ಮಳೆ ಅವಾಂತರಕ್ಕೆ SSLC ವಿದ್ಯಾರ್ಥಿಗಳ ಪರದಾಟ

|

Updated on: Jul 02, 2020 | 9:02 AM

ಕಲಬುರಗಿ: ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಭಾರಿ ಮಳೆಯಿಂದಾಗಿ ಸೇತುವೆ ಕಿತ್ತು ಹೋಗಿದೆ. ಇದರಿಂದ SSLC ಪರೀಕ್ಷೆ ಬರೆಯಲು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಕಿತ್ತು ಹೋದ ಸೇತುವೆ SSLC ಪರೀಕ್ಷಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಪಟ್ಟಣದ ಹೊರವಲಯದಲ್ಲಿರುವ ಸೇತುವೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಈಗ ಇದು ಕಿತ್ತು ಹೋಗಿರುವುದರಿಂದ ವಿದ್ಯಾರ್ಥಿಗಳು ಎಕ್ಸಾಂ ಸೆಂಟರ್​ಗೆ ಹೋಗಲು ಕಷ್ಟವಾಗಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ […]

ಮಳೆ ಅವಾಂತರಕ್ಕೆ SSLC ವಿದ್ಯಾರ್ಥಿಗಳ ಪರದಾಟ
Follow us on

ಕಲಬುರಗಿ: ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಭಾರಿ ಮಳೆಯಿಂದಾಗಿ ಸೇತುವೆ ಕಿತ್ತು ಹೋಗಿದೆ. ಇದರಿಂದ SSLC ಪರೀಕ್ಷೆ ಬರೆಯಲು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಕಿತ್ತು ಹೋದ ಸೇತುವೆ SSLC ಪರೀಕ್ಷಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು.

ಪಟ್ಟಣದ ಹೊರವಲಯದಲ್ಲಿರುವ ಸೇತುವೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಈಗ ಇದು ಕಿತ್ತು ಹೋಗಿರುವುದರಿಂದ ವಿದ್ಯಾರ್ಥಿಗಳು ಎಕ್ಸಾಂ ಸೆಂಟರ್​ಗೆ ಹೋಗಲು ಕಷ್ಟವಾಗಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಕಬ್ಬಿಣದ ರಾಡ್ ಹಾಕಿ ಅದರ ಮೇಲೆ ಹಗ್ಗಕಟ್ಟಿ ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತಿದೆ.