ಧಾರವಾಡದಲ್ಲಿ ಮೂರು ಕುದುರೆಗಳು ಸಾವು; ವಾಹನ ಗುದ್ದಿರುವ ಶಂಕೆ

| Updated By: sandhya thejappa

Updated on: Aug 11, 2021 | 2:34 PM

ಸಾಮಾನ್ಯವಾಗಿ ಕುದುರೆಗಳು ಕುರಿಗಾಹಿಗಳಿಗೆ ಸೇರಿರುತ್ತವೆ. ಕುರಿಗಾಹಿಗಳು ಕುರಿಗಳೊಂದಿಗೆ ರೈತರ ಜಮೀನುಗಳಲ್ಲಿ ಬಿಡಾರ ಹೂಡಿರುತ್ತಾರೆ. ಈ ವೇಳೆ ರಾತ್ರಿ ಹೊತ್ತಿನಲ್ಲಿ ತಮ್ಮ ಬಳಿ ಇರುವ ಕುದುರೆಗಳನ್ನು ಹೊರಗೆ ಬಿಡುತ್ತಾರೆ.

ಧಾರವಾಡದಲ್ಲಿ ಮೂರು ಕುದುರೆಗಳು ಸಾವು; ವಾಹನ ಗುದ್ದಿರುವ ಶಂಕೆ
ಸಾವನ್ನಪ್ಪಿರುವ ಕುದುರೆಗಳು
Follow us on

ಧಾರವಾಡ: ಬೆಳಗಾವಿ ರಸ್ತೆಯಲ್ಲಿ ಮೂರು ಕುದುರೆಗಳು ಸಾವನ್ನಪ್ಪಿದ್ದು, ವಾಹನ ಗುದ್ದಿರುವ ಶಂಕೆ ವ್ಯಕ್ತವಾಗಿದೆ. ನಗರದ ಕೃಷಿ ವಿಶ್ವವಿದ್ಯಾಲಯದ ಬಳಿ ನಡೆದ ಘಟನೆಯಲ್ಲಿ ಮೂರು ಕುದುರೆಗಳು ಮೃತಪಟ್ಟಿವೆ. ಈ ಘಟನೆ ತಡರಾತ್ರಿ ನಡೆದಿರಬಹುದು ಎನ್ನಲಾಗಿದೆ. ಬೆಳಿಗ್ಗೆ ವಾಕಿಂಗ್ ಹೋದವರು ಈ ಕುದುರೆಗಳನ್ನು ನೋಡಿ ಪ್ರಾಣಿ ಪ್ರಿಯರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವನ್ಯ ಜೀವಿ ರಕ್ಷಕ ಸೋಮಶೇಖರ್, ಇವುಗಳನ್ನು ಪರಿಶೀಲಿಸಿ ನಡೆಸಿದ್ದಾರೆ.

ಸಾಮಾನ್ಯವಾಗಿ ಕುದುರೆಗಳು ಕುರಿಗಾಹಿಗಳಿಗೆ ಸೇರಿರುತ್ತವೆ. ಕುರಿಗಾಹಿಗಳು ಕುರಿಗಳೊಂದಿಗೆ ರೈತರ ಜಮೀನುಗಳಲ್ಲಿ ಬಿಡಾರ ಹೂಡಿರುತ್ತಾರೆ. ಈ ವೇಳೆ ರಾತ್ರಿ ಹೊತ್ತಿನಲ್ಲಿ ತಮ್ಮ ಬಳಿ ಇರುವ ಕುದುರೆಗಳನ್ನು ಹೊರಗೆ ಬಿಡುತ್ತಾರೆ. ಈ ವೇಳೆ ಕುದುರೆಗಳ ಕಾಲು ಹಾಗೂ ಕುತ್ತಿಗೆಗೆ ಹಗ್ಗವನ್ನು ಕಟ್ಟಿರುತ್ತಾರೆ. ಒಂದು ವೇಳೆ ಮೇಯುತ್ತಾ ಹೋದರೂ ತಾವಿರುವ ಸ್ಥಳದಿಂದ ಬಹಳ ದೂರ ಹೋಗಬಾರದು ಅನ್ನೋದು ಕುರಿಗಾಹಿಗಳ ಉದ್ದೇಶವಾಗಿರುತ್ತದೆ.

ಈ ಕುದುರೆಗಳಿಗೂ ಕೂಡ ಅದೇ ರೀತಿ ಕುತ್ತಿಗೆ ಹಾಗೂ ಕಾಲಿಗೆ ಹಗ್ಗ ಕಟ್ಟಲಾಗಿತ್ತು. ಬಹುಶಃ ರಾತ್ರಿ ಹೊತ್ತು ಮೇಯುತ್ತಾ ರಸ್ತೆಗೆ ಬಂದಾಗ ದೊಡ್ಡ ವಾಹನ ಡಿಕ್ಕಿ ಹೊಡೆದಿರುವ ಅನುಮಾನ ಮೂಡಿದ್ದು, ಸ್ಥಳದಲ್ಲಿ ವಾಹನದ ಹೆಡ್ ಲೈಟ್ ಒಡೆದು ಬಿದ್ದಿದೆ.

ಇದನ್ನೂ ಓದಿ

ಶಾಲೆ ತೆರೆಯಲು ಸಿದ್ಧವಾಗಿರುವ ರಾಜ್ಯಗಳಿಗೆ ಮುನ್ನೆಚ್ಚರಿಕೆ, ಸಲಹೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

ಹೂಗುಚ್ಚ, ಹಾರ, ತುರಾಯಿ ನಿಷೇಧ ಹಿಂಪಡೆಯುವಂತೆ ಆಗ್ರಹ; ಆಗಸ್ಟ್ 12ಕ್ಕೆ ಬೃಹತ್ ಪ್ರತಿಭಟನೆ ನಡೆಸಲು ಪುಷ್ಪ ಬೆಳೆಗಾರರ ಸಂಘ ನಿರ್ಧಾರ

(Three horses dead in Dharwad and There is a suspicion of accident)