ಬೆಳಗಾವಿ: ಬೆಳಗಾವಿಯಲ್ಲಿ ತರಬೇತಿ ಪಡೆಯುತ್ತಿದ್ದ ಟ್ರೈನಿ ಯೋಧನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
ಮೃತ ಯೋಧನನ್ನು ಹರಿಯಾಣ ಮೂಲದ ಅಮೀರ್ ಖಾನ್ ಎಂದು ಗುರುತಿಸಲಾಗಿದ್ದು, ಈತ ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್‌ಫೋರ್ಸ್ ಟ್ರೈನಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆಯುತ್ತಿದ್ದ. ಏರ್‌ಫೋರ್ಸ್ ಟ್ರೈನಿಂಗ್ ಸ್ಕೂಲ್‌ನ ಗಾರ್ಡ್ ರೂಮ್‌ನಲ್ಲಿ ಯೋಧ ರೈಫಲ್‌ನಿಂದ ಸೆಲ್ಫ್ ಶೂಟ್ ಮಾಡಿಕೊಂಡಿದ್ದಾನೆ.
ಗುಂಡು ಹಾರಿಸಿಕೊಂಡ ತಕ್ಷಣವೇ ಸಹವರ್ತಿಗಳು ಯೋಧನನ್ನ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ಮುನ್ನವೇ ಯೋಧ ಕೊನೆಯುಸಿರೆಳೆದಿದ್ದಾನೆ. ಯೋಧನ ಈ ಕ್ರಮಕ್ಕೆ ಕಾರಣಗಳೇನು ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.