ಅಕ್ರಮ ಮಣ್ಣು ಗಣಿಗಾರಿಕೆ; ಜಮೀನುಗಳಲ್ಲಿ ಬಲಿಗಾಗಿ ಕಾಯುತ್ತಿವೆ ಬೃಹತ್ ಹೊಂಡಗಳು: ಗಣಿ ಇಲಾಖೆಗೆ ಜಾಣ ಕುರುಡು

ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಸುತ್ತಮುತ್ತ ಜಮೀನುಗಳಲ್ಲಿ ಬೃಹತ್ ಹೊಂಡಗಳು ತಲೆ ಎತ್ತಿವೆ. ಗಣಿ ಇಲಾಖೆ ಕಾನೂನು ಗಾಳಿಗೆ ತೂರಿ ಮನಸೋ ಇಚ್ಛೆ ಮಣ್ಣು ಲೂಟಿ ನಡೆಸಲಾಗಿದೆ.

ಅಕ್ರಮ ಮಣ್ಣು ಗಣಿಗಾರಿಕೆ; ಜಮೀನುಗಳಲ್ಲಿ ಬಲಿಗಾಗಿ ಕಾಯುತ್ತಿವೆ ಬೃಹತ್ ಹೊಂಡಗಳು: ಗಣಿ ಇಲಾಖೆಗೆ ಜಾಣ ಕುರುಡು
ಅಕ್ರಮ ಮರಳು ಗಣಿಕಾರಿಕೆಯಿಂದ ತೆರೆದುಕೊಂಡಿರುವ ಹೊಂಡ
Follow us
TV9 Web
| Updated By: ganapathi bhat

Updated on:Apr 06, 2022 | 8:47 PM

ಗದಗ: ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಮಣ್ಣು ಬಗೆದ ಜಮೀನುಗಳಲ್ಲಿ ಬೃಹತ್ ಹೊಂಡಗಳು ತೆರೆದುಕೊಂಡಿವೆ. ಈ ಅಕ್ರಮ ದಂದೆಕೋರರು ಹಳ್ಳಿಗಳ ನೈಸರ್ಗಿಕ ತಿರುವು ಬದಲಿಸಿ ಲೂಟಿ ನಡೆಸಿದ್ದಾರೆ. ಕಳೆದ ವರ್ಷ ಇಂಥ ಬೃಹತ್ ಗುಂಡಿಗೆ ಬಿದ್ದು ಇಬ್ಬರು ಯುವಕರು ಬಲಿಯಾಗಿದ್ದಾರೆ. ಆದರೂ ಗದಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಈಗ ಐತಿಹಾಸಿಕ ಲಕ್ಕುಂಡಿ ಗ್ರಾಮದ ಸುತ್ತಮುತ್ತ ಹಲವು ಬೃಹತ್ ಹೊಂಡಗಳು ಬಲಿಗಾಗಿ ಕಾಯುತ್ತಿರುವಂತೆ ತೆರೆದುಕೊಂಡಿದೆ. ಗಣಿ ಇಲಾಖೆ ಮಾತ್ರ ಕ್ರಮಕ್ಕೆ ‌ಮುಂದಾಗಿಲ್ಲ. ಇದು ಗ್ರಾಮಸ್ಥರ ‌ಆಕ್ರೋಶಕ್ಕೆ ಕಾರಣವಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ತವರು ಜಿಲ್ಲೆ ಗದಗದಲ್ಲಿ, ಅಕ್ರಮ ‌ಮಣ್ಣು ಮಾಫಿಯಾ ಎಗ್ಗಿಲ್ಲದೇ ನಡೆದಿದೆ. ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಸುತ್ತಮುತ್ತ ಜಮೀನುಗಳಲ್ಲಿ ಬೃಹತ್ ಹೊಂಡಗಳು ತಲೆ ಎತ್ತಿವೆ. ಗಣಿ ಇಲಾಖೆ ಕಾನೂನು ಗಾಳಿಗೆ ತೂರಿ ಮನಸೋ ಇಚ್ಛೆ ಮಣ್ಣು ಲೂಟಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಣ್ಣನ್ನು ಎಗ್ಗಿಲ್ಲದೇ ಸಾಗಣೆ ಮಾಡಲಾಗಿದೆ ಎಂದು ಜನರು ಆರೋಪಿಸಿದ್ದಾರೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವ್ಯಾಪ್ತಿಯಲ್ಲಿ ಮಣ್ಣು ಲೂಟಿ ನಡೆದಿದೆ. ಯಾವುದೇ ಅನುಮತಿ ಪಡೆಯದೇ ಮಣ್ಣು ಗಣಿಗಾರಿಕೆ ನಡೆಸಿದ್ದಾರೆ. ಗಣಿ ಇಲಾಖೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚುವ ಕೆಲಸ ಹೆದ್ದಾರಿ ಕಾಮಗಾರಿ ಮಾಡುವ, BSCPL ಕಂಪನಿಯಿಂದ ನಡೆದಿದೆ. ಒಂದು ವೇಳೆ ಗಣಿ ಇಲಾಖೆ ಅನುಮತಿ ಪಡೆದರೂ ಎರಡೂವರೆ ಮೀಟರ್​ನಷ್ಟು ಮಾತ್ರ ಮಣ್ಣು ತೆಗೆಯಬೇಕು. ಆದರೆ, ಗಣಿ ಇಲಾಖೆ ಕಾನೂನಿಗೆ ಲೂಟಿಕೋರರು ಡೋಂಟ್ ಕೇರ್ ಎಂದಿದ್ದಾರೆ.

ಮಣ್ಣು ಅಗೆದ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಬಲಿಯಾದ ಘಟನೆ ಅದರಲ್ಲೂ, ಲಕ್ಕುಂಡಿ ಗ್ರಾಮದಲ್ಲಿ ತೋಡಿದ ಗುಂಡಿಗಳನ್ನು ನೋಡಿದರೆ, ಬಳ್ಳಾರಿ ಗಣಿಗಾರಿಕೆಯನ್ನು ಮೀರಿಸುವಂತಿದೆ. ಅಷ್ಟರ ಮಟ್ಟಿಗೆ ಮಣ್ಣು ಲೂಟಿ ಮಾಡಿದ್ದಾರೆ. 2019, ಡಿಸೆಂಬರ್ 16ರಂದು, ಗದಗ ತಾಲೂಕಿನ ಕಳಸಾಪುರ ಗ್ರಾಮದ ಮಣ್ಣು ಅಗೆದ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಬಲಿಯಾದ ಘಟನೆ ನಡೆದಿತ್ತು. ಆ ಬಳಿಕವೂ ಲೂಟಿಕೋರರು ಎಚ್ಚೆತ್ತುಕೊಂಡಿಲ್ಲ.

ಕಳೆದ ವರ್ಷ ಮೃತರಾದ ಯುವಕರ ಕುಟುಂಬಸ್ಥರ ಅಳಲು

ಈ ವಿಷಯ ಗಣಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿದೆ. ಇಷ್ಟಾದ್ರೂ ಮತ್ತೆ ಲಕ್ಕುಂಡಿ ಗ್ರಾಮದ ಸುತ್ತಮುತ್ತ ಸುಮಾರು 40 ಅಡಿ ಆಳದ ನಾಲ್ಕೈದು ಬೃಹತ್ ಹೊಂಡಗಳನ್ನು ತೆಗೆಯಲಾಗಿದೆ. ಅವುಗಳು ಬಲಿಗಾಗಿ ಕಾದಂತೆ ಕೂತಿವೆ. ಅಕ್ಕಪಕ್ಕ ಜಮೀನು ಇರುವುದರಿಂದ ಕುರಿ, ದನಗಳನ್ನು ಮೇಯಿಸಲು ಮಕ್ಕಳು, ಮಹಿಳೆಯರು ಆಗಮಿಸುತ್ತಾರೆ. ಜಾನುವಾರುಗಳು ನೀರು ಕುಡಿಯಲು ಹೊಂಡಕ್ಕೆ ಇಳಿಯುತ್ತವೆ. ಈ ವೇಳೆ ಜಾನುವಾರುಗಳನ್ನು ಬದುಕಿಸಲು, ಯಾರಾದರೂ ಹೊಂಡಕ್ಕೆ ಬಿದ್ದರೆ ಬಲಿಯಾಗುವುದು ಖಚಿತ.

ಅಕ್ರಮ ‌ಮಣ್ಣು ಲೂಟಿಯಾದ ಬೃಹತ್ ಹೊಂಡಕ್ಕೆ ಎರಡು ಬಲಿಯಾದರೂ ಗದಗ ಜಿಲ್ಲಾಡಳಿತ, ಗಣಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಅಕ್ರಮ ಮಣ್ಣು ದಂಧೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥ ಆನಂದ ಆರೋಪಿಸುತ್ತಾರೆ.

ಲಕ್ಕುಂಡಿ ಗ್ರಾಮದಲ್ಲಿ ಮಾತ್ರವಲ್ಲ, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಗಣಿ ಇಲಾಖೆ ಅನುಮತಿ ಇಲ್ಲದೇ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ, ಸಾವಿರಾರು ಟಿಪ್ಪರ್ ಮಣ್ಣು ಲೂಟಿ ಮಾಡಲಾಗಿದೆ. ಹೆದ್ದಾರಿ ಕಾಮಗಾರಿಗೆ ಮಣ್ಣು ಬಳಸಲಾಗುತ್ತಿದೆ. ಸರ್ಕಾರದ ಕಾಮಗಾರಿ ನೆಪದಲ್ಲಿ ನಾವು ಆಡಿದ್ದೇ ಆಟ ಮಾಡಿದ್ದೇ ಕಾನೂನು ಎಂಬ ವರ್ತನೆಯನ್ನು ಗುತ್ತಿಗೆದಾರರು ತೋರಿದ್ದಾರೆ. ಆದರೆ, ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಗಣಿ ಇಲಾಖೆ ಅಧಿಕಾರಿಗಳು ಗಪ್ ಚುಪ್ ಕುಳಿತಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಲಕ್ಕುಂಡಿ ಗ್ರಾಮದ ಬಳಿ, ಹಳ್ಳಕೊಳ್ಳಗಳಲ್ಲಿ ರಸ್ತೆ ಮಾಡುವ ಮೂಲಕ ನೈಸರ್ಗಿಕ ಹರಿವು ಬದಲಿಸಿ, ಮಣ್ಣು ಲೂಟಿ ಮಾಡಿದ್ದಾರೆ. ನೈಸರ್ಗಿಕ ತಿರುವು ಬದಲಿಸಿದರೆ ಕ್ರಿಮಿನಲ್ ಅಪರಾಧ‌ವಿದೆ. ಇಷ್ಟೆಲ್ಲಾ ಅಕ್ರಮ, ಕಾನೂನು ಬಾಹಿರ ದಂಧೆ ನಡೆದ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದರೂ ಅಧಿಕಾರಿಗಳು ತಡೆಯುವ ಗೋಜಿಗೆ ಹೋಗಿಲ್ಲ. ಬೃಹತ್ ಹೊಂಡಗಳಲ್ಲಿ ಅಪಾರ ನೀರು ಸಂಗ್ರಹವಾಗಿದೆ. ಈ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ.

ಲಕ್ಕುಂಡಿ ಗ್ರಾಮದ ವ್ಯಾಪ್ತಿಯಲ್ಲಿ ಮಣ್ಣು ಗಣಿಗಾರಿಕೆಗೆ ಯಾವುದೇ ಅನುಮತಿ ನೀಡಿಲ್ಲ. ಕಾನೂನು ಬಾಹಿರ ಗಣಿಗಾರಿಕೆ ಮಾಡುವುದು ತಪ್ಪು. ಆದರೂ, ಬಿಎಸ್​ಸಿಪಿಎಲ್ ಕಂಪನಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಣ್ಣು ಬಳಸಿದೆ. ಏನು ಮಾಡೋದು ಎಂದು ಗದಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ರಾಜೇಶ್ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ಗದಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ರಾಜೇಶ್

ಅನುಮತಿ ಇಲ್ಲದೇ ಮಣ್ಣು ಲೂಟಿ ಮಾಡಿದರೂ ದಂಧೆಕೋರರು ನೀಡುವ ಎಂಜಲು ಕಾಸು ಪಡೆದು ಅಧಿಕಾರಿಗಳು ಜಾಣ ಕುರುಡರಂತೆ ಕಚೇರಿಯಲ್ಲಿ ಕುಳಿತಿದ್ದಾರೆ. ಇನ್ನಾದರೂ ಗಣಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಮತ್ತೊಂದು ದುರಂತ ನಡೆಯುವ ಮುನ್ನ, ಸಾವಿನ ಹೊಂಡಗಳ ನಿರ್ಮಾಣ ಮಾಡಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

ಅಕ್ರಮ ಮರಳು ಗಣಿಕಾರಿಕೆಯಿಂದ ತೆರೆದುಕೊಂಡಿರುವ ಹೊಂಡಗಳು

ಹೊಂಡದಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ ಸಹೋದರರು ನೀರುಪಾಲು

Published On - 11:00 am, Tue, 19 January 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ