ಪಾದಚಾರಿಗೆ ಕಾರು ಡಿಕ್ಕಿ, ದೃಶ್ಯ CCTVಯಲ್ಲಿ ಸೆರೆ: ಕಾರ್ ಚಾಲಕನ ಬಂಧನಕ್ಕೆ ಬಲೆ

ವಿಜಯಪುರ: ಅತೀ ವೇಗವಾಗಿ ಬಂದ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ತೀವ್ರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನೆಡೆದಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಿನ್ನೆ ಮದ್ಯಾಹ್ನದ ವೇಳೆ ಈ ಘಟನೆ ನಡೆದಿದೆ. ಅಪರಿಚಿತ ಪಾದಚಾರಿಗೆ ಕಾರ್ ಡಿಕ್ಕಿಯಾದ ಕಾರಣ, ಪಾದಚಾರಿ ಮೇಲೆ ಹಾರಿ ಬಿದ್ದಿದ್ದಾನೆ. ಅಪಘಾತದ ಬಳಿಕ ಕಾರ್ ಚಾಲಕ ಕಾರ್ ಸಮೇತ ಪರಾರಿಯಾಗಿದ್ದಾನೆ. ಕಾರ್ ಚಾಲಕನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಪರಿಚಿತ ಪಾದಚಾರಿಗೆ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ […]

ಪಾದಚಾರಿಗೆ ಕಾರು ಡಿಕ್ಕಿ, ದೃಶ್ಯ CCTVಯಲ್ಲಿ ಸೆರೆ: ಕಾರ್ ಚಾಲಕನ ಬಂಧನಕ್ಕೆ ಬಲೆ

Updated on: Aug 28, 2020 | 12:34 PM

ವಿಜಯಪುರ: ಅತೀ ವೇಗವಾಗಿ ಬಂದ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ತೀವ್ರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನೆಡೆದಿದೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಿನ್ನೆ ಮದ್ಯಾಹ್ನದ ವೇಳೆ ಈ ಘಟನೆ ನಡೆದಿದೆ. ಅಪರಿಚಿತ ಪಾದಚಾರಿಗೆ ಕಾರ್ ಡಿಕ್ಕಿಯಾದ ಕಾರಣ, ಪಾದಚಾರಿ ಮೇಲೆ ಹಾರಿ ಬಿದ್ದಿದ್ದಾನೆ. ಅಪಘಾತದ ಬಳಿಕ ಕಾರ್ ಚಾಲಕ ಕಾರ್ ಸಮೇತ ಪರಾರಿಯಾಗಿದ್ದಾನೆ.

ಕಾರ್ ಚಾಲಕನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಪರಿಚಿತ ಪಾದಚಾರಿಗೆ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಕಾರ್ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.