ಎಮ್ಮೆಯ ಹಿಂದೆಯೇ ಹೋಗಿ, ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿದ ಇಬ್ಬರು ಮಕ್ಕಳು
ಬಳ್ಳಾರಿ: ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ದುರ್ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಎರಡನೇ ಕಾಲೋನಿಯ ವ್ಯಾಪ್ತಿಯಲ್ಲಿ ನಡೆದಿದೆ. ಗೌತಮ್(12), ಗಗನಾ(14) ಮೃತ ಮಕ್ಕಳು. ಎಮ್ಮೆ ನೀರು ಕುಡಿಯುತ್ತಾ ನದಿಯೊಳಗೆ ಹೋದ ಹಿನ್ನೆಲೆಯಲ್ಲಿ ಮಕ್ಕಳಿಬ್ಬರು ಎಮ್ಮೆಯ ಹಿಂದೆಯೇ ಹೋಗಿ ನೀರುಪಾಲಾಗಿದ್ದಾರೆ. ಈಜುಬಾರದೆ ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ನಂತರ ವಿಷಯ ತಿಳಿದ ಸಾರ್ವಜನಿಕರು ನೀರಿಗಿಳಿದು ಮೃತ ದೇಹಗಳನ್ನ ಹೊರತೆಗೆದಿದ್ದಾರೆ. ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಶಿವಕುಮಾರಗೌಡ, ತಂಬ್ರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ […]
Follow us on
ಬಳ್ಳಾರಿ: ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ದುರ್ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಎರಡನೇ ಕಾಲೋನಿಯ ವ್ಯಾಪ್ತಿಯಲ್ಲಿ ನಡೆದಿದೆ. ಗೌತಮ್(12), ಗಗನಾ(14) ಮೃತ ಮಕ್ಕಳು.
ಎಮ್ಮೆ ನೀರು ಕುಡಿಯುತ್ತಾ ನದಿಯೊಳಗೆ ಹೋದ ಹಿನ್ನೆಲೆಯಲ್ಲಿ ಮಕ್ಕಳಿಬ್ಬರು ಎಮ್ಮೆಯ ಹಿಂದೆಯೇ ಹೋಗಿ ನೀರುಪಾಲಾಗಿದ್ದಾರೆ. ಈಜುಬಾರದೆ ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ನಂತರ ವಿಷಯ ತಿಳಿದ ಸಾರ್ವಜನಿಕರು ನೀರಿಗಿಳಿದು ಮೃತ ದೇಹಗಳನ್ನ ಹೊರತೆಗೆದಿದ್ದಾರೆ. ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಶಿವಕುಮಾರಗೌಡ, ತಂಬ್ರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಸಂಬಂಧ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.