ವಿವಿಧ ಬೇಡಿಕೆ ಆಗ್ರಹಿಸಿ ಚಾಲಕರಿಂದ ಅರೆಬೆತ್ತಲೆ ಪ್ರತಿಭಟನೆ: ಡಿಕೆಶಿ, ಕೋಡಿಹಳ್ಳಿ ಭಾಗಿ

|

Updated on: Feb 01, 2021 | 7:45 AM

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಇಂದು ಚಾಲಕರಿಂದ ಅರೆಬೆತ್ತಲೆ ಪ್ರತಿಭಟನೆ ನಡೆಯಲಿದೆ. ಚಾಲಕರ ಧರಣಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಲಿದ್ದಾರೆ.

ವಿವಿಧ ಬೇಡಿಕೆ ಆಗ್ರಹಿಸಿ ಚಾಲಕರಿಂದ ಅರೆಬೆತ್ತಲೆ ಪ್ರತಿಭಟನೆ: ಡಿಕೆಶಿ, ಕೋಡಿಹಳ್ಳಿ ಭಾಗಿ
ಸಂಗ್ರಹ ಚಿತ್ರ
Follow us on

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಇಂದು ಚಾಲಕರಿಂದ ಅರೆಬೆತ್ತಲೆ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 10ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂಪಾರ್ಕ್‌ವರೆಗೆ ಱಲಿ ನಡೆಸಲು ಚಾಲಕರು ತಯಾರಿ ನಡೆಸಿದ್ದಾರೆ. ಕರ್ನಾಟಕ ಚಾಲಕರ ಒಕ್ಕೂಟ ಮತ್ತು ರಾಷ್ಟ್ರೀಯ ಚಾಲಕರ ಒಕ್ಕೂಟದಿಂದ ಈ ಹೋರಾಟ ನಡೆಯುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಚಾಲಕರು ಪ್ರತಿಭಟನೆ ನಡೆಸುತ್ತಾರೆ.

ಚಾಲಕರ ಧರಣಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಲಿದ್ದಾರೆ. ಚಾಲಕರು ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸಲಿದ್ದು ಪ್ರತಿಭಟನೆಯಲ್ಲಿ 110 ಚಾಲಕ ಸಂಘಟನೆಗಳು ಭಾಗಿಯಾಗಲಿವೆ.

ಚಾಲಕರ ಪ್ರಮುಖ ಬೇಡಿಕೆಗಳು
ಚಾಲಕರ ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಬೇಕು
ಪೆಟ್ರೋಲ್, ಡೀಸೆಲ್ ದರ ಇಳಿಕೆ ತುರ್ತಾಗಿ ಮಾಡಬೇಕು
‘ಸಾರಥಿ ಸೂರು’ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು
ಚಾಲಕರ ದಿನಾಚರಣೆ ಸರ್ಕಾರದಿಂದಲೇ ಆಚರಿಸಬೇಕು

ಸಾರಿಗೆ ನೌಕರರ ಪ್ರತಿಭಟನೆ ಬಿಸಿ ಜೋರು, ಆಟೋ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ