ಕುಟುಂಬ ಸದಸ್ಯನಂತಿದ್ದ ನವಿಲು ವಿದ್ಯುತ್ ಸ್ಪರ್ಶಕ್ಕೆ ಬಲಿ.. ಗ್ರಾಮಸ್ಥರು ಕಣ್ಣೀರು

ಶಿವಮೊಗ್ಗ: ಊರಿನವರ ಮುದ್ದಿನ ನವಿಲು ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದ ಕಾರಣ ಊರಿನ ಮಂದಿ ಮತ್ತು  ಮನೆಯವರು ಸೇರಿ ಬಿಳಿ ಬಟ್ಟೆ ಹೊದಿಸಿ ಕಣ್ಣೀರು ಹಾಕಿ ಅಂತಿಮ ನಮನ ಸಲ್ಲಿಸಿದ ಮನ ಕಲಕುವ ಘಟನೆ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆಯಲ್ಲಿ ನಡೆದಿದೆ. ಕಳೆದ 2 ವರ್ಷದಿಂದ ಹಾರೋಗೊಳಿಗೆಯಲ್ಲಿ ನೆಲೆಸಿದ್ದ ನವಿಲಿಗೆ ಕೆಲವರು ರಾಮು ಎಂದು ಕರೆಯುತ್ತಿದ್ದರು. ಈ ನವಿಲು ಪ್ರಸಿದ್ಧ ಚಿಂತಕ ನೆಂಪೆ ದೇವರಾಜ್ ಮತ್ತು ಅವರ ಪತ್ನಿ ಸುಧಾ ಅವರ ಮಾತು ಕೇಳುವ, ನೃತ್ಯ ಮಾಡುವ ದೃಶ್ಯ […]

ಕುಟುಂಬ ಸದಸ್ಯನಂತಿದ್ದ ನವಿಲು ವಿದ್ಯುತ್ ಸ್ಪರ್ಶಕ್ಕೆ ಬಲಿ.. ಗ್ರಾಮಸ್ಥರು ಕಣ್ಣೀರು
ಸಾಧು ಶ್ರೀನಾಥ್​

Updated on: Aug 01, 2020 | 6:05 PM

ಶಿವಮೊಗ್ಗ: ಊರಿನವರ ಮುದ್ದಿನ ನವಿಲು ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದ ಕಾರಣ ಊರಿನ ಮಂದಿ ಮತ್ತು  ಮನೆಯವರು ಸೇರಿ ಬಿಳಿ ಬಟ್ಟೆ ಹೊದಿಸಿ ಕಣ್ಣೀರು ಹಾಕಿ ಅಂತಿಮ ನಮನ ಸಲ್ಲಿಸಿದ ಮನ ಕಲಕುವ ಘಟನೆ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆಯಲ್ಲಿ ನಡೆದಿದೆ.

ಕಳೆದ 2 ವರ್ಷದಿಂದ ಹಾರೋಗೊಳಿಗೆಯಲ್ಲಿ ನೆಲೆಸಿದ್ದ ನವಿಲಿಗೆ ಕೆಲವರು ರಾಮು ಎಂದು ಕರೆಯುತ್ತಿದ್ದರು. ಈ ನವಿಲು ಪ್ರಸಿದ್ಧ ಚಿಂತಕ ನೆಂಪೆ ದೇವರಾಜ್ ಮತ್ತು ಅವರ ಪತ್ನಿ ಸುಧಾ ಅವರ ಮಾತು ಕೇಳುವ, ನೃತ್ಯ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ನವಿಲು ಮರಣ ಹೊಂದಿದ್ದು ಊರಿನವರು ಕಂಬನಿ ಮಿಡಿದಿದ್ದಾರೆ.

ಶನಿವಾರ ಬೆಳಗ್ಗೆ ಯಾವುದೋ ಹಕ್ಕಿ ಒದ್ದಿದ್ದರಿಂದ ವಿದ್ಯುತ್ ತಂತಿ ಮೇಲೆ ಬಿದ್ದ ನವಿಲು ಸ್ಥಳದಲ್ಲೇ ಮೃತಪಟ್ಟಿದೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ ನೆಂಪೆ ದೇವರಾಜ್ ಮತ್ತು ಸ್ಥಳೀಯರು ನವಿಲಿಗೆ ಬಿಳಿ ಬಟ್ಟೆ ಹೊದಿಸಿ, ಹೂವು ಹಾಕಿ ಅಂತಿಮ ನಮನ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸಂಸ್ಕಾರ ಮಾಡಿದ್ದಾರೆ.

ಈ ನವಿಲು ಇಡೀ ಊರಿನ ಜನರ ಪ್ರೀತಿಗೆ ಪಾತ್ರವಾಗಿತ್ತು. ಜನರಂತೆ ಬುದ್ದಿ ಹೊಂದಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
-ಬಸವರಾಜ್ ಯರಗಣವಿ

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us