‘ಯುವ ಆಟಗಾರರಲ್ಲಿ ಕಿಚ್ಚು ಇರಲಿಲ್ಲ’ ಧೋನಿ ಹೇಳಿಕೆಗೆ ಟೀಕೆಗಳ ಸುರಿಮಳೆ

ಮರಳುಗಾಡಿನ ಮಹಾಯುದ್ಧದಲ್ಲಿ ಸೋಲಿನ ಸುಳಿಯಲ್ಲೇ ಗಿರಕಿ ಹೊಡೆಯುತ್ತಿರೋ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಳ ಹೆಸರಿಲ್ಲದಂತಾಗಿ ಹೋಗಿದೆ. ಆದ್ರೀಗ ಚೆನ್ನೈ ತಂಡದ ಕಳಪೆ ಪ್ರದರ್ಶನಕ್ಕೆ, ನಾಯಕ ಧೋನಿ ನೀಡಿರೋ ಅದೊಂದು ಹೇಳೀಕೆಗೆ ವ್ಯಾಪಕವಾದ ಟೀಕೆಗಳು ಕೇಳಿ ಬರ್ತಿದೆ. ಧೋನಿ ಆಡಿದ ಆ ಮಾತಿಗೆ ಮಾಜಿ ಕ್ರಿಕೆಟಿಗರು ಕೆಂಡ ಕಾರೋದಕ್ಕೆ ಶುರುಮಾಡಿದ್ದಾರೆ. ಅಷ್ಟಕ್ಕೂ ಚೆನ್ನೈ ಕಳಪೆ ಪ್ರದರ್ಶನಕ್ಕೆ ಧೋನಿ ನೀಡಿದ ಹೇಳಿಕೆ ಏನು ಗೊತ್ತಾ.. ಯುವ ಆಟಗಾರರಲ್ಲಿ ಕಿಚ್ಚು ಇರಲಿಲ್ಲ: ‘‘ ಯುವ ಆಟಗಾರರಿಗೆ ಕೆಲವು ಅವಕಾಶಗಳು ಇದ್ದವು. […]

ಯುವ ಆಟಗಾರರಲ್ಲಿ ಕಿಚ್ಚು ಇರಲಿಲ್ಲ ಧೋನಿ ಹೇಳಿಕೆಗೆ ಟೀಕೆಗಳ ಸುರಿಮಳೆ
ಧೋನಿ

Updated on: Oct 21, 2020 | 9:35 AM

ಮರಳುಗಾಡಿನ ಮಹಾಯುದ್ಧದಲ್ಲಿ ಸೋಲಿನ ಸುಳಿಯಲ್ಲೇ ಗಿರಕಿ ಹೊಡೆಯುತ್ತಿರೋ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಳ ಹೆಸರಿಲ್ಲದಂತಾಗಿ ಹೋಗಿದೆ. ಆದ್ರೀಗ ಚೆನ್ನೈ ತಂಡದ ಕಳಪೆ ಪ್ರದರ್ಶನಕ್ಕೆ, ನಾಯಕ ಧೋನಿ ನೀಡಿರೋ ಅದೊಂದು ಹೇಳೀಕೆಗೆ ವ್ಯಾಪಕವಾದ ಟೀಕೆಗಳು ಕೇಳಿ ಬರ್ತಿದೆ. ಧೋನಿ ಆಡಿದ ಆ ಮಾತಿಗೆ ಮಾಜಿ ಕ್ರಿಕೆಟಿಗರು ಕೆಂಡ ಕಾರೋದಕ್ಕೆ ಶುರುಮಾಡಿದ್ದಾರೆ. ಅಷ್ಟಕ್ಕೂ ಚೆನ್ನೈ ಕಳಪೆ ಪ್ರದರ್ಶನಕ್ಕೆ ಧೋನಿ ನೀಡಿದ ಹೇಳಿಕೆ ಏನು ಗೊತ್ತಾ..

ಯುವ ಆಟಗಾರರಲ್ಲಿ ಕಿಚ್ಚು ಇರಲಿಲ್ಲ:
‘‘ ಯುವ ಆಟಗಾರರಿಗೆ ಕೆಲವು ಅವಕಾಶಗಳು ಇದ್ದವು. ನಾವು ನೀಡಿದ ಅವಕಾಶದಲ್ಲಿ ಯುವ ಆಟಗಾರರಲ್ಲಿ ಪಂದ್ಯ ಗೆಲ್ಲಿಸಿಕೊಡವಂಥ ಸಾಮರ್ಥ್ಯ ನಮಗೆ ಕಾಣಿಸಲಿಲ್ಲ. ಈ ಕಾರಣದಿಂದ ಅನುಭವಿ ಆಟಗಾರರಿಗೆ ಮಣೆ ಹಾಕಲಾಯಿತು.’’
-ಎಂ.ಎಸ್.ಧೋನಿ, ಚೆನ್ನೈ ತಂಡದ ನಾಯಕ

ಧೋನಿ ನೀಡಿದ ಇದೇ ಹೇಳಿಕೆಗೆ ಮಾಜಿ ಕ್ರಿಕೆಟಿಗ ಕ್ರಿಷ್ಣಮಚಾರಿ ಶ್ರೀಕಾಂತ್ ಕೆಂಡಾಮಂಡಲವಾಗಿದ್ದಾರೆ. ಧೋನಿ ಯುವ ಆಟಗಾರರಿಗೆ ಅವಕಾಶ ನೀಡದೇ, ಅಸಂಬದ್ಧ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

ಧೋನಿ ಮಾತನ್ನ ಒಪ್ಪಿಕೊಳ್ಳೋದಿಲ್ಲ.
‘‘ ಧೋನಿ ಕೇವಲ ಒಂದು ಪಂದ್ಯದಲ್ಲಿ ಎನ್ ಜಗದೀಶನ್ ಮತ್ತು ಎರಡು ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್​ಗೆ ಅವಕಾಶ ನೀಡಿದ್ದಾರೆ. ಆದ್ರೆ ಕಳಪೆ ಪ್ರದರ್ಶನ ನೀಡುತ್ತಿರೋ ಅನುಭವಿ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ. ಈಗ ಯುವ ಕ್ರಿಕೆಟಿಗರಲ್ಲಿ ಗೆಲ್ಲೋ ಕಿಚ್ಚಿಲ್ಲ ಎಂದಿರೋ ಧೋನಿ ಮಾತನ್ನ ನಾನು ಒಪ್ಪಿಕೊಳ್ಳೋದಿಲ್ಲ.’’
-ಕ್ರಿಸ್ ಶ್ರೀಕಾಂತ್, ಮಾಜಿ ಕ್ರಿಕೆಟಿಗ

ನಿಜ.. ಕ್ರಿಸ್ ಶ್ರೀಕಾಂತ್ ಹೇಳಿರೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಯಾಕಂದ್ರೆ ಧೋನಿ ಕಳಪೆ ಪ್ರದರ್ಶನ ನೀಡುತ್ತಿರೋ ಕೇದಾರ್ ಜಾಧವ್ ಮತ್ತು ಪಿಯೂಷ್ ಚಾವ್ಲಾರನ್ನ ಅತೀಯಾಗಿ ನಂಬಿದ್ದಾರೆ. ಹೀಗಾಗೇ ಯುವ ಕ್ರಿಕೆಟಿಗರಾದ ಜಗದೀಶನ್ ಮತ್ತು ರುತುರಾಜ್​ಗೆ ಅವಕಾಶ ನೀಡ್ತಿಲ್ಲ.

ಚೆನ್ನೈ ಪರ ಜಾಧವ್, ಚಾವ್ಲಾ
ಚೆನ್ನೈ ಪರ 8 ಪಂದ್ಯಗಳನ್ನಾಡಿರೋ ಕೇದಾರ್ ಜಾಧವ್ ಗಳಿಸಿದ್ದು ಕೇವಲ 62 ರನ್​ಗಳಾದ್ರೆ, ಫಿಯೂಷ್ ಚಾವ್ಲಾ ಆಡಿದ 7 ಪಂದ್ಯಗಳಲ್ಲಿ ಪಡೆದಿದ್ದು ಕೇವಲ 6 ವಿಕೆಟ್​ಗಳನ್ನ ಮಾತ್ರ. ಇಲ್ಲೇ ಗೊತ್ತಾಗುತ್ತೆ ಧೋನಿ ನಂಬಿಕಸ್ತರೆನಿಸಿಕೊಂಡ ಕೇದಾರ್ ಜಾದವ್ ಮತ್ತು ಚಾವ್ಲಾ ಪ್ರದರ್ಶನ ಹೇಗಿದೆ ಅನ್ನೋದು. ಅಂದ್ರೆ ಇಷ್ಟು ಅನುಭವಿ ಪ್ಲೇಯರ್​ಗಳಿಗೆ ಪಂದ್ಯ ಗೆಲ್ಲಿಸಿಕೊಡೋ ಸಾಮರ್ಥ್ಯವಿಲ್ಲ. ಅಂತಹದ್ರಲ್ಲಿ ಧೋನಿ ಒಂದೆರಡು ಪಂದ್ಯಗಳಲ್ಲಿ ಮಂಕಾದ ಯುವ ಕ್ರಿಕೆಟಿಗರ ಮೇಲೆ ಸೋಲಿನ ಹೊಣೆ ಹೊರಿಸುತ್ತಿರೋದು ಎಷ್ಟು ಸರಿ. ಧೋನಿಯ ಈ ಹೇಳಿಕೆಗೆ ಪಾಕಿಸ್ತಾನ ತಂಡದ ದಿಗ್ಗಜ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ಕೂಡ ಪ್ರತಿಕ್ರಿಯಿಸಿದ್ದು, ಧೋನಿಗೊಂದು ಸಲಹೆ ನೀಡಿದ್ದಾರೆ.

ಬುದ್ದಿ ಉಪಯೋಗಿಸಿ ಧೋನಿ
‘‘ ನಾನು ನನ್ನ ಬುದ್ದಿವಂತಿಕೆ ಬಳಸಿ ಕ್ರಿಕೆಟ್ ಆಡಿದ್ದೇನೆ. ನೀವು ನಿಮ್ಮ ಬುದ್ದಿ ಬಳಸಿ ಕ್ರಿಕೆಟ್ ಆಡಿದ್ರೆ, ನಿಮಗೆ ವಯಸ್ಸಿನ ಹಂಗಿರೋದಿಲ್ಲ. ಒಂದು ವೇಳೆ ನೀವು ನಿಮ್ಮ ಬುದ್ದಿ ಉಪಯೋಗಿಸದಿದ್ರೆ, ಮೊದಲಿನಂತೆ ಚಾರ್ಮ್ ಇರೋ ಆಟಗಾರನಾಗೋದಿಲ್ಲ.’’
-ಜಾವೇದ್ ಮಿಯಾಂದಾದ್, ಪಾಕ್ ಮಾಜಿ ಕ್ರಿಕೆಟಿಗ

ಮಿಯಾಂದಾದ್ ಹೇಳಿರೋ ಮಾತನ್ನ ಅಲ್ಲಗೆಳೆಯೋ ಹಾಗಿಲ್ಲ. ಇತ್ತಿಚಿಗೆ ಧೋನಿ ತಮ್ಮ ಬುದ್ದಿವಂತಿಕೆಯನ್ನ ಉಪಯೋಗಿಸುತ್ತಿಲ್ಲ. ಒಂದು ವೇಳೇ ಧೋನಿ ಬುದ್ದಿ ಉಪಯೋಗಿಸಿದ್ದೇ ಆಗಿದ್ರೆ, ಜಾಧವ್, ಚಾವ್ಲಾ ಚೆನ್ನೈ ತಂಡದಲ್ಲಿರುತ್ತಿರಲಿಲ್ಲ. ಹಾಗೇ ಧೋನಿ, ಸೋಲಿಗೆ ಯುವ ಕ್ರಿಕೆಟಿಗರನ್ನ ಹೊಣೆಗಾರರನ್ನಾಗಿಯೂ ಮಾಡುತ್ತಿರಲಿಲ್ಲ.

Published On - 9:33 am, Wed, 21 October 20