AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡಿಲು ಬಡಿತ ಹೆಚ್ಚಾಗಿದೆ.. ಏನು ಮಾಡಬೇಕು, ಏನು ಮಾಡಬಾರದು?

ದೇಶಕ್ಕೆ ಮುಂಗಾರು ಕಾಲಿಟ್ಟಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಇಷ್ಟು ದಿನ ಬೇಸಿಗೆಯ ಸುಡು ಬಿಸಿಲು ಮತ್ತು ಲಾಕ್​ಡೌನ್​ನಿಂದ ಮನೆಯಲ್ಲೇ ಕಾಲಕಳೆಯುತ್ತಿದ್ದ ಜನರಿಗೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಮನಸ್ಸಿಗೆ ಮುದ ನೀಡಿದೆ. ಆದರೆ, ಮಳೆಯ ಸೊಬಗನ್ನು ಎಂಜಾಯ್​ ಮಾಡಲು ಮನೆಯಿಂದ ಹೊರ ಹೋಗುವ ಮುನ್ನ ಜೋಕೆ. ಹಾಗೆಯೇ, ನಮ್ಮ ರೈತಾಪಿ ವರ್ಗವೂ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ನರಳಾಡುವುದು ಸಾಮಾನ್ಯ. ಸಿಡಿಲಿಗೆ ಹೆಚ್ಚು ಬಲಿಯಾಗುವವರು ತೋಟ-ಹೊಲಗಳಲ್ಲಿ ಬಟಾಬಯಲಿನಲ್ಲಿರುವ ರೈತರೇ! ಯಾಕಂದ್ರೆ, ದೇಶದೆಲ್ಲೆಡೆ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆ […]

ಸಿಡಿಲು ಬಡಿತ ಹೆಚ್ಚಾಗಿದೆ.. ಏನು ಮಾಡಬೇಕು, ಏನು ಮಾಡಬಾರದು?
Follow us
KUSHAL V
| Updated By:

Updated on:Jul 06, 2020 | 3:01 PM

ದೇಶಕ್ಕೆ ಮುಂಗಾರು ಕಾಲಿಟ್ಟಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಇಷ್ಟು ದಿನ ಬೇಸಿಗೆಯ ಸುಡು ಬಿಸಿಲು ಮತ್ತು ಲಾಕ್​ಡೌನ್​ನಿಂದ ಮನೆಯಲ್ಲೇ ಕಾಲಕಳೆಯುತ್ತಿದ್ದ ಜನರಿಗೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಮನಸ್ಸಿಗೆ ಮುದ ನೀಡಿದೆ. ಆದರೆ, ಮಳೆಯ ಸೊಬಗನ್ನು ಎಂಜಾಯ್​ ಮಾಡಲು ಮನೆಯಿಂದ ಹೊರ ಹೋಗುವ ಮುನ್ನ ಜೋಕೆ. ಹಾಗೆಯೇ, ನಮ್ಮ ರೈತಾಪಿ ವರ್ಗವೂ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ನರಳಾಡುವುದು ಸಾಮಾನ್ಯ. ಸಿಡಿಲಿಗೆ ಹೆಚ್ಚು ಬಲಿಯಾಗುವವರು ತೋಟ-ಹೊಲಗಳಲ್ಲಿ ಬಟಾಬಯಲಿನಲ್ಲಿರುವ ರೈತರೇ!

ಯಾಕಂದ್ರೆ, ದೇಶದೆಲ್ಲೆಡೆ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆ ಸುರಿಯಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗಾಗಿ, ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು (National Disaster Management Authority) ಸಾರ್ವಜನಿಕರ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ಸಿಡಿಲು ಮತ್ತು ಮಿಂಚಿನ ಆರ್ಭಟದ ವೇಳೆ ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಡುಗಡೆ ಮಾಡಿದೆ.

ಅಂತೆಯೇ ನಿಮ್ಮ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗುಡುಗು ಮಳೆ ಸಂಭವಿಸುವಂತಿದ್ದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ. 1. ಮನೆಯಲ್ಲಿರುವ ಎಲ್ಲಾ ವಿದ್ಯುತ್​ ಉಪಕರಣಗಳ ಬಂದ್​ ಮಾಡಿ ಅವುಗಳ ಪ್ಲಗ್​ಗಳನ್ನ ಸಾಕೆಟ್​ನಿಂದ ಬಿಚ್ಚಿಡಿ 2. ಗುಡುಗಿನ ವೇಳೆ ಲ್ಯಾಂಡ್​ಲೈನ್​ ಫೋನ್​ಗಳನ್ನ ಬಳಸಬೇಡಿ 3. ಯಾವುದೇ ಕಬ್ಬಿಣದ ಸಾಮಾನು ಮುಟ್ಟಬೇಡಿ 4. ಹರಿಯುವ ನೀರನ್ನು ಬಳಸದಿರಿ 5. ಸುರಿವ ಮಳೆಯಿಂದ ತಪ್ಪಿಸಿಕೊಳ್ಳಲು ಮರಗಳ ಕೆಳಗಡೆ ಆಶ್ರಯ ಪಡೆಯಬೇಡಿ 6. ಗುಂಪುಗುಂಪಾಗಿ ನಿಲ್ಲದೆ, ಏಕಾಂಗಿಯಾಗಿ ನಿಲ್ಲುವುದು ಸೂಕ್ತ 7. ಉಕ್ಕು ಅಥವಾ ತಗಡಿನ ಶೀಟುಗಳಿರುವ ಮೇಲ್ಛಾವಣಿಗಳಿಂದ ದೂರವಿರಿ 8. ಯಾವುದೇ ಲೋಹದ ವಸ್ತುಗಳನ್ನ ಮುಟ್ಟಬೇಡಿ 9. ವಿದ್ಯುತ್​ ಮತ್ತು ಟೆಲಿಫೋನ್​​ ತಂತಿಗಳಿಂದ ದೂರವಿರಿ 10. ಆದಷ್ಟು ಮನೆಯೊಳಗೆ ಅಥವಾ ಕಟ್ಟಡ ಒಳಗೆ ಇರುವುದು ಸೂಕ್ತ 11. ಒಂದು ವೇಳೆ ಆಚೆಯಿದ್ದರೆ ನೆಲದ ಮೇಲೆ ಕೂರಬೇಡಿ

ಈ ಮೇಲ್ಕಂಡ ಕ್ರಮಗಳನ್ನು ಕೈಗೊಂಡರೆ ಯಾವುದೇ ಪ್ರಾಣಾಪಾಯವು ಎದುರಾಗೋದಿಲ್ಲ ಎಂದು ಪ್ರಾಧಿಕಾರವು ಹೇಳಿದೆ.

Published On - 2:51 pm, Mon, 6 July 20

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
Weekly Horoscope: ಮೇ 05 ರಿಂದ 11 ರವರೆಗಿನ ವಾರ ಭವಿಷ್ಯ
Weekly Horoscope: ಮೇ 05 ರಿಂದ 11 ರವರೆಗಿನ ವಾರ ಭವಿಷ್ಯ
Daily Devotional: ಗಂಗಾ ಸಪ್ತಮಿಯ ಆಚರಣೆ ಮತ್ತು ಮಹತ್ವ ತಿಳಿಯಿರಿ
Daily Devotional: ಗಂಗಾ ಸಪ್ತಮಿಯ ಆಚರಣೆ ಮತ್ತು ಮಹತ್ವ ತಿಳಿಯಿರಿ