ಮಂಗಳೂರಿನಲ್ಲಿ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿರುವ ಮಕ್ಕಳು

|

Updated on: Jul 05, 2020 | 4:08 PM

ದಕ್ಷಿಣ ಕನ್ನಡ: ಜಿಲ್ಲೆಯ ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಮಣ್ಣಿನಡಿ ಇಬ್ಬರು ಮಕ್ಕಳು ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. 16 ವರ್ಷದ ಓರ್ವ ಬಾಲಕ ಮತ್ತು ಇನ್ನೊಬ್ಬ 10 ವರ್ಷದ ಬಾಲಕ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ಹೊರವಲಯದ ಗುರುಪುರದ ಬಳಿ ಇರುವ ಬಂಗ್ಲೆಗುಡ್ಡೆ ಕುಸಿದು ನಾಲ್ಕು ಮನೆಗಳು ಸಹ ನೆಲಸಮವಾಗಿದೆ. ಸದ್ಯಕ್ಕೆ, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಮನೆಗಳಲ್ಲಿ ಇದ್ದವರ ರಕ್ಷಣೆ ಮಾಡಲಾಗಿದೆ. ಇದೀಗ, ಇಬ್ಬರು ಬಾಲಕರನ್ನ ರಕ್ಷಿಸಲು ಕಾರ್ಯಾಚರಣೆ […]

ಮಂಗಳೂರಿನಲ್ಲಿ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿರುವ ಮಕ್ಕಳು
Follow us on

ದಕ್ಷಿಣ ಕನ್ನಡ: ಜಿಲ್ಲೆಯ ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಮಣ್ಣಿನಡಿ ಇಬ್ಬರು ಮಕ್ಕಳು ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

16 ವರ್ಷದ ಓರ್ವ ಬಾಲಕ ಮತ್ತು ಇನ್ನೊಬ್ಬ 10 ವರ್ಷದ ಬಾಲಕ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ಹೊರವಲಯದ ಗುರುಪುರದ ಬಳಿ ಇರುವ ಬಂಗ್ಲೆಗುಡ್ಡೆ ಕುಸಿದು ನಾಲ್ಕು ಮನೆಗಳು ಸಹ ನೆಲಸಮವಾಗಿದೆ. ಸದ್ಯಕ್ಕೆ, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಮನೆಗಳಲ್ಲಿ ಇದ್ದವರ ರಕ್ಷಣೆ ಮಾಡಲಾಗಿದೆ. ಇದೀಗ, ಇಬ್ಬರು ಬಾಲಕರನ್ನ ರಕ್ಷಿಸಲು ಕಾರ್ಯಾಚರಣೆ ಭರದಿಂದ ಸಾಗಿದೆ.

ಸುಮಾರು 25 ಅಡಿಯಷ್ಟು ಮಣ್ಣು ಕುಸಿದಿದೆ  ಎಂದು ಅಗ್ನಿಶಾಮಕ ತಂಡದ ಅಧಿಕಾರಿ ಮಾಹಿತಿ ನೀಡಿದ್ದಾರೆ. ಗುಡ್ಡ ಕುಸಿಯುವಾಗ ಮನೆಯಿಂದ ಅಲ್ಲಿನ ಜನರು ಹೊರಗೆ ಓಡಿಬಂದಿದ್ದಾರೆ. ಆದರೆ, ಈ ವೇಳೆ ಮಕ್ಕಳನ್ನು ಬಿಟ್ಟುಬಂದಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ನೀರಿನ ಸೆಲೆ ಹೆಚ್ಚಾಗಿ ಮಣ್ಣು ಸಡಿಲವಾಗಿ ಗುಡ್ಡ ಕುಸಿದಿದೆ ಎಂಬ ಮಾಹಿತಿ ದೊರೆತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಭೇಟಿ ನೀಡಿ ಮಾಹಿತಿ ಪಡೆದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲು ಹಾಗೂ ಮಾಜಿ ಸಚಿವ ಯು.ಟಿ. ಖಾದರ್​​ ಸಹ ಭೇಟಿ ನೀಡಿದರು.

Published On - 3:03 pm, Sun, 5 July 20