ಸಿರಿಮನೆ ಜಲಪಾತದಲ್ಲಿ ಮುಳುಗಿ ಯುವಕ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಚಿಕ್ಕಮಗಳೂರು: ಜಲಪಾತದಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಡೆದಿದೆ. ಕಳಸ ಸಮೀಪದ ಅಬ್ಬುಗುಡಿಗೆಯ ಸಿರಿಮನೆ ಫಾಲ್ಸ್ನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ. ಗುತ್ಯಡ್ಕ ಶ್ರೀನಿವಾಸ ಗೌಡ ಎಂಬವರ ಪುತ್ರ 16 ವರ್ಷದ ವಂಶಿತ್ ಸಾವನ್ನಪ್ಪಿರುವ ದುರ್ದೈವಿ. ಐದು ಮಂದಿ ಗೆಳೆಯರ ಜೊತೆ ಫಾಲ್ಸ್ಗೆ ಹೋಗಿದ್ದಾಗ ದುರಂತ ಸಂಭವಿಸಿದೆ. ಸುಮಾರು ಹತ್ತರಿಂದ ಹನ್ನೆರಡು ಅಡಿ ನೀರಿದ್ದು, ಆಳವನ್ನು ಲೆಕ್ಕಿಸದೇ ನೀರಿಗೆ ಇಳಿದಿದ್ದ ವಂಶಿತ್ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಮೇಲೆ ಬರಲು ಇನ್ನಿಲ್ಲದ ಪ್ರಯತ್ನ […]

ಚಿಕ್ಕಮಗಳೂರು: ಜಲಪಾತದಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಡೆದಿದೆ. ಕಳಸ ಸಮೀಪದ ಅಬ್ಬುಗುಡಿಗೆಯ ಸಿರಿಮನೆ ಫಾಲ್ಸ್ನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ.
ಗುತ್ಯಡ್ಕ ಶ್ರೀನಿವಾಸ ಗೌಡ ಎಂಬವರ ಪುತ್ರ 16 ವರ್ಷದ ವಂಶಿತ್ ಸಾವನ್ನಪ್ಪಿರುವ ದುರ್ದೈವಿ. ಐದು ಮಂದಿ ಗೆಳೆಯರ ಜೊತೆ ಫಾಲ್ಸ್ಗೆ ಹೋಗಿದ್ದಾಗ ದುರಂತ ಸಂಭವಿಸಿದೆ. ಸುಮಾರು ಹತ್ತರಿಂದ ಹನ್ನೆರಡು ಅಡಿ ನೀರಿದ್ದು, ಆಳವನ್ನು ಲೆಕ್ಕಿಸದೇ ನೀರಿಗೆ ಇಳಿದಿದ್ದ ವಂಶಿತ್ ನೀರಿನಲ್ಲಿ ಮುಳುಗಿದ್ದಾನೆ.
ಈ ವೇಳೆ ಮೇಲೆ ಬರಲು ಇನ್ನಿಲ್ಲದ ಪ್ರಯತ್ನ ಮಾಡಿದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸ್ನೇಹಿತರ ಕಣ್ಣೆದುರೇ ಯುವಕ ಮೃತಪಟ್ಟಿದ್ದಾನೆ. ಈ ಸಂದರ್ಭದಲ್ಲಿ ಕೆಲ ಪ್ರವಾಸಿಗರು ಕೂಡ ಅಲ್ಲೇ ಇದ್ರೂ ಮುಳುಗಿದ ಯುವಕನನ್ನ ಬದುಕಿಸಲು ಸಾಧ್ಯವಾಗಿಲ್ಲ. ಸುದ್ದಿ ತಿಳಿದ ಪೋಷಕರು ಜಲಪಾತದ ಬಳಿ ಬಂದು ಕಣ್ಣೀರು ಹಾಕಿದ್ರು.
ಈ ಜಲಪಾತ ಖಾಸಗಿ ವ್ಯಕ್ತಿಯೊಬ್ಬರ ತೋಟದಲ್ಲಿ ಹರಿಯುತ್ತಿದ್ದರಿಂದ ಪ್ರವಾಸಿಗರು ಫಾಲ್ಸ್ಗೆ ಬರಬೇಕಾದರೆ ಭಾರೀ ಮೊತ್ತವನ್ನು ಪಾವತಿಸಿ ಬರಬೇಕಾಗಿತ್ತಂತೆ. ಇದನ್ನು ಸ್ಥಳೀಯರು ಪ್ರಶ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲದೇ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಜಲಪಾತಕ್ಕೆ ಪ್ರವಾಸಿಗರನ್ನು ಬಿಡುತ್ತಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳದಿದ್ರೂ ಕೂಡ ಸಂಬಂಧಪಟ್ಟ ಇಲಾಖೆಯವರು ಕಣ್ಮುಚ್ಚಿ ಕುಳಿತ ಪರಿಣಾಮವೇ ಇವತ್ತಿನ ದುರಂತಕ್ಕೆ ಕಾರಣ ಅಂತಾ ಸಂಬಂಧಿಕರು, ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.




