ಟೌನ್‌ಹಾಲ್‌ ಬಳಿ ಅನಗತ್ಯ ಟ್ರಾಫಿಕ್​ನಲ್ಲಿ ಸಿಲುಕಿ ಪತರಗುಟ್ಟಿದ ಎರಡು ಆ್ಯಂಬುಲೆನ್ಸ್‌

|

Updated on: Apr 23, 2020 | 10:40 AM

ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ನೂರಾರು ವಾಹನಗಳು ರಸ್ತೆಗಿಳಿದಿವೆ. ಹೀಗಾಗಿ ನಗರದ ಬಹುತೇಕ ಕಡೆ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿದ್ದು, ಟೌನ್‌ಹಾಲ್‌ ಎದುರು ಅರ್ಧ ಕಿಲೋಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಟ್ರಾಫಿಕ್‌ ಜಾಮ್‌ನಲ್ಲಿ ಎರಡು ಆ್ಯಂಬುಲೆನ್ಸ್‌ಗಳು ಸಿಲುಕಿಕೊಂಡಿದ್ದು, ಟ್ರಾಫಿಕ್ ಜಾಮ್‌ ತೆರವಿಗೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಲಾಕ್ ಡೌನ್ ಸಡಿಲಿಕೆಯಿಂದಾಗಿ ತುರ್ತುಸೇವೆಗಳಿಗೆ ತೊಂದರೆ ಉಂಟಾಗಿದ್ದು, ಇದೇ ರಿಯಾಯಿತಿ ಮುಂದಿಟ್ಟು ಕೆಲವರು ಅನಗತ್ಯವಾಗಿ ರಸ್ತೆಗೆ ಇಳಿದಿದ್ದಾರೆ. ನಗರದಲ್ಲಿ ದ್ವಿಮುಖ ಸಂಚಾರವನ್ನು ಕಡಿತಗೊಳಿಸಿ ಏಕಮುಖ ಸಂಚಾರವನ್ನು ನೀಡಲಾಗಿದೆ. ಬಹತೇಕ […]

ಟೌನ್‌ಹಾಲ್‌ ಬಳಿ ಅನಗತ್ಯ ಟ್ರಾಫಿಕ್​ನಲ್ಲಿ ಸಿಲುಕಿ ಪತರಗುಟ್ಟಿದ ಎರಡು ಆ್ಯಂಬುಲೆನ್ಸ್‌
Follow us on

ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ನೂರಾರು ವಾಹನಗಳು ರಸ್ತೆಗಿಳಿದಿವೆ. ಹೀಗಾಗಿ ನಗರದ ಬಹುತೇಕ ಕಡೆ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿದ್ದು, ಟೌನ್‌ಹಾಲ್‌ ಎದುರು ಅರ್ಧ ಕಿಲೋಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಟ್ರಾಫಿಕ್‌ ಜಾಮ್‌ನಲ್ಲಿ ಎರಡು ಆ್ಯಂಬುಲೆನ್ಸ್‌ಗಳು ಸಿಲುಕಿಕೊಂಡಿದ್ದು, ಟ್ರಾಫಿಕ್ ಜಾಮ್‌ ತೆರವಿಗೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಲಾಕ್ ಡೌನ್ ಸಡಿಲಿಕೆಯಿಂದಾಗಿ ತುರ್ತುಸೇವೆಗಳಿಗೆ ತೊಂದರೆ ಉಂಟಾಗಿದ್ದು, ಇದೇ ರಿಯಾಯಿತಿ ಮುಂದಿಟ್ಟು ಕೆಲವರು ಅನಗತ್ಯವಾಗಿ ರಸ್ತೆಗೆ ಇಳಿದಿದ್ದಾರೆ. ನಗರದಲ್ಲಿ ದ್ವಿಮುಖ ಸಂಚಾರವನ್ನು ಕಡಿತಗೊಳಿಸಿ ಏಕಮುಖ ಸಂಚಾರವನ್ನು ನೀಡಲಾಗಿದೆ. ಬಹತೇಕ ರಸ್ತೆಗಳನ್ನು ಬ್ಯಾರಿಕೇಡ್​ಗಳಾಕಿ ಮುಚ್ಚಲಾಗಿದೆ. ಐಟಿ-ಬಿಟಿ ಸೇರಿದಂತೆ ಕೆಲ ವಲಯಗಳಿಗೆ ರಿಯಾಯಿತಿ ನೀಡಿದ್ದು, ವಾಚನ ಸಂಚಾರ ಹೆಚ್ಚಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬೈಕ್, ಕಾರ್, ಗ್ರೂಡ್ಸ್ ವಾಹನಗಳ ಸಂಖ್ಯೆ ಏರಿಕೆಯಾಗಿದೆ.