಡಿಯೋಗಳನ್ನ ಕಿಡಗೇಡಿಗಳ ಗುಂಪು ಡೌನ್ಲೋಡ್ ಮಾಡಿ ಕೊಂಡು ಟ್ರೋಲ್ ಮಾಡಿ ಅಸಭ್ಯವಾಗಿ ಚಿತ್ರೀಕರಿಸಿ ಹರಿ ಬಿಟ್ಟಿದ್ದಾರೆ.
ಮಕ್ಕಳ ನಂಬರ್ ಕಲೆಕ್ಟ್ ಮಾಡಿ ಕಿಡಿಗೇಡಿಗಳು ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ. ಇನ್ನೊಂದು ಶಾಕಿಂಗ್ ಅಂದ್ರೆ ಈ ದುಷ್ಕರ್ಮಿಗಳು ಲವ್ ಮಾಡು ಇಲ್ಲದಿದ್ರೆ ನಿಮ್ಮ ತಂದೆಗೆ ವಿಡಿಯೋ ಕಳಿಸ್ತೀವಿ ಅಂತಾ ಬೆದರಿಕೆ ಹಾಕ್ತಿದ್ದಾರೆ. ಹೇಳಿದ ಹಾಗೆ ಕೇಳದಿದ್ರೆ ಕಿಡ್ನ್ಯಾಪ್ ಮಾಡೋದಾಗಿಯೂ ಬೆದರಿಕೆ ಹಾಕ್ತಿದ್ದಾರೆ.
‘ಆನ್ಲೈನ್’ನಿಂದ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಮಕ್ಕಳು: ಇದೇ ರೀತಿಯ ಸಮಸ್ಯೆಗೆ ಒಳಗಾಗಿ ಸಂಜಯನಗರ ವಿದ್ಯಾರ್ಥಿನಿ ಸುಮಾರು 1ವಾರದಿಂದ ಮಾನಸಿಕ ಸಮಸ್ಯೆ ಎದುರಿಸಿದ್ದಾರೆ. ರಾತ್ರಿ 2 ಗಂಟೆಗೆ ಮನೆಯಿಂದ ಹೊರಬರುವಂತೆ ಕಿಡಿಗೇಡಿಗಳು ಸತಾಯಿಸಿದ್ದಾರೆ. ಬರದೇ ಹೋದ್ರೆ ಕಿಡ್ನ್ಯಾಪ್ ಮಾಡೋದಾಗಿ ಭಯ ಹುಟ್ಟಿಸಿದ್ದಾರೆ. ಕೊನೆಗೆ ವಿದ್ಯಾರ್ಥಿನಿ ಮನೆಯಿಂದ ಹೊರಬರುವಾಗ ಧೈರ್ಯ ಮಾಡಿ ಪೋಷಕರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾಳೆ. ಬಳಿಕ ಪೋಷಕರು ಕಿಡಿಗೇಡಿಗಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನೊಂದ ಪೋಷಕರು ಆನ್ಲೈನ್ ಕ್ಲಾಸ್ ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ.