ಆಸ್ಟ್ರೇಲಿಯಾ ಪ್ರವಾಸವನ್ನು ಅರ್ಧದಲ್ಲೇ ಮೊಟಕು ಗೊಳಿಸಿ, ತಾಯ್ನಾಡಿಗೆ ವಾಪಸಾಗಿದ್ದ ಭಾರತೀಯ ಕ್ರಿಕೆಟ್ ತಂಡದ ರೆಗ್ಯುಲರ್ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಇಂದು ವರ್ಕ್ ಫ್ರಂ ಹೋಮ್! ತಂದೆಯಾಗುವ ಸಂತಸದಲ್ಲಿ ಭಾರತಕ್ಕೆ ವಾಪಸಾಗಿದ್ದ ಕ್ಯಾಪ್ಟನ್ ಕೊಹ್ಲಿ ಪುತ್ರಿ ಜನನದ ವೇಳೆ ಪತ್ನಿಯ ಪಕ್ಕದಲ್ಲೇ ಇದ್ದರು.
ಅದಾದ ಬಳಿಕ ಮನೆಯಲ್ಲೇ ಪುತ್ರಿಯ ಲಾಲನೆ ಪಾಲನೆಯಲ್ಲಿ ತೊಡಗಿದ್ದರು. ಆವಾಗಾವಾಗ ಮಗಳು ನಿದ್ದೆಗೆ ಜಾರಿದಾಗ ಟಿವಿ ಆನ್ ಮಾಡಿಕೊಂಡು ಬ್ಲೂ ಬಾಯ್ಸ್ ಪರಾಕ್ರಮದ ಆಟವನ್ನು ಸವಿಯುತ್ತಿದ್ದರು. ವೆಲ್ ಪ್ಲೇಯ್ಡ್ ಬಾಯ್ಸ್ ಎಂದು ಹುರಿದುಂಬಿಸುತ್ತಿದ್ದರು. ಅದೇ ವೇಳೆ ಮುಂದಿನ ಪ್ರವಾಸಕ್ಕೆ ಯಾರನ್ನು ಆಯ್ಕೆ ಮಾಡಬೇಕು; ಯಾರನ್ನು ಕೈಬಿಡಬೇಕು ಎಂಬುದನ್ನೂ ಮನದಲ್ಲೇ ಲೆಕ್ಕಾಚಾರ ಹಾಕುತ್ತಿದ್ದರು.
ಇವತ್ತು ಆ ದಿನ ಬಂದೇ ಬಿಟ್ಟಿದೆ. ಫೆಬ್ರವರಿ ಮೊದಲ ವಾರದಲ್ಲಿ ಇಂಗ್ಲೆಂಡ್ ತಂಡ ಭಾರತದ ಪ್ರವಾಸ ಕೈಗೊಳ್ಳಲಿದೆ. ಅದಕ್ಕಾಗಿ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಇಂದು ನಡೆಯಲಿದೆ. ಐದು ಮಂದಿ ರಾಷ್ಟ್ರೀಯ ಸೆಲೆಕ್ಟರ್ಗಳು ಮತ್ತು ರೆಗ್ಯುಲರ್ ಕ್ಯಾಪ್ಟನ್ ಕೊಹ್ಲಿ ಇಂದು ಆ ಕಾರ್ಯವನ್ನು ನೆರವೇರಿಸಬೇಕಿದೆ. ಅದಕ್ಕೇ ಹೇಳಿದ್ದು ಇಂದು ವಿರಾಟ್ ಕೊಹ್ಲಿಗೆ ವರ್ಕ್ ಫ್ರಂ ಹೋಮ್!
ಆದ್ರೆ ಕೊರೊನಾ ಬೆಂಭೂತ ಇನ್ನೂ ನಮ್ಮಿಂದ ದೂರವಾಗಿಲ್ಲ; ಹಾಗಾಗಿ ಇಂದು ಆಯ್ಕೆದಾರರು ಮನೆಗಳಲ್ಲೇ ಕುಳಿತು ತಂಡದ ಆಯ್ಕೆ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ. ಹಾಗೆ ನೋಡಿದರೆ.. ಅಲ್ಲಿ ಆಸ್ಟ್ರೇಲಿಯಾದಲ್ಲಿ ಎಲ್ಲಾ ಬ್ಲೂ ಬಾಯ್ಸ್ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಎಲ್ರೂ ಚೆನ್ನಾಗಿಯೆ ಆಡುತ್ತಿರುವಾಗ ಯಾರನ್ನು ಆಯ್ಕೆ ಮಾಡಬೇಕು; ಯಾರನ್ನು ಬಿಡಬೇಕು. ಅಥವಾ ಅದೇ ತಂಡವನ್ನು ಮುಂದುವರಿಸಬೇಕು ಎಂಬೆಲ್ಲಾ ವಿಚಾರಗಳು ಈಗಾಗಲೇ ಆಯ್ಕೆದಾರರ ಮುಂದೆ ಹರಡಿಕೊಂಡಿವೆ. So, ಎಲ್ಲಾ ಆಟಗಾರರಿಗೂ ಆಲ್ ದಿ ಬೆಸ್ಟ್ ಹೇಳೋಣ..
Published On - 10:40 am, Tue, 19 January 21