ರವಿ ಬೆಳಗೆರೆ ನಿಧನಕ್ಕೂ ಹತ್ತು ನಿಮಿಷಗಳ ಮುಂಚೆ ಆಗಿದ್ದೇನು? ಆಪ್ತ ವಾದಿರಾಜ್ ಗಮನಿಸಿದ್ದೇನು?
ಬೆಂಗಳೂರು: ಖ್ಯಾತ ಬರಹಗಾರ ಹಾಗೂ ನಟ ನಿರೂಪಕ ರವಿ ಬೆಳಗೆರೆ ಅವರ ನಿಧನ ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿದ್ದು, ರವಿ ಬೆಳಗೆರೆ ಅವರ ನಿಧನಕ್ಕೂ ಮುಂಚಿನ ಹತ್ತು ನಿಮಿಷಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಕಳೆದ ಕೆಲವು ತಿಂಗಳುಗಳಿಂದ ಬೆಳಗೆರೆ ಅವರು ತಮ್ಮ ಕಚೇರಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಎಂದಿನಂತೆ ಕಚೇರಿಯಲ್ಲೇ ಉಳಿದುಕೊಂಡಿದ್ದ ರವಿ ಬೆಳಗೆರೆ ನೆನ್ನೆ ರಾತ್ರಿ ಕಚೇರಿಯಲ್ಲೇ ನಿದ್ರೆಗೆ ಜಾರಿದ್ದಾರೆ. ರವಿಬೆಳೆಗೆರೆ ಜೊತೆ ಅವರ ಆಪ್ತ ವಾದಿರಾಜ್ ಯಾವಗಲೂ ಜೊತೆಯಲ್ಲಿರುತಿದ್ದರು. ಅದರಂತೆ ನೆನ್ನೆ ರಾತ್ರಿ […]
ಬೆಂಗಳೂರು: ಖ್ಯಾತ ಬರಹಗಾರ ಹಾಗೂ ನಟ ನಿರೂಪಕ ರವಿ ಬೆಳಗೆರೆ ಅವರ ನಿಧನ ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿದ್ದು, ರವಿ ಬೆಳಗೆರೆ ಅವರ ನಿಧನಕ್ಕೂ ಮುಂಚಿನ ಹತ್ತು ನಿಮಿಷಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ಕೆಲವು ತಿಂಗಳುಗಳಿಂದ ಬೆಳಗೆರೆ ಅವರು ತಮ್ಮ ಕಚೇರಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಎಂದಿನಂತೆ ಕಚೇರಿಯಲ್ಲೇ ಉಳಿದುಕೊಂಡಿದ್ದ ರವಿ ಬೆಳಗೆರೆ ನೆನ್ನೆ ರಾತ್ರಿ ಕಚೇರಿಯಲ್ಲೇ ನಿದ್ರೆಗೆ ಜಾರಿದ್ದಾರೆ. ರವಿಬೆಳೆಗೆರೆ ಜೊತೆ ಅವರ ಆಪ್ತ ವಾದಿರಾಜ್ ಯಾವಗಲೂ ಜೊತೆಯಲ್ಲಿರುತಿದ್ದರು. ಅದರಂತೆ ನೆನ್ನೆ ರಾತ್ರಿ ಕೂಡ ವಾದಿರಾಜ್ ಬೆಳಗೆರೆ ಜೊತೆಯಲ್ಲೇ ಉಳಿದುಕೊಂಡಿದ್ದರು.
ಮಧ್ಯರಾತ್ರಿ 12.15ರ ಸುಮಾರಿಗೆ ಎಚ್ಚರವಾಗಿ ನೀರು ಕೇಳಿದ ಬೆಳಗೆರೆ.. ನಿದ್ರೆಯಲ್ಲಿದ್ದ ರವಿ ಬೆಳಗೆರೆಗೆ ಮಧ್ಯರಾತ್ರಿ 12.15ರ ಸುಮಾರಿಗೆ ಎಚ್ಚರವಾಗಿದೆ. ಬಳಿಕ ಆಪ್ತ ವಾದಿರಾಜ್ಗೆ ಬೆಳಗೆರೆ ನೀರು ಕೊಡಲು ಹೇಳಿದ್ದಾರೆ. ನೀರು ಕುಡಿದ ನಂತರ ಬೆಳಗೆರೆ ವಾದಿರಾಜ್ನನ್ನು ಸಮಯ ಎಷ್ಟು ಎಂದು ಕೇಳಿದ್ದಾರೆ. ಆಗ ವಾದಿರಾಜ್ ರೆಸ್ಟರೂಂಗೆ ಹೊಗ್ತಿರಾ ಸರ್ ಅಂತ ರವಿ ಬೆಳಗೆರೆ ಅವರನ್ನು ಕೇಳಿದ್ದಾರೆ. ಈ ವೇಳೆ ರವಿ ಬೆಳಗೆರೆ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ.
ಕೂಡಲೇ ಆಂಬ್ಯುಲೆನ್ಸ್ಗೆ ವಾದಿರಾಜ್ ಕಾಲ್ ಮಾಡಿದ್ದಾರೆ. ಜೊತೆಗೆ ಕುಟುಂಬಸ್ಥರಿಗೂ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಘಟನೆ ನಡೆದ 10 ನಿಮಿಷದಲ್ಲೇ ಕಚೇರಿ ಬಳಿ ಮಗ ಕರ್ಣ, ಮಗಳು ಚೇತನ ಹಾಗೂ ಕುಟುಂಬಸ್ಥರು ಆಗಮಿಸಿದ್ದಾರೆ. ಅಷ್ಟೊತ್ತಿಗಾಗಲೇ ಕಚೇರಿ ಮುಂದೆ ಆಂಬ್ಯುಲೆನ್ಸ್ ಬಂದು ನಿಂತಿತ್ತು. ರವಿ ಬೆಳಗೆರೆ ಹೃದಯ ಬಡಿತ ಚೆಕ್ ಮಾಡಿದ ಆಂಬ್ಯಲೆನ್ಸ್ನಲ್ಲಿದ್ದ ವೈದ್ಯರು ಮೃತ ಪಟ್ಟಿರೋದಾಗಿ ತಿಳಿಸಿದ್ದಾರೆ.
ಈ ಬಳಿಕ ಕುಟುಂಬಸ್ಥರು ಮತ್ತೆ ಕುಮಾರಸ್ವಾಮಿ ಲೇಔಟ್ನ ಸಾಗರ್ ಅಪೋಲೊ ಆಸ್ಪತ್ರೆಗೆ ರವಿ ಬೆಳಗೆರೆ ಕರೆದೊಯ್ದಿದ್ದಾರೆ. ಈ ವೇಳೆ ಆಸ್ಪತ್ರೆ ವೈದ್ಯರು ಸಹ ರವಿ ಬೆಳಗೆರೆ ಅವರು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ಬಳಿಕ ರವಿ ಬೆಳಗೆರೆ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಮನೆಗೆ ತಂದಿದ್ದಾರೆ.