ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಈಜಿಗಿಳಿದಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಶಂಕರನಗರ ಕ್ಯಾಂಪ್ ಬಳಿಯ ಕಾಲುವೆಯಲ್ಲಿ ನಡೆದಿದೆ. ದಯಾ(19), ಶಿವು(18) ನೀರುಪಾಲಾದ ದುರ್ದೈವಿಗಳು.
ಈಜಲು ಎಂದು ಎಡದಂಡೆ ಕಾಲುವೆಯಲ್ಲಿ ಇಳಿದಿದ್ದ ಯುವಕರು ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಮೃತರು ಹೈದರಾಬಾದ ಮೂಲದವರು. ಸ್ಥಳಕ್ಕೆ ಮಸ್ಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಶವ ಶೋಧ ನಡೆಸುತ್ತಿದ್ದಾರೆ.