ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ನಕಲಿ ಛಾಪಾ ಕಾಗದ ದಂಧೆ: ಛೋಟಾ ತೆಲಗಿ ಗ್ಯಾಂಗ್​ ಅರೆಸ್ಟ್​

ಬೆಂಗಳೂರು: ಹಲವು ವರ್ಷಗಳ ಹಿಂದೆ ರಾಜ್ಯ ರಾಜಕೀಯವನ್ನೇ ತಲೆಕೆಳಗಾಗಿ ಮಾಡಿದ್ದ ಅತಿದೊಡ್ಡ ಹಗರಣವೆಂದರೆ ಅದು ನಕಲಿ ಛಾಪಾ ಕಾಗದ ಹಗರಣ. ಪ್ರಕರಣದಲ್ಲಿ ಹಲವು ಪ್ರಭಾವಿ ನಾಯಕರ ಹೆಸರು ತಳುಕು ಹಾಕಿದ್ದರೂ ಕೊನೆಗೆ ಹಗರಣದ ಕಿಂಗ್​ಪಿನ್​ ಅಬ್ದುಲ್​ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಆಗಿತ್ತು. ಆ ನಂತರ, ತೆಲಗಿ ಜೈಲಿನಲ್ಲೇ ಕೊಳೆಯುತ್ತಾ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಇದೀಗ, ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ದಂಧೆ ಬಟಾಬಯಲಾಗಿದೆ. ಕೋರ್ಟ್​ಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಲು ನಕಲಿ ಛಾಪಾ […]

ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ನಕಲಿ ಛಾಪಾ ಕಾಗದ ದಂಧೆ: ಛೋಟಾ ತೆಲಗಿ ಗ್ಯಾಂಗ್​ ಅರೆಸ್ಟ್​
Follow us
KUSHAL V
|

Updated on:Oct 10, 2020 | 4:06 PM

ಬೆಂಗಳೂರು: ಹಲವು ವರ್ಷಗಳ ಹಿಂದೆ ರಾಜ್ಯ ರಾಜಕೀಯವನ್ನೇ ತಲೆಕೆಳಗಾಗಿ ಮಾಡಿದ್ದ ಅತಿದೊಡ್ಡ ಹಗರಣವೆಂದರೆ ಅದು ನಕಲಿ ಛಾಪಾ ಕಾಗದ ಹಗರಣ. ಪ್ರಕರಣದಲ್ಲಿ ಹಲವು ಪ್ರಭಾವಿ ನಾಯಕರ ಹೆಸರು ತಳುಕು ಹಾಕಿದ್ದರೂ ಕೊನೆಗೆ ಹಗರಣದ ಕಿಂಗ್​ಪಿನ್​ ಅಬ್ದುಲ್​ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಆಗಿತ್ತು. ಆ ನಂತರ, ತೆಲಗಿ ಜೈಲಿನಲ್ಲೇ ಕೊಳೆಯುತ್ತಾ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಇದೀಗ, ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ದಂಧೆ ಬಟಾಬಯಲಾಗಿದೆ. ಕೋರ್ಟ್​ಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಲು ನಕಲಿ ಛಾಪಾ ಕಾಗದ ತಯಾರಿಸುತ್ತಿದ್ದ ಗ್ಯಾಂಗ್​ ಒಂದು ಪತ್ತೆಯಾಗಿದೆ. ನಗರದ ಸಿಟಿ ಸಿವಿಲ್ ಕೋರ್ಟ್ ಕಾಂಪ್ಲೆಕ್ಸ್ ಹಾಗೂ ಕಂದಾಯ ಭವನಕ್ಕೆ ಬರುವವರೇ ಇವರ ಟಾರ್ಗೆಟ್​. ಇವರ ಕೃತ್ಯಗಳು ರಾಜ್ಯ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಆದರೆ, ಇದು ಮತ್ತಷ್ಟು ಬೆಳೆದು ಪೆಡಂಭೂತವಾಗಿ ರಾಜ್ಯವನ್ನು ಕಾಡುವ ಮುನ್ನವೇ ಖಾಕಿ ಪಡೆ ಇದನ್ನು ಚಿವುಟು ಹಾಕಿದೆ.

ಸ್ವಾರಸ್ಯಕರ ಸಂಗತಿಯೆಂದರೆ ಈ ನಕಲಿ ಛಾಪಾ ಕಾಗದ ದಂಧೆಯ ಕಿಂಗ್​ಪಿನ್​ ಹೆಸರು ಛೋಟಾ ತೆಲಗಿ! ಹೌದು, ಇದೀಗ ಛೋಟಾ ತೆಲಗಿ ಸೇರಿದಂತೆ ನಾಲ್ವರು ಆರೋಪಿಗಳನ್ನ SJ ಪಾರ್ಕ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ಆರೋಪಿಗಳು ಸೆರೆಯಾಗಿದ್ದು ದಂಧೆಯ ಕಿಂಗ್​ಪಿನ್​ ಆಗಿದ್ದ ಹುಸೇನ್ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿ ಸೇರಿದಂತೆ ಸಿಟಿ ಸಿವಿಲ್ ಕೋರ್ಟ್​ ಬಳಿ ಟೈಪ್​ರೈಟಿಂಗ್​ಮಾಡುತ್ತಿದ್ದ ಹರೀಶ್​, ಶವರ್ ಅಲಿಯಾಸ್ ಸೀಮಾ ಹಾಗೂ ಕಂದಾಯ ಭವನದಲ್ಲಿ ಟೈಪಿಸ್ಟ್​ ಆಗಿದ್ದ ನಜ್ಮಾ ಫಾತಿಮಾರನ್ನು ಖಾಕಿ ಪಡೆ ಅರೆಸ್ಟ್​ ಮಾಡಿದೆ. ಕೋರ್ಟ್​ಗಳಲ್ಲಿ ಕೇಸ್ ದಾಖಲಿಸಲು ಬರುತ್ತಿದ್ದ ಜನರು; ಜಿಪಿಎ, ವಿಲ್ ಮತ್ತು ಕರಾರು ಪತ್ರ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಈ ಗ್ಯಾಂಗ್​ ನಕಲಿ ಛಾಪಾ ಕಾಗದ ತಯಾರಿಸಿಕೊಡುತ್ತಿತ್ತು. ಈ ಮುಖಾಂತರ ಸರ್ಕಾರಕ್ಕೆ ಸಾವಿರಾರು ರೂಪಾಯಿ ಆದಾಯದಿಂದ ವಂಚಿಸಿದ್ದರು. ಈ ಹಿಂದೆ ಹುಸೇನ್ ಮೋದಿ ಬಾಬುನನ್ನು ಹಲಸೂರು ಗೇಟ್​ ಪೊಲೀಸರು ಬಂಧಿಸಿದ್ದರು. ಆದರೆ, ಈತ ಜಾಮೀನಿನ ಮೇಲೆ ಹೊರಬಂದು ಮತ್ತೆ ದಂಧೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತರಿಂದ ಪೊಲೀಸರು 443 ನಕಲಿ ಛಾಪಾ ಕಾಗದ ಜಪ್ತಿಮಾಡಿದ್ದಾರೆ.

Published On - 4:05 pm, Sat, 10 October 20

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್