ಕೊರೊನಾ ಸೋಂಕಿತರ ಸಮಾಧಿಯನ್ನು ಅಗೆಯುತ್ತಿವೆ ಬೀದಿ ನಾಯಿಗಳು, ಎಲ್ಲಿ?!

ದಾವಣಗೆರೆ: ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ವಿಚಾರವಾಗಿ ರಾಜ್ಯದ ಹಲವೆಡೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅದು ಸೋಂಕಿನ ಬಗ್ಗೆ ಇರುವ ಭೀತಿಯಿಂದಲೋ ಅಥವಾ ಸೂಕ್ತ ತಿಳುವಳಿಕೆ ಇಲ್ಲದಿರುವುದಕ್ಕೋ ಗೊತ್ತಿಲ್ಲ. ಅಂತೆಯೇ, ಇಂಥದ್ದೇ ಒಂದು ಪ್ರತಿಭಟನೆ ಜಿಲ್ಲೆಯ SOG ಕಾಲೋನಿಯಲ್ಲಿ ನಡೆದಿದೆ. ‘ಮೃತ ಸೋಂಕಿತರ ಅಂತ್ಯಕ್ರಿಯೆಯನ್ನ ಇಲ್ಲಿ ಮಾಡಿದ್ದು ಸರಿಯೇ..?’ ಕೊರೊನಾದಿಂದ ಮೃತಪಟ್ಟ ನಾಲ್ವರು ಸೋಂಕಿತರ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತವು ಇತ್ತೀಚೆಗೆ ಕಾಲೋನಿಯ ರುದ್ರಭೂಮಿಯಲ್ಲಿ ನೆರವೇರಿಸಿದ್ದರು. ಹೀಗಾಗಿ, ಕಾಲೋನಿಯ ನಿವಾಸಿಗಳು ಇದರ ವಿರುದ್ಧ ಇಂದು ಭಾರಿ ಪ್ರತಿಭಟನೆ ನಡೆಸಿದರು. ರುದ್ರಭೂಮಿಯ ಮುಂಭಾಗದಲ್ಲಿ […]

ಕೊರೊನಾ ಸೋಂಕಿತರ ಸಮಾಧಿಯನ್ನು ಅಗೆಯುತ್ತಿವೆ ಬೀದಿ ನಾಯಿಗಳು, ಎಲ್ಲಿ?!
Updated By:

Updated on: Jul 06, 2020 | 3:34 PM

ದಾವಣಗೆರೆ: ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ವಿಚಾರವಾಗಿ ರಾಜ್ಯದ ಹಲವೆಡೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅದು ಸೋಂಕಿನ ಬಗ್ಗೆ ಇರುವ ಭೀತಿಯಿಂದಲೋ ಅಥವಾ ಸೂಕ್ತ ತಿಳುವಳಿಕೆ ಇಲ್ಲದಿರುವುದಕ್ಕೋ ಗೊತ್ತಿಲ್ಲ. ಅಂತೆಯೇ, ಇಂಥದ್ದೇ ಒಂದು ಪ್ರತಿಭಟನೆ ಜಿಲ್ಲೆಯ SOG ಕಾಲೋನಿಯಲ್ಲಿ ನಡೆದಿದೆ.

‘ಮೃತ ಸೋಂಕಿತರ ಅಂತ್ಯಕ್ರಿಯೆಯನ್ನ ಇಲ್ಲಿ ಮಾಡಿದ್ದು ಸರಿಯೇ..?’
ಕೊರೊನಾದಿಂದ ಮೃತಪಟ್ಟ ನಾಲ್ವರು ಸೋಂಕಿತರ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತವು ಇತ್ತೀಚೆಗೆ ಕಾಲೋನಿಯ ರುದ್ರಭೂಮಿಯಲ್ಲಿ ನೆರವೇರಿಸಿದ್ದರು. ಹೀಗಾಗಿ, ಕಾಲೋನಿಯ ನಿವಾಸಿಗಳು ಇದರ ವಿರುದ್ಧ ಇಂದು ಭಾರಿ ಪ್ರತಿಭಟನೆ ನಡೆಸಿದರು.

ರುದ್ರಭೂಮಿಯ ಮುಂಭಾಗದಲ್ಲಿ ಪ್ರತಿಭಟಿಸಿದ ಸ್ಥಳೀಯರು ರಾತ್ರೋರಾತ್ರಿ ಸೋಂಕಿತರ ಶವಗಳನ್ನು ಜಿಲ್ಲಾಡಳಿತವು ದಫನ್ ಮಾಡಿದೆ. SOG ಕಾಲೋನಿಯಲ್ಲಿ ಇದುವರೆಗೂ ಯಾರಿಗೂ ಸೋಂಕು ತಗಲಿಲ್ಲ. ಹೀಗಿರುವಾಗ ಸೋಂಕಿತರ ಮೃತದೇಹವನ್ನು ರಾತ್ರೋರಾತ್ರಿ ದಫನ್ ಮಾಡಿರೋದು ಎಷ್ಟು ಸರಿ ಎಂದು ನಗರ ಪಾಲಿಕೆ ಮತ್ತು ಜಿಲ್ಲಾಡಳಿತವನ್ನ ಪ್ರಶ್ನಿಸಿದ್ದಾರೆ.

ಸೋಂಕಿತರ ಸಮಾಧಿಯನ್ನು ಅಗೆಯುತ್ತಿವೆಯಂತೆ ಬೀದಿ ನಾಯಿಗಳು..!

ಜೊತೆಗೆ, ಬೀದಿ ನಾಯಿಗಳು ಸೋಂಕಿತರ ಸಮಾಧಿಗಳನ್ನ ಅಗೆಯುತ್ತಿದ್ದು ನಂತರ ಜನ ವಸತಿ ಪ್ರದೇಶದ ಕಡೆ ಸಹ ಬರುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

Published On - 3:13 pm, Mon, 6 July 20