ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರ ಹೆಸರುಗಳು 2020ರ ಟಾಪ್-10 ಟ್ವೀಟ್ಗಳಲ್ಲಿ ಕ್ರಮವಾಗಿ ಮೊದಲ ಮತ್ತು 2ನೇ ಸ್ಥಾನ ಪಡೆದಿವೆ. ಟಾಪ್-10ರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು 7ನೇ ಸ್ಥಾನದಲ್ಲಿದೆ ಎಂದು ಟ್ವಿಟರ್ನ ವಾರ್ಷಿಕ ಪರಾಮರ್ಶೆ ವರದಿ ತಿಳಿಸಿದೆ.
ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ನಿಯೋಜಿತರಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಈ ಪಟ್ಟಿಯಲ್ಲಿರುವ ಏಕೈಕ ಮಹಿಳೆ. ಅವರ ಹೆಸರು 10ನೇ ಸ್ಥಾನದಲ್ಲಿದೆ.
ಫೇಸ್ಬುಕ್ ಮೂಲಕ ಜನರು ವಿಶ್ವ ನಾಯಕರಿಂದ ಬದಲಾವಣೆ ಮತ್ತು ಉತ್ತರದಾಯಿತ್ವಕ್ಕೆ ಒತ್ತಾಯಿಸುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ 2020ರಲ್ಲಿ ಸುಮಾರು 70 ಕೋಟಿ ಟ್ವೀಟ್ಗಳು ಬಂದಿವೆ. ಡೊನಾಲ್ಡ್ ಟ್ರಂಪ್, ಜೋಬಿಡೆನ್, ಬರಾಕ್ ಒಬಾಮ, ನರೇಂದ್ರ ಮೋದಿ ಮತ್ತು ಕಮಲಾ ಹ್ಯಾರಿಸ್ ಹೆಸರುಗಳು ಜಾಗತಿಕವಾಗಿ ಹೆಚ್ಚು ಬಳಕೆಯಾಗಿವೆ ಎಂದು ಟ್ವಿಟರ್ನ ಗ್ರಾಹಕ ಸಂವಹನ ವಿಭಾಗದ ಮುಖ್ಯಸ್ಥರಾದ ಟ್ರೇಸಿ ಮೆಕ್ಗ್ರಾ ಹೇಳಿದ್ದಾರೆ.
2020ರ ಜನಪ್ರಿಯ ಹ್ಯಾಷ್ಟ್ಯಾಗ್ #COVID19 ಆಗಿತ್ತು. ಇದರ ಜೊತೆಗೆ #StayHome ಹ್ಯಾಷ್ಟ್ಯಾಗ್ ಹೊತ್ತ ಟ್ವೀಟ್ಗಳು ಸಹ ಗಮನಾರ್ಹ ಪ್ರಮಾಣದಲ್ಲಿ ಟ್ವೀಟ್ ಆಗಿವೆ. ಕೊರೊನಾ ಸೋಂಕಿಗೆ ಸಂಬಂಧಿಸಿದ ಸುಮಾರು 40 ಕೋಟಿ ಟ್ವೀಟ್ಗಳು ಪೋಸ್ಟ್ ಆಗಿವೆ. #StayHome ಅತಿಹೆಚ್ಚು ಬಾರಿ ಟ್ವೀಟ್ ಆದ ಹ್ಯಾಷ್ಟ್ಯಾಗ್ಗಳಲ್ಲಿ 3ನೇ ಸ್ಥಾನದಲ್ಲಿದೆ.
2ನೇ ಸ್ಥಾನದಲ್ಲಿರುವ ಹ್ಯಾಷ್ಟ್ಯಾಗ್ #BlackLivesMatter. ಪೊಲೀಸ್ ದೌರ್ಜನ್ಯದಿಂದ ಜಾರ್ಜ್ ಫ್ಲಾಯ್ಡ್ ನಿಧನರಾದ ನಂತರ #BlackLivesMatter ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಪ್ರತಿಭಟನೆಯ ಅಸ್ತ್ರವಾಯಿತು. ಅತಿಹೆಚ್ಚು ಬಾರಿ ಟ್ವೀಟ್ ಆದ ಹೆಸರುಗಳ ಪಟ್ಟಿಯಲ್ಲಿ ಫ್ಲಾಯ್ಡ್ Floyd 3ನೇ ಸ್ಥಾನದಲ್ಲಿದೆ.
Google Search | ಗೂಗಲ್ನಲ್ಲಿ ಈ ವರ್ಷ ಹೆಚ್ಚು ಜನರು ಹುಡುಕಿದ್ದೇನು?