ಭೀಕರ ಅಪಘಾತ: ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮೂವರ ದಾರುಣ ಸಾವು

|

Updated on: Nov 13, 2020 | 8:19 AM

ಚಾಮರಾಜನಗರ: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಬಳಿ ನಡೆದಿದೆ. ಮೃತರು ಹನೂರು ತಾಲೂಕಿನ ಪಾಡಿಮೇಡು ಗ್ರಾಮದ ನಿವಾಸಿಗಳಾಗಿದ್ದು, ಡೇವಿಡ್, ಸೇತು ಮತ್ತು ಶೇಷುರಾಜ್ ಮೃತ ದುರ್ದೈವಿಗಳೆಂದು ತಿಳಿದುಬಂದಿದೆ. ಕೊಳ್ಳೇಗಾಲದಿಂದ ಮಳವಳ್ಳಿ ಕಡೆಗೆ ಬೈಕ್​ನಲ್ಲಿ ಮೂವರು ಹೋಗುತ್ತಿದ್ದರು. ಈ ವೇಳೆ ಮಳವಳ್ಳಿಯಿಂದ ಕೊಳ್ಳೇಗಾಲ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.​ ಕೊಳ್ಳೇಗಾಲ […]

ಭೀಕರ ಅಪಘಾತ: ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮೂವರ ದಾರುಣ ಸಾವು
Follow us on

ಚಾಮರಾಜನಗರ: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಬಳಿ ನಡೆದಿದೆ.

ಮೃತರು ಹನೂರು ತಾಲೂಕಿನ ಪಾಡಿಮೇಡು ಗ್ರಾಮದ ನಿವಾಸಿಗಳಾಗಿದ್ದು, ಡೇವಿಡ್, ಸೇತು ಮತ್ತು ಶೇಷುರಾಜ್ ಮೃತ ದುರ್ದೈವಿಗಳೆಂದು ತಿಳಿದುಬಂದಿದೆ. ಕೊಳ್ಳೇಗಾಲದಿಂದ ಮಳವಳ್ಳಿ ಕಡೆಗೆ ಬೈಕ್​ನಲ್ಲಿ ಮೂವರು ಹೋಗುತ್ತಿದ್ದರು. ಈ ವೇಳೆ ಮಳವಳ್ಳಿಯಿಂದ ಕೊಳ್ಳೇಗಾಲ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.​

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.