ತಂದೆಯ ಅಸ್ಥಿ ಬಿಡಲು ನದಿ ನೀರಿಗಿಳಿದ ಮಗ ನೀರುಪಾಲು

ಬಾಗಲಕೋಟೆ: ತಂದೆಯ ಅಸ್ಥಿಯನ್ನು ಬಿಡಲು ಹೋಗಿದ್ದ ಮಗ ನೀರುಪಾಲಾಗಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಚೋಳಚಗುಡ್ಡ ಬಳಿಯ ಮಲಪ್ರಭಾ ನದಿಯಲ್ಲಿ ನಡೆದಿದೆ. ಮಹಾಂತೇಶ್ ಬಿ ಯಾದವ್(45) ನೀರು ಪಾಲಾದ ವ್ಯಕ್ತಿ. ಗದಗ ಜಿಲ್ಲೆಯ ಗಜೇಂದ್ರಗಢ ನಿವಾಸಿ ಮಹಾಂತೇಶ್ ಹನ್ನೊಂದು‌ ದಿನದ ಕಾರ್ಯ ಹಿನ್ನೆಲೆಯಲ್ಲಿ ತಮ್ಮ ತಂದೆ ಭೀಮಣ್ಣ ಯಾದವ್‌‌‌ ಅವರ ಅಸ್ಥಿ ಬಿಡಲು ಸಹೋದರರ ಜೊತೆ ಬಂದಿದ್ದರು. ಹೀಗಾಗಿ ಮಲಪ್ರಭಾ ನದಿಗೆ ಇಳಿದ್ರು. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರ. ಬಾದಾಮಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ […]

ತಂದೆಯ ಅಸ್ಥಿ ಬಿಡಲು ನದಿ ನೀರಿಗಿಳಿದ ಮಗ ನೀರುಪಾಲು

Updated on: Oct 28, 2020 | 3:59 PM

ಬಾಗಲಕೋಟೆ: ತಂದೆಯ ಅಸ್ಥಿಯನ್ನು ಬಿಡಲು ಹೋಗಿದ್ದ ಮಗ ನೀರುಪಾಲಾಗಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಚೋಳಚಗುಡ್ಡ ಬಳಿಯ ಮಲಪ್ರಭಾ ನದಿಯಲ್ಲಿ ನಡೆದಿದೆ. ಮಹಾಂತೇಶ್ ಬಿ ಯಾದವ್(45) ನೀರು ಪಾಲಾದ ವ್ಯಕ್ತಿ.

ಗದಗ ಜಿಲ್ಲೆಯ ಗಜೇಂದ್ರಗಢ ನಿವಾಸಿ ಮಹಾಂತೇಶ್ ಹನ್ನೊಂದು‌ ದಿನದ ಕಾರ್ಯ ಹಿನ್ನೆಲೆಯಲ್ಲಿ ತಮ್ಮ ತಂದೆ ಭೀಮಣ್ಣ ಯಾದವ್‌‌‌ ಅವರ ಅಸ್ಥಿ ಬಿಡಲು ಸಹೋದರರ ಜೊತೆ ಬಂದಿದ್ದರು.

ಹೀಗಾಗಿ ಮಲಪ್ರಭಾ ನದಿಗೆ ಇಳಿದ್ರು. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರ. ಬಾದಾಮಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಗರಾಳ ಎಸ್.ಪಿ ಗ್ರಾಮದ ಬಳಿ ಮಹಾಂತೇಶ ಶವವನ್ನು ಹೊರ ತೆಗೆದಿದ್ದಾರೆ.

Published On - 2:40 pm, Wed, 28 October 20