ಗುಜರಿಗೆ ಹಾಕಿದ್ದ ತಿಜೋರಿಯಲ್ಲಿತ್ತು 56 ಕೋಟಿ ರೂ! ಕೊನೆಗೆ, ಅದು ಯಾರ ಪಾಲಾಯ್ತು?
ಹಳೇ ಪಾತ್ರೆ, ಹಳೇ ಕಬ್ಬಿಣ, ಹಳೇ ಪೇಪರ್ ಅಂತಾ ಕೂಗುತ್ತಾ ನಗರದ ಬೀದಿ ಬೀದಿ ಅಲೆದು ಮನೆಗಳಲ್ಲಿರುವ ಹಳೆ ಸಾಮಾನುಗಳನ್ನು ಖರೀದಿ ಮಾಡಿ ಹೋಗುವ ಜನರನ್ನು ನೋಡಿದ್ದೇವೆ. ಆ ಹಳೇ ಪಾತ್ರೆ ಅಥವಾ ಸಾಮಾನಿನಿಂದ ಎಷ್ಟು ಮಹಾ ದುಡ್ಡು ಸಿಗಬಹುದು? ಅಬ್ಬಬ್ಬಾ ಅಂದ್ರೆ ನೂರು ಇಲ್ಲಾ ಇನ್ನೂರು ಸಿಗಬಹುದು ಅಂತಾ ಅಂದುಕೊಂಡಿರೋರು ಬಹಳ ಮಂದಿ ಇದ್ದಾರೆ. ಆದರೆ, ಇಲ್ಲೊಬ್ಬ ಪುಣ್ಯಾತ್ಮ ಕೇವಲ 500 ಡಾಲರ್ಗೆ ಖರೀದಿಸಿದ್ದ ಒಂದು ತುಕ್ಕು ಹಿಡಿದ ಹಳೇ ತಿಜೋರಿ ಒಳಗೆ ಒಂದಲ್ಲ, ಎರಡಲ್ಲ […]
ಹಳೇ ಪಾತ್ರೆ, ಹಳೇ ಕಬ್ಬಿಣ, ಹಳೇ ಪೇಪರ್ ಅಂತಾ ಕೂಗುತ್ತಾ ನಗರದ ಬೀದಿ ಬೀದಿ ಅಲೆದು ಮನೆಗಳಲ್ಲಿರುವ ಹಳೆ ಸಾಮಾನುಗಳನ್ನು ಖರೀದಿ ಮಾಡಿ ಹೋಗುವ ಜನರನ್ನು ನೋಡಿದ್ದೇವೆ. ಆ ಹಳೇ ಪಾತ್ರೆ ಅಥವಾ ಸಾಮಾನಿನಿಂದ ಎಷ್ಟು ಮಹಾ ದುಡ್ಡು ಸಿಗಬಹುದು? ಅಬ್ಬಬ್ಬಾ ಅಂದ್ರೆ ನೂರು ಇಲ್ಲಾ ಇನ್ನೂರು ಸಿಗಬಹುದು ಅಂತಾ ಅಂದುಕೊಂಡಿರೋರು ಬಹಳ ಮಂದಿ ಇದ್ದಾರೆ.
ಆದರೆ, ಇಲ್ಲೊಬ್ಬ ಪುಣ್ಯಾತ್ಮ ಕೇವಲ 500 ಡಾಲರ್ಗೆ ಖರೀದಿಸಿದ್ದ ಒಂದು ತುಕ್ಕು ಹಿಡಿದ ಹಳೇ ತಿಜೋರಿ ಒಳಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 7.5 ಮಿಲಿಯನ್ ಡಾಲರ್ (ಅಂದಾಜು 56 ಕೋಟಿ ರೂಪಾಯಿ) ಸಿಕ್ಕಿದೆ. ಹೌದು, ಇಂಥದ್ದೊಂದು ಆಶ್ಚರ್ಯಕರ ಸಂಗತಿ ಅಮೆರಿಕದಲ್ಲಿ ನಡೆದಿದೆ. ಈ ವಿಷಯವನ್ನು ‘ಸ್ಟೋರೇಜ್ ವಾರ್ಸ್’ ರಿಯಾಲಿಟಿ ಶೋ ಖ್ಯಾತಿಯ ಡ್ಯಾನ್ ಡಾಟ್ಸನ್ ಖುದ್ದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಡ್ಯಾನ್ ಡಾಟ್ಸನ್ ಈ ಹಿಂದೆ ನಡೆಸಿದ್ದ ಹರಾಜು ಪ್ರಕ್ರಿಯೆ ಒಂದರಲ್ಲಿ ವ್ಯಕ್ತಿಯೋರ್ವ ಕೇವಲ 500 ಡಾಲರ್ಗೆ ಈ ತುಕ್ಕು ಹಿಡಿದ ಹಳೇ ಕಾಲದ ಕಬ್ಬಿಣದ ಪೆಟ್ಟಿಗೆಯನ್ನು ಕೊಂಡುಕೊಂಡಿದ್ದನಂತೆ. ತಿಜೋರಿಯಲ್ಲಿ ಏನಿರಬಹುದು ಎಂಬ ಕುತೂಹಲ ಹುಟ್ಟಿ ಕೀಲಿಕೈ ರಿಪೇರಿ ಮಾಡೋನನ್ನು ಕರೆಸಿ ತಿಜೋರಿಯ ಬೀಗ ಮುರಿಸಿದನಂತೆ.
ತಿಜೋರಿಯಲ್ಲಿ ಬೆಚ್ಚಗೆ ಕೂತಿತ್ತು 56 ಕೋಟಿ ರೂ ನಗದು ಕೊನೆಗೂ ಕಷ್ಟಪಟ್ಟು ಬೀಗ ಮುರಿದು ಬಾಗಿಲು ತೆರೆದ ಇಬ್ಬರಿಗೂ ತಮ್ಮ ಕಣ್ಣುಗಳನ್ನ ತಾವೇ ನಂಬೋಕೆ ಆಗಲಿಲ್ಲ. ತೆರೆದ ತಿಜೋರಿಯೊಳಗಿತ್ತು ಬರೋಬ್ಬರಿ 7.5 ಮಿಲಿಯನ್ ಡಾಲರ್ ನಗದು. ಹೌದು, ಫುಲ್ ಕ್ಯಾಶ್.
ಆದರೆ, ಕೊನೆಗೆ ಸಿಕ್ಕಿದ್ದು ಮಾತ್ರ 1.2 ಮಿಲಿಯನ್ ಡಾಲರ್ ರಾತ್ರೋರಾತ್ರಿ ಸಿಕ್ಕ ಹಣದಿಂದ ಖುಷಿಯಾದ ತಿಜೋರಿ ಮಾಲೀಕ ಈ ವಿಷಯವನ್ನು ಡ್ಯಾನ್ ಡಾಟ್ಸನ್ ಬಳಿ ಹಂಚಿಕೊಂಡಿದ್ದನಂತೆ. ಇನ್ನು ಈ ಸಂಗತಿ ಎಲ್ಲೆಡೆ ಹಬ್ಬುತ್ತಿದ್ದಂತೆ ತಿಜೋರಿಯ ಒರಿಜಿನಲ್ ಮಾಲೀಕರ ಕಿವಿಗೂ ಈ ಸುದ್ದಿ ಬಿದ್ದಂತೆ. ಕೂಡಲೇ ತಮ್ಮ ವಕೀಲನೊಟ್ಟಿಗೆ ಬಂದಿಳಿದ ಒರಿಜಿನಲ್ ಮಾಲೀಕ ತಿಜೋರಿಯಲ್ಲಿದ್ದ ಹಣವನ್ನು ವಾಪಸ್ ಮಾಡಲು ಕೇಳಿದ್ದಾನೆ. ಖರೀದಿ ಮಾಡಿದ್ದ ವ್ಯಕ್ತಿಗೆ ಹಣದ ಆಮಿಷ ಸಹ ಒಡ್ಡಿದ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಕೊನೆಗೆ 1.2 ಮಿಲಿಯನ್ ಡಾಲರ್ ಪಡೆದು ಉಳಿದ ಹಣವನ್ನು ಒರಿಜಿನಲ್ ಮಾಲೀಕನಿಗೆ ವಾಪಸ್ ಮಾಡಿದ್ದಾನೆ.
ತಿಜೋರಿಯಲ್ಲಿ ಅಷ್ಟೊಂದು ಹಣ ಸೇರಿದ್ದು ಹೇಗೆ..? ಅಂದ ಹಾಗೆ, ಎಲ್ಲರಲ್ಲೂ ಕಾಡ್ತಿರುವ ಪ್ರಶ್ನೆ.. ಈ ತಿಜೋರಿ ಮೊದಲು ಎಲ್ಲಿತ್ತು ಹಾಗೂ ಇದರಲ್ಲಿ ಅಷ್ಟೊಂದು ಹಣ ಸೇರಿದ್ದಾದ್ರೂ ಹೇಗೆ ಎಂದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಈ ತಿಜೋರಿಯು ಮೂಲತಃ ಸೇಫ್ ಡೆಪಾಸಿಟ್ ಲಾಕರ್ (Safe Deposit Locker) ಕಂಪನಿಯ ಸುಪರ್ದಿನಲ್ಲಿ ಇತ್ತಂತೆ. ತಿಜೋರಿಯ ಒರಿಜಿನಲ್ ಮಾಲೀಕ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಕಂಪನಿಯು ಇದನ್ನು ಮಾರಿಬಿಟ್ಟಿದ್ದಂತೆ. ಅದಕ್ಕೇ ಈ ದುಡ್ಡು ಬೇರೆಯವರ ಪಾಲಾಗೋಕೆ ಹೋಗಿತ್ತು. ಅದರೆ, ಅದೃಷ್ಟವಶಾತ್ ಇದು ಮತ್ತೊಮ್ಮೆ ಒರಿಜಿನಲ್ ಮಾಲೀಕರ ತೆಕ್ಕೆಗೆ ಸೇರಿದೆ.
Published On - 2:05 pm, Mon, 6 July 20