ಹಾವೇರಿ: ತುಂಗಭದ್ರಾ ನದಿ ನೀರಿನಲ್ಲಿ ಇಬ್ಬರು ಕೊಚ್ಚಿಹೋಗಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಕೋಣನತಂಬಗಿ ಗ್ರಾಮ ಬಳಿ ನಡೆದಿದೆ. ಎತ್ತಿನಬಂಡಿ ಸಮೇತ ಇಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಭಾರಿ ಪ್ರವಾಹದಿಂದಾಗಿ ಎತ್ತಿನಬಂಡಿಯಲ್ಲಿ ಹೋಗುತ್ತಿದ್ದ ಇಬ್ಬರು ತುಂಗಭದ್ರಾ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ನೀರುಪಾಲಾಗಿರುವ ಇಬ್ಬರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ರಾಣೆಬೆನ್ನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೆಡ್ಲೇರಿ ಗ್ರಾಮದ ಬಳಿ ಪತ್ತೆಯಾದ ಒಂದು ಎತ್ತು:
ನೀರಿನಲ್ಲಿ ಕೊಚ್ಚಿ ಹೋದವರನ್ನು ಜಗದೀಶ ಅಣ್ಣೇರ 23 ವರ್ಷ ಮತ್ತು ಬೆಟ್ಟಪ್ಪ ಮಿಳ್ಳಿ 24 ವರ್ಷ ಎಂದು ಗುರಿತಿಸಲಾಗಿದೆ. ಇಬ್ಬರೂ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದವರು. ಕೊಚ್ಚಿ ಹೋದವರಿಗಾಗಿ ಮುಂದುವರಿದ ಶೋಧಕಾರ್ಯ ಮುಂದುವರಿದಿದೆ. ಮೆಡ್ಲೇರಿ ಗ್ರಾಮದ ಬಳಿ ಒಂದು ಎತ್ತು ಪತ್ತೆಯಾಗಿದೆ.
Published On - 10:25 am, Mon, 21 September 20