ಸಮೃದ್ಧ ನಿದ್ರೆಯಲ್ಲಡಗಿದೆ ಸೌಂದರ್ಯದ ರಹಸ್ಯ!

|

Updated on: Oct 01, 2019 | 5:28 PM

ಸುಂದರ ನಿದ್ರೆ ಎನ್ನುವ ಶಬ್ದವನ್ನು ನೀವು ಕೇಳಿರಬಹುದು. ಹೌದು, ನಿದ್ರೆಯು ಸರಿಯಾಗಿದ್ದರೆ ಸೌಂದರ್ಯವು ಚೆನ್ನಾಗಿರುತ್ತೆ. ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಿದ್ದರೆ ಅದು ನಿಮ್ಮ ಸೌಂದರ್ಯದ ಮೇಲೆ ಅದ್ಭುತವನ್ನು ಉಂಟು ಮಾಡುತ್ತದೆ. ಅದೇ ನಿದ್ರಾಹೀನತೆ ಇದ್ದರೆ ಅದು ನಿಮ್ಮ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹ ಮತ್ತು ಮನಸ್ಸನ್ನು ಪುನರ್ಶ್ಚೇತನಗೊಳಿಸಲು ಸರಿಯಾದ ನಿದ್ರೆ ಅತೀ ಅಗತ್ಯ.ರಾತ್ರಿ ವೇಳೆ ನಿದ್ರೆಯು ಸರಿಯಾದರೆ ಆಗ ಚರ್ಮವನ್ನು ಪುನರುಜ್ಜೀವನಗೊಳಿಸುವುದು. ಆದರೆ ನಿದ್ರೆಯ ತೊಂದರೆ ಕಾಣಿಸಿಕೊಂಡರೆ ಆಗ ಚರ್ಮ ಮತ್ತು ಚರ್ಮಕ್ಕೆ […]

ಸಮೃದ್ಧ ನಿದ್ರೆಯಲ್ಲಡಗಿದೆ ಸೌಂದರ್ಯದ ರಹಸ್ಯ!
Follow us on

ಸುಂದರ ನಿದ್ರೆ ಎನ್ನುವ ಶಬ್ದವನ್ನು ನೀವು ಕೇಳಿರಬಹುದು. ಹೌದು, ನಿದ್ರೆಯು ಸರಿಯಾಗಿದ್ದರೆ ಸೌಂದರ್ಯವು ಚೆನ್ನಾಗಿರುತ್ತೆ. ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಿದ್ದರೆ ಅದು ನಿಮ್ಮ ಸೌಂದರ್ಯದ ಮೇಲೆ ಅದ್ಭುತವನ್ನು ಉಂಟು ಮಾಡುತ್ತದೆ. ಅದೇ ನಿದ್ರಾಹೀನತೆ ಇದ್ದರೆ ಅದು ನಿಮ್ಮ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ದೇಹ ಮತ್ತು ಮನಸ್ಸನ್ನು ಪುನರ್ಶ್ಚೇತನಗೊಳಿಸಲು ಸರಿಯಾದ ನಿದ್ರೆ ಅತೀ ಅಗತ್ಯ.ರಾತ್ರಿ ವೇಳೆ ನಿದ್ರೆಯು ಸರಿಯಾದರೆ ಆಗ ಚರ್ಮವನ್ನು ಪುನರುಜ್ಜೀವನಗೊಳಿಸುವುದು. ಆದರೆ ನಿದ್ರೆಯ ತೊಂದರೆ ಕಾಣಿಸಿಕೊಂಡರೆ ಆಗ ಚರ್ಮ ಮತ್ತು ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಬರಬಹುದು.

ನಿದ್ರೆ ಕಡಿಮೆಯಾದರೆ ದೇಹದಲ್ಲಿ ಕಾರ್ಟಿಸಲ್ ಪ್ರಮಾಣವು ಹೆಚ್ಚಾಗುವುದು. ಇದು ಚರ್ಮದಲ್ಲಿ ಉರಿಯೂತ ಉಂಟು ಮಾಡುವ ಹಾರ್ಮೋನ್ ಆಗಿದೆ ಮತ್ತು ಚರ್ಮವನ್ನು ಇದು ನಿಸ್ತೇಜಗೊಳಿಸುವುದು. ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಆಗ ಕಾಂತಿ ಕಳೆದುಕೊಳ್ಳುವಿರಿ ಮತ್ತು ಚರ್ಮವು ಒಣ ಹಾಗೂ ನಿಸ್ತೇಜವಾಗುವುದು.

ನಿದ್ರಾಹೀನತೆಯ ಮತ್ತೊಂದು ಪ್ರಮುಖ ಪರಿಣಾಮವೆಂದರೆ ಮೊಡವೆ, ಬೊಕ್ಕೆ ಇತ್ಯಾದಿಗಳು ಮೂಡುವುದು. ನಿದ್ರಾ ಹೀನತೆಯಿಂದಾಗಿ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾಗುವುದು ಮತ್ತು ಚರ್ಮದ ಮೇಲೆ ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳು ದಾಳಿ ಮಾಡುವುದು. ನಿದ್ರಾಹೀನತೆಯಿಂದಾಗಿ ಚರ್ಮದಲ್ಲಿ ಉರಿಯೂತ ಉಂಟಾಗುವುದು ಮತ್ತು ಇದರಿಂದ ಮೊಡವೆಯಂತಹ ಸಮಸ್ಯೆ ಕಂಡುಬರುವುದು.

ನಿದ್ರಾಹೀನತೆಯಿಂದಾಗಿ ಮೊಡವೆಗಳು ಮೂಡುವುದು ಮಾತ್ರವಲ್ಲದೆ, ನಿಮಗೆ ಯಾವುದೇ ಚರ್ಮದ ಸಮಸ್ಯೆಯಿದ್ದರೆ ಅದನ್ನು ಮತ್ತಷ್ಟು ಹೆಚ್ಚಿಸುವುದು. ಮೊಡವೆ ಅಥವಾ ಇನ್ಯಾವುದೇ ಸಮಸ್ಯೆ ಕಾಣಿಸುತ್ತಿದ್ದರೆ ಆಗ ನಿದ್ರಾ ಹೀನತೆಯಿಂದ ಅದುಮತ್ತಷ್ಟು ಕೆಡುವುದು. ರಾತ್ರಿ ವೇಳೆ ನಿದ್ರೆ ಸರಿಯಾಗಿದ್ದರೆ ಆಗ ಚರ್ಮವು ವೇಗವಾಗಿ ಚೇತರಿಸುವುದು.

ಚರ್ಮವನ್ನು ಪುನರ್ಶ್ಚೇತನಗೊಳಿಸಲು ಮತ್ತು ಆರೋಗ್ಯವಾಗಿಡಲು ಸರಿಯಾದ ನಿದ್ರೆಯು ಅತೀ ಅಗತ್ಯವಾಗಿದೆ. ನಿದ್ರಾಹೀನತೆಯಿಂದಾಗಿ ಚರ್ಮದಲ್ಲಿ ಕಾಲಜನ್ ಉತ್ಪತ್ತಿಯು ಕಡಿಮೆ ಮಾಡುವುದು ಮತ್ತು ಇದರಿಂದಾಗಿ ಚರ್ಮದಲ್ಲಿ ಗೆರೆ ಹಾಗೂ ನೆರಿಗೆಗಳು ಮೂಡುವುದು. ನಿದ್ರಾಹೀನತೆಯಿಂದಾಗಿ ಚರ್ಮವು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು ಮತ್ತು ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳಬಹುದು.

ನಿದ್ರಿಸುವ ವೇಳೆ ದೇಹವು ಪುನರ್ಶ್ಚೇತಗೊಳ್ಳುವುದು ಮಾತ್ರವಲ್ಲದೆ, ದೇಹಕ್ಕೆಬೇಕಾಗುವ ತೇವಾಂಶದ ಮಟ್ಟವನ್ನು ಸುಧಾರಣೆ ಮಾಡುವುದು. ಇದರಿಂದ ಸರಿಯಾದ ನಿದ್ರೆ ಮಾಡಿದರೆ ದೇಹಕ್ಕೆ ಮೊಶ್ಚಿರೈಸ್ ಸಿಗುವುದು ಮತ್ತು ತೇವಾಂಶದಿಂದ ಇಡುವುದು. ನಿದ್ರೆ ಸರಿಯಾಗಿ ಇಲ್ಲದೆ ಇದ್ದರೆ ಆಗ ಒಣ ಚರ್ಮದಸಮಸ್ಯೆಯು ಉಂಟಾಗುವುದು. ಒಣ ಚರ್ಮದೊಂದಿಗೆ ವಿವಿಧ ರೀತಿಯ ಸಮಸ್ಯೆಗಳು ಕಂಡುಬರುವುದು.

ಕಣ್ಣಿನ ಕೆಳಭಾಗದ ಚರ್ಮವು ತುಂಬಾ ಸೂಕ್ಷ್ಮವಾಗಿರುವುದು ಮತ್ತು ಇದರಿಂದಾಗಿ ಅದರ ಮೇಲೆ ಸುಲಭವಾಗಿ ಪರಿಣಾಮ ಬೀರುವುದು. ನಿದ್ರಾ ಹೀನತೆ ಉಂಟಾದರೆ ಆಗ ಕಣ್ಣಿನ ಕೆಳಗಡೆ ಕಪ್ಪು ಕಲೆಗಳು ಮೂಡುವುದು. ಕಪ್ಪು ಕಲೆಗಳು, ಊದಿಕೊಂಡ ಕಣ್ಣುಗಳು ನಿದ್ರಾಹೀನತೆಯಿಂದಾಗಿ ಕಾಣಿಸುವುದು. ಇದರಿಂದಾಗಿ ನಿಮ್ಮ ಸಂಪೂರ್ಣ ಮುಖದ ಸೌಂದರ್ಯವು ಕೆಡುವುದು.

Published On - 5:27 pm, Tue, 1 October 19