
ಕೋಲಾರ: ತಾಲೂಕಿನ ಅರಿನಾಗನಹಳ್ಳಿಯಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಕೋಲಾರ ತಾಲೂಕಿನ ತೊರದೇವಂಡಹಳ್ಳಿ ಗ್ರಾಮದ ಮಧುಸೂಧನ್(20) ರೇವಂತ್ (20) ಮೃತಪಟ್ಟವರು.
ಅರಿನಾಗನಹಳ್ಳಿ ರೈತರೊಬ್ಬರ ಕೃಷಿಹೊಂಡಕ್ಕೆ ಈಜಲು ತೆರಳಿದಾಗ ಘಟನೆ ನಡೆದಿದೆ. ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.