ಬಂದಾ ನೋಡಿ ರಿಯಲ್ ಲೈಫ್ ಚುಲ್ ಬುಲ್ ಪಾಂಡೆ ಪೊಲೀಸ್! ಎಲ್ಲಿ?
ನೀವು ಎಂಥೆಂಥ ಪೊಲೀಸರನ್ನು ನೋಡಿರಬಹುದು. ಆದ್ರೆ, ಯಾರೂ ಈ ಪೊಲೀಸ್ ಥರ ಇಲ್ಲ. ಹೆಸರು ಭಗವತ್ ಪಾಂಡೆ. ವೃತ್ತಿಯಲ್ಲಿ ಪೊಲೀಸ್ ಸುಬೇದಾರ್. ಕೊರೊನಾ ಲಾಕ್ಡೌನ್ ಕಾಲಕ್ಕೆ ಇವರು ಕೈಗೊಂಡ ಸುರಕ್ಷತಾ ಕ್ರಮ ಮಾತ್ರ ಎಲ್ಲರನ್ನು ಇಂಪ್ರೆಸ್ ಮಾಡಿದೆ. ಅವರ ಚಟ್ ಫಟ್ ಡೈಲಾಗ್ಗಳು ಎಲ್ಲರನ್ನು ದಂಗಾಗಿಸಿವೆ. ಪಕ್ಕಾ ಸಿನಿಮಾ ಸ್ಟೈಲ್ ನಲ್ಲೇ ಡೈಲಾಗ್ ಹೊಡೀತಾರೆ. ತಪ್ಪು ಮಾಡಿದ್ರೆ ದಂಡ ಹಾಕೋದು ಗ್ಯಾರಂಟಿ. ಬಿಎಂಡಬ್ಲ್ಯೂನಲ್ಲೇ ಬರ್ಲಿ.. ಬೈಕ್ನಲ್ಲೇ ಸವಾರಿ ಮಾಡಲಿ. ತಪ್ಪು ಮಾಡಿದ್ರೆ ಸಲ್ಮಾನ್ ಖಾನ್ ತರ ಚುಲ್ […]
ನೀವು ಎಂಥೆಂಥ ಪೊಲೀಸರನ್ನು ನೋಡಿರಬಹುದು. ಆದ್ರೆ, ಯಾರೂ ಈ ಪೊಲೀಸ್ ಥರ ಇಲ್ಲ. ಹೆಸರು ಭಗವತ್ ಪಾಂಡೆ. ವೃತ್ತಿಯಲ್ಲಿ ಪೊಲೀಸ್ ಸುಬೇದಾರ್. ಕೊರೊನಾ ಲಾಕ್ಡೌನ್ ಕಾಲಕ್ಕೆ ಇವರು ಕೈಗೊಂಡ ಸುರಕ್ಷತಾ ಕ್ರಮ ಮಾತ್ರ ಎಲ್ಲರನ್ನು ಇಂಪ್ರೆಸ್ ಮಾಡಿದೆ. ಅವರ ಚಟ್ ಫಟ್ ಡೈಲಾಗ್ಗಳು ಎಲ್ಲರನ್ನು ದಂಗಾಗಿಸಿವೆ.
ಪಕ್ಕಾ ಸಿನಿಮಾ ಸ್ಟೈಲ್ ನಲ್ಲೇ ಡೈಲಾಗ್ ಹೊಡೀತಾರೆ. ತಪ್ಪು ಮಾಡಿದ್ರೆ ದಂಡ ಹಾಕೋದು ಗ್ಯಾರಂಟಿ. ಬಿಎಂಡಬ್ಲ್ಯೂನಲ್ಲೇ ಬರ್ಲಿ.. ಬೈಕ್ನಲ್ಲೇ ಸವಾರಿ ಮಾಡಲಿ. ತಪ್ಪು ಮಾಡಿದ್ರೆ ಸಲ್ಮಾನ್ ಖಾನ್ ತರ ಚುಲ್ ಬುಲ್ ಪಾಂಡೇ ಸ್ಟೈಲ್ನಲ್ಲಿ ಡೈಲಾಗ್ ಬೀಳುತ್ತೆ. ಅದಕ್ಕೆ ಜನರು ಭಗವತ್ ಪಾಂಡೇಯನ್ನ ಚುಲ್ಬುಲ್ ಪಾಂಡೇ ಅಂತ್ಲೇ ಕರೆಯುತ್ತಿದ್ದಾರೆ.
ಕೊರೊನಾ ಕಾಲದಲ್ಲಿ ಇವರ ಕಾಳಜಿ ಮೆಚ್ಚಲೇಬೇಕು. ಕಾನೂನು ಪಾಲನೆ ಮಾಡೋದನ್ನು ಇತರರು ಇವರಿಂದ ಕಲಿಯಬೇಕು. ಅದು ಸಣ್ಣವರಿರಲಿ ಇಲ್ಲ ದೊಡ್ಡವರು, ಬಡವರಿರಲಿ ಇಲ್ಲಾ ಶ್ರೀಮಂತರು ಎಲ್ಲರೂ ಇವರ ಪಾಲಿಗೆ ಒಂದೇ. ಎಂಥಾ ಅದ್ಧೂರಿ ಕಾರಲ್ಲಿ ಬಂದ್ರೂ ನಿಯಮ ಮುರಿದರೆಂದರೆ ದಂಡ ಪಾವತಿಸಬೇಕಾಗಿರೋದು ಪಕ್ಕಾ. ಇವರನ್ನು ಸಾಮಾಜಿಕ ಜಾಲತಾಣದಲ್ಲಿ ಚುಲ್ ಬುಲ್ ಪಾಂಡೆ ಎಂದು ಗುರುತಿಸಲಾಗುತ್ತೆ.
ಲಾಕ್ಡೌನ್ ಮುರಿದವರಿಗೆ ಈ ರಿಯಲ್ ಲೈಪ್ ಚುಲ್ ಬುಲ್ ಪಾಂಡೆ ಎಂಥೆಂತಹ ಟ್ವಿಸ್ಟ್ ಕೊಡಿಸಿದ್ದಾರೆ ಅನ್ನೋದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಸ್ಯದ ಲೇಪನ ಕೊಟ್ಟ ಇವರ ಡೈಲಾಗ್ ಮಾತ್ರ ಲಾಜವಾಬ್. -ರಾಜೇಶ್ ಶೆಟ್ಟಿ
Published On - 3:21 pm, Mon, 6 July 20