ಬೆಂಗಳೂರು: ಕೊರೊನಾ ಸೋಂಕಿತ ಮೃತಪಟ್ಟು 3 ದಿನವಾದ್ರೂ ಮೃತದೇಹ ನೀಡದೆ ಸತಾಯಿಸುತ್ತಿದ್ದ ಸೇಂಟ್ ಮಾರ್ಥಾಸ್ ಆಸ್ಪತ್ರೆ ಕೊನೆಗೂ ಮೃತದೇಹವನ್ನ ಹಸ್ತಾಂತರಿಸಿದೆ. ಟಿವಿ9 ವರದಿಯಿಂದ ಎಚ್ಚೆತ್ತು ಬಿಬಿಎಂಪಿಗೆ ಕೊರೊನಾ ಸೋಂಕಿತನ ಶವವನ್ನು ಆಸ್ಪತ್ರೆ ಹಸ್ತಾಂತರ ಮಾಡಿದೆ.
ಜೂನ್ 14ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ರೋಗಿಯೊಬ್ಬರನ್ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಬಳಿಕ ಆತನಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದ್ರೂ ಕೋವಿಡ್ ಆಸ್ಪತ್ರೆಗೆ ಆಡಳಿತ ಮಂಡಳಿ ಶಿಫ್ಟ್ ಮಾಡಲಿಲ್ಲ. ಪೇಷಂಟ್ ಆರೋಗ್ಯ ಸ್ಥಿತಿ ಸರಿ ಇಲ್ಲ ಅಂತಾ ಹೇಳಿ ಅಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಿದರು. ಆದರೆ, ಜೂನ್ 25 ರಂದು ಚಿಕಿತ್ಸೆ ಫಲಿಸದೆ, ಸೋಂಕಿತ ಮೃತಪಟ್ಟಿದ್ದರು.
ಟಿವಿ9 ಇಂಪ್ಯಾಕ್ಟ್:
ಚಿಕಿತ್ಸೆಗೆ ತಗಲಿದ ಖರ್ಚೆಂದು ಒಟ್ಟು 2 ಲಕ್ಷದ 68 ಸಾವಿರದ 725 ರೂಪಾಯಿ ಬಿಲ್ ಮಾಡಿದ್ದಾರೆ. ಇನ್ಶೂರೆನ್ಸ್ನಿಂದ 1 ಲಕ್ಷದ 80 ಸಾವಿರದವರೆಗೂ ಕ್ಲೈಮ್ ಆಗಿದೆ. ಆದರೆ, ಉಳಿದ ಹಣವನ್ನು ಕಟ್ಟೋವರೆಗೂ ಮೃತದೇಹ ನೀಡುವುದಿಲ್ಲ ಎಂದು ಆಸ್ಪತ್ರೆಯವರು ಸತಾಯಿಸುತ್ತಿದ್ದಾರೆ ಎಂದು ಮೃತನ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದರು.
ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಬಿಬಿಎಂಪಿಗೆ ಮೃತದೇಹವನ್ನು ಆಸ್ಪತ್ರೆ ಹಸ್ತಾಂತರ ಮಾಡಿದೆ. ಬೆಂಗಳೂರಿನ ಸುಮನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
Published On - 5:23 pm, Sun, 28 June 20