ಪ್ರತ್ಯೇಕ ತುಳು ರಾಜ್ಯಕ್ಕೆ ಗಲಭೆ ಮಾಡಿ -ಸಾಹಿತ್ಯ ಅಕಾಡೆಮಿ ಅಧ್ಯಕ್ಷನ ಆಡಿಯೋ ವೈರಲ್..
ಮಂಗಳೂರು: ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಿಂದಲೇ ಪ್ರಚೋದನೆಯ ಮಾತು ಕೇಳಿ ಬಂದಿದೆ. ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಪ್ರತ್ಯೇಕ ತುಳು ರಾಜ್ಯಕ್ಕೆ ಗಲಭೆ ಮಾಡಿ ಎಂದಿರುವ ಆಡಿಯೋ ಈಗ ವೈರಲ್ ಆಗಿದೆ. ಈಗ ಈ ಆಡಿಯೋ ವೈರಲ್ ಆಗಿದ್ದು ಗೊಂದಲಕ್ಕೆ ಕಾರಣವಾಗಿದೆ. ಪ್ರತ್ಯೇಕ ತುಳು ರಾಜ್ಯಕ್ಕಾಗಿ ಎಲ್ಲೆಡೆ ಹೋರಾಟ ಆಗಬೇಕು. ದೊಡ್ಡಮಟ್ಟದಲ್ಲಿ ಬ್ಲಾಸ್ಟ್ ಮಾಡಿ, ಟೈರ್‌ಗಳಿಗೆ ಬೆಂಕಿ ಹಚ್ಚಬೇಕು. ಕೇಂದ್ರ ಸಚಿವ ಸದಾನಂದಗೌಡ, ನಳಿನ್‌ಕುಮಾರ್ ಸೇರಿ ರಾಜಕೀಯ ನಾಯಕರಿಗೆ ಬೈಯ್ಯಬೇಕು. ರಾಜ್ಯದ ಮೂಲೆಮೂಲೆಯಲ್ಲೂ ತುಳುರಾಜ್ಯ ಹೋರಾಟ ಆಗಬೇಕು. […]

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಿಂದಲೇ ಪ್ರಚೋದನೆಯ ಮಾತು ಕೇಳಿ ಬಂದಿದೆ. ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಪ್ರತ್ಯೇಕ ತುಳು ರಾಜ್ಯಕ್ಕೆ ಗಲಭೆ ಮಾಡಿ ಎಂದಿರುವ ಆಡಿಯೋ ಈಗ ವೈರಲ್ ಆಗಿದೆ. ಈಗ ಈ ಆಡಿಯೋ ವೈರಲ್ ಆಗಿದ್ದು ಗೊಂದಲಕ್ಕೆ ಕಾರಣವಾಗಿದೆ.
ಪ್ರತ್ಯೇಕ ತುಳು ರಾಜ್ಯಕ್ಕಾಗಿ ಎಲ್ಲೆಡೆ ಹೋರಾಟ ಆಗಬೇಕು. ದೊಡ್ಡಮಟ್ಟದಲ್ಲಿ ಬ್ಲಾಸ್ಟ್ ಮಾಡಿ, ಟೈರ್‌ಗಳಿಗೆ ಬೆಂಕಿ ಹಚ್ಚಬೇಕು. ಕೇಂದ್ರ ಸಚಿವ ಸದಾನಂದಗೌಡ, ನಳಿನ್‌ಕುಮಾರ್ ಸೇರಿ ರಾಜಕೀಯ ನಾಯಕರಿಗೆ ಬೈಯ್ಯಬೇಕು. ರಾಜ್ಯದ ಮೂಲೆಮೂಲೆಯಲ್ಲೂ ತುಳುರಾಜ್ಯ ಹೋರಾಟ ಆಗಬೇಕು. ಆಗ ನಮ್ಮನ್ನು ಸಂಧಾನಕ್ಕೆ ಕರೆದು ಸರ್ಕಾರದವರು ಮಾತನಾಡ್ತಾರೆ. ಆಗ ನಾವು ಹೋರಾಟಗಾರರನ್ನ ಸಮಾಧಾನಿಸಲು ಬೇರೆ ದಾರಿ ಇಲ್ಲ ಎನ್ನುತ್ತೇವೆ. ತುಳು ರಾಜ್ಯ ಘೋಷಣೆ ಮಾಡಿದರಷ್ಟೇ ಸಮಾಧಾನ ಆಗ್ತಾರೆ ಅಂತೇವೆ ಎಂದು ತುಳುವಿನಲ್ಲಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಈ ಆಡಿಯೋವನ್ನು ಸ್ವತಃ ತುಳುನಾಡು ಟ್ರಸ್ಟ್ ಸ್ಥಾಪಕಾಧ್ಯಕ್ಷರೇ ವೈರಲ್ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವಿದ್ದು ಒಂದು ವೇಳೆ ಗಲಭೆ ನೆಡೆದ್ರೆ ಟ್ರಸ್ಟ್ ಮೇಲೆ ಆರೋಪ ಬರುತ್ತೆ ಅಂತ ಆಡಿಯೋ ರಿಲೀಸ್ ಮಾಡಲಾಗಿದೆ ಎಂದು ತುಳುನಾಡು ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್ ಉಳ್ಳಾಲ್ ಹೇಳಿದ್ದಾರೆ.
Published On - 1:34 pm, Sun, 1 November 20




