
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ, ರಣದೀಪ ಸಿಂಗ್ ಸುರ್ಜೇವಾಲಾ ಶಿರಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತಂತೆ ಎದ್ದಿದ್ದ ಗೊಂದಲಕ್ಕೆ ತರೆ ಎಳೆಯಲು ಇಂದು ಪ್ರಯತ್ನಿಸಿದ್ದಾರೆ.
ಈಗ ಸುರ್ಜೇವಾಲಾ ಖುದ್ದು ಟ್ವೀಟ್ ಮಾಡಿ ಈ ಗೊಂದಲಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಶಿರಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಏಐಸಿಸಿ ಮತ್ತು ರಾಜ್ಯದ ನಾಯಕರು ಸೇರಿ ಒಮ್ಮತದಿಂದ ಸಮರ್ಥ ನಾಯಕರಾದ ಟಿ.ಬಿ. ಜಯಚಂದ್ರ ಅವರಿಗೆ ಟಿಕೆಟ್ ನೀಡಲು ನಿರ್ಧರಿಸದ್ದಾರೆ. ಮಾಧ್ಯಮ ಸ್ನೇಹಿತರು ಬಿಜೆಪಿಯ ಷಡ್ಯಂತ್ರಕ್ಕೆ ಸಿಲುಕದೇ ನಮ್ಮ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕಾಗಿ ವಿನಂತಿ, ಎಂದು ತಮ್ಮ ಟ್ವೀಟ್ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.