ಮತ್ತೊಂದು ಅನ್ವೇಷಣೆ.. ಇಂಟರ್ನೆಟ್ ಸಂಪರ್ಕದ ಸ್ಮಾರ್ಟ್ ಮಾಸ್ಕ್ ಬಂದಿದೆ
ಕೊರೊನಾ ಬಂದ ಬಳಿಕ ರಕ್ಷಣೆಗೆ ಬಂತು ಮಾಸ್ಕ್. ಬರ್ತಾ ಬರ್ತಾ ಅದರಲ್ಲೂ ಹೊಸ ಹೊಸ ಅನ್ವೇಷಣೆಗಳು ಕೂಡಾ ಬೆಳಕಿಗೆ ಬಂದವು. ಅವು ಬೇರೆ ಬೇರೆ ರೂಪ ಪಡೆದಾಗ ಜನ ಅಚ್ಚರಿಯಿಂದ ಗಮನಿಸಿದ್ದಾರೆ. ಈಗ ಜನಗಳಿಗೆ ಮಾಸ್ಕ್ ಕಡೆಯಿಂದ ಮತ್ತೊಂದು ಅಚ್ಚರಿ ಇದೆ. ಅಂದ ಹಾಗೆ ಇಲ್ಲೊಂದು ಜಪಾನಿ ಮಾಸ್ಕ್ ಇದೆ. ಅದನ್ನು ಸ್ಮಾರ್ಟ್ ಮಾಸ್ಕ್ ಅಂತ ಕರೀತಾರೆ. ಇದು ತುಂಬಾ ವಿಶೇಷವಾದ ಮಾಸ್ಕ್ ಇದನ್ನು ಕೊರೊನಾ ಸುರಕ್ಷತೆಗಾಗಿ ಧರಿಸಬಹುದು. ಮತ್ತು ಇದರಿಂದ ಮೆಸೇಜ್ ಮಾಡಬಹುದು. ಇದು ಜಪಾನ್ […]
ಕೊರೊನಾ ಬಂದ ಬಳಿಕ ರಕ್ಷಣೆಗೆ ಬಂತು ಮಾಸ್ಕ್. ಬರ್ತಾ ಬರ್ತಾ ಅದರಲ್ಲೂ ಹೊಸ ಹೊಸ ಅನ್ವೇಷಣೆಗಳು ಕೂಡಾ ಬೆಳಕಿಗೆ ಬಂದವು. ಅವು ಬೇರೆ ಬೇರೆ ರೂಪ ಪಡೆದಾಗ ಜನ ಅಚ್ಚರಿಯಿಂದ ಗಮನಿಸಿದ್ದಾರೆ. ಈಗ ಜನಗಳಿಗೆ ಮಾಸ್ಕ್ ಕಡೆಯಿಂದ ಮತ್ತೊಂದು ಅಚ್ಚರಿ ಇದೆ. ಅಂದ ಹಾಗೆ ಇಲ್ಲೊಂದು ಜಪಾನಿ ಮಾಸ್ಕ್ ಇದೆ. ಅದನ್ನು ಸ್ಮಾರ್ಟ್ ಮಾಸ್ಕ್ ಅಂತ ಕರೀತಾರೆ.
ಇದು ತುಂಬಾ ವಿಶೇಷವಾದ ಮಾಸ್ಕ್ ಇದನ್ನು ಕೊರೊನಾ ಸುರಕ್ಷತೆಗಾಗಿ ಧರಿಸಬಹುದು. ಮತ್ತು ಇದರಿಂದ ಮೆಸೇಜ್ ಮಾಡಬಹುದು. ಇದು ಜಪಾನ್ ಭಾಷೆಯಿಂದ 8 ಭಾಷೆಗಳಿಗೆ ಅನುವಾದ ಕೂಡಾ ಮಾಡುತ್ತೆ. ಇದೇನು ಮಾಸ್ಕಾ ಇಲ್ಲಾ ಮೊಬೈಲಾ ಅಂದ್ಕೊಂಡಿದ್ರೆ ತಪ್ಪು. ಇದು ಮಾಸ್ಕ್ ಆದ್ರೆ ತಂತ್ರಜ್ಞಾನದಲ್ಲಿ ಅತ್ಯಂತ ಸುಧಾರಿತ ನಮೂನೆಯ ಮಾಸ್ಕ್.
ಕೊರೊನಾ ಸಂಕಷ್ಟದ ಮಧ್ಯೆ ಈ ಮಾಸ್ಕ್ ಸಖತ್ ಸದ್ದು ಮಾಡಿದೆ, ಮಾಡುತ್ತಿದೆ. ಜಪಾನೀಸ್ ಸ್ಟಾರ್ಟಪ್ ಡೊನಾಟ್ ರೊಬೊಟಿಕ್ ಸಂಸ್ಥೆ ಇದನ್ನು ತಯಾರು ಮಾಡಿದೆ. ಸದಾ ಇಂಟರ್ನೆಟ್ ಸಂಪರ್ಕ ಹೊಂದಬಹುದಾದ ಈ ಮಾಸ್ಕನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಬ್ಲೂಟೂತ್ ಬಳಸಿಯೂ ಮೊಬೈಲಿಗೆ ಕನೆಕ್ಟ್ ಮಾಡಬಹುದು.
ಇದರ ಬೆಲೆ ಕಡಿಮೆಯೇನಿಲ್ಲ- 40 ಅಮೆರಿಕನ್ ಡಾಲರ್. ಅಂದ್ರೆ ಭಾರತೀಯ ಕರೆನ್ಸಿಗೆ ಲೆಕ್ಕ ಹಾಕಿದ್ರೆ ಬರೋಬ್ಬರಿ 2,987 ರೂಪಾಯಿ. ಅದಾಗಲೇ ಸಾಕಷ್ಟು ಜನ ಈ ಮಾಸ್ಕ್ ಕೊಂಡು ಧರಿಸಿದ್ದಾರೆ. ಅಂತೂ ಕೊರೊನಾ ಅನ್ನುವ ಹೆಮ್ಮಾರಿ ಅನೇಕ ಅನ್ವೇಷಣೆಗಳಿಗೆ ಕಾರಣವಾಗಿರೋದು ಸುಳ್ಳಲ್ಲಾ. -ರಾಜೇಶ್ ಶೆಟ್ಟಿ
Published On - 3:36 pm, Mon, 6 July 20