AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2021 | ಆರ್ಥಿಕತೆ ಸಬಲ, ಭವಿಷ್ಯ ಆಶಾದಾಯಕ: Economic Survey ಮುಖ್ಯಾಂಶಗಳಿವು

ಆರ್ಥಿಕ ಸಮೀಕ್ಷೆ ಮಂಡನೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಮೂರ್ತಿ ಸುಬ್ರಮಣಿಯನ್, ಆರ್ಥಿಕ ಸಮೀಕ್ಷೆಯಲ್ಲಿನ ಮುಖ್ಯಾಂಶಗಳ ವಿವರಣೆಯನ್ನು ನೀಡಿದ್ದಾರೆ.

Budget 2021 | ಆರ್ಥಿಕತೆ ಸಬಲ, ಭವಿಷ್ಯ ಆಶಾದಾಯಕ: Economic Survey ಮುಖ್ಯಾಂಶಗಳಿವು
ಕೆವಿ ಸುಬ್ರಮಣಿಯನ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Jan 29, 2021 | 6:32 PM

Share

ದೆಹಲಿ: ಲೋಕಸಭೆಯಲ್ಲಿ ಇಂದು ಮಂಡನೆಯಾದ ಆರ್ಥಿಕ ಸಮೀಕ್ಷೆ 2020 -21ರ ಇ-ಬುಕ್ ಆವೃತ್ತಿಯನ್ನು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಬಿಡುಗಡೆ ಮಾಡಿದ್ದಾರೆ. ಆರ್ಥಿಕ ಸಮೀಕ್ಷೆ ಮಂಡನೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಬ್ರಮಣಿಯನ್, ಆರ್ಥಿಕ ಸಮೀಕ್ಷೆಯಲ್ಲಿನ ಮುಖ್ಯಾಂಶಗಳ ವಿವರಣೆಯನ್ನು ನೀಡಿದ್ದಾರೆ.

ಆರ್ಥಿಕ ಸಮೀಕ್ಷೆಯ ಮೊದಲ ಅಧ್ಯಾಯದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಭಾರತ ಯಾವ ಕ್ರಮಗಳನ್ನು ಅನುಸರಿಸಿದೆ ಎಂಬ ವಿವರಗಳಿವೆ. ಮೊದಲ ಅಧ್ಯಾಯ Saving Lives And Livelihoods, amidst a once-in-a-lifetime crisis ನಲ್ಲಿ ಕೋವಿಡ್ ವಿರುದ್ಧ ದೇಶ ಹೇಗೆ ಹೋರಾಡಿತು ಎಂಬ ಮಾಹಿತಿಯಿದೆ.

ಕೋವಿಡ್ 19ರಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಅನಿಶ್ಚಿತತೆ ಉಂಟಾಗಿದ್ದರೂ ಜಿಡಿಪಿ ಮತ್ತೆ ಪುಟಿದೇಳುವ ನಿರೀಕ್ಷೆ ಇದೆ. ಆದರೆ ಹೋದ ಜೀವ ಮರಳಿ ಬಾರದು. ಕೋವಿಡ್  ಸಾಂಕ್ರಾಮಿಕ ಹರಡುತ್ತಿದ್ದಂತೆಯೇ ಲಾಕ್​ಡೌನ್ ಘೋಷಣೆ ಆದ ಕಾರಣ ಹಲವರ ಪ್ರಾಣ ಉಳಿಯಿತು. ಅಷ್ಟೇ ಅಲ್ಲದೆ ಬೇಗನೆ ಚೇತರಿಕೆ ಕಂಡುಕೊಳ್ಳಲೂ ಕಾರಣವಾಯಿತು.

ಕೆಲವು ರಾಜ್ಯಗಳಲ್ಲಿ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಲು ಲಾಕ್​ಡೌನ್ ಕಾರಣವಾಗಿದೆ. ಜನರ ಪ್ರಾಣ ಮತ್ತು ಬದುಕನ್ನು ಉಳಿಸಲು ಲಾಕ್​ಡೌನ್ ಸಹಕಾರಿಯಾಯಿತು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್ ವಿರುದ್ಧದ ಹೋರಾಟಕ್ಕೆ ದೇಶ ಕೈಗೊಂಡಿರುವ ನೀತಿಗಳು ಪ್ರಬುದ್ಧ ಮತ್ತು ದೂರದೃಷ್ಟಿಯುಳ್ಳದ್ದಾಗಿತ್ತು. ದೀರ್ಘಾವಧಿಯ ಪ್ರಯೋಜನಕ್ಕಾಗಿ ಅಲ್ಪಾವಧಿಯ ನೋವನ್ನು ಭಾರತ ಸಹಿಸಿದೆ. V ಶೇಪ್ ಚೇತರಿಕೆ ಭಾರತದ ಪ್ರಬುದ್ಧ ನೀತಿಗೆ ಉದಾಹರಣೆಯಾಗಿದೆ. ಲಾಕ್​ಡೌನ್ ಮಾಡದೇ ಇದ್ದರೆ ಕೋವಿಡ್ ನಿಂದಾಗಿ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವುಂಟಾಗುತ್ತಿತ್ತು. ಲಾಕ್​ಡೌನ್ ನಿಂದಾಗ ಜನರ ಪ್ರಾಣ ಉಳಿಯುವಂತಾಯಿತು ಎಂದು ಸಮೀಕ್ಷೆ ಹೇಳಿದೆ.

ಆರ್ಥಿಕ ಬೆಳವಣಿಗೆಯ ಎರಡೂ ಅಸಮಾನತೆಯು ಸಾಮಾಜಿಕ-ಆರ್ಥಿಕ ಸೂಚಕಗಳೊಂದಿಗೆ ಸದೃಶ ಸಂಬಂಧವನ್ನು ಹೊಂದಿದೆ. ಭಾರತವು ಬೆಳವಣಿಗೆಯತ್ತ ಗಮನ ಹರಿಸುವುದನ್ನು ಮುಂದುವರಿಸಬೇಕು; ಆರ್ಥಿಕ  ಅಭಿವೃದ್ಧಿ ಆದಾಗ ಮಾತ್ರ ಪುನರ್ವಿತರಣೆಯನ್ನು ಸಕ್ರಿಯಗೊಳಿಸಬಹುದು.

ಭಾರತದ ಸವರಿನ್ ಕ್ರೆಡಿಟ್ ರೇಟಿಂಗ್ ಅದರ ಮೂಲ ಅಂಶಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.ಭಾರತದ ಪೂರೈಕೆ ಪರ ನೀತಿಗಳಿಗಾಗಿ, ಕಾರ್ಮಿಕ ಮಾರುಕಟ್ಟೆಯಲ್ಲಿನ ಅಡೆತಡೆಗಳು ಮತ್ತು ಆರ್ಥಿಕ ತೊಂದರೆಯನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು. ಅದು ಉತ್ಪಾದನಾ ಸಾಮರ್ಥ್ಯದ ನಷ್ಟಕ್ಕೆ ಕಾರಣವಾಗುತ್ತದೆ

ಭಾರತವು ದೀರ್ಘಾವಧಿಯ ಲಾಭಕ್ಕಾಗಿ ಅಲ್ಪಾವಧಿಯ ನೋವನ್ನು ತೆಗೆದುಕೊಂಡಿತು. ಜಿಡಿಪಿ ಚೇತರಿಸಿಕೊಳ್ಳಲಿದೆ ಎಂದು ಭಾರತ ಅರಿತುಕೊಂಡಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಾರತದ ಮುಖ್ಯ ಧ್ಯೇಯವಾಕ್ಯವೆಂದರೆ “ಕಳೆದುಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ” ಎಂಬುದಾಗಿತ್ತು. V-ಶೇಪ್ ಚೇತರಿಕೆ ನೀತಿ ರೂಪಿಸುವಲ್ಲಿ ಭಾರತ ಹೇಗೆ ಪ್ರಬುದ್ಧವಾಗಿದೆ ಎಂಬುದನ್ನು ತೋರಿಸುತ್ತದೆ.

ಭಾರತದ ಸುಧಾರಣಾ ನೀತಿಗಳು ಪ್ರಾಥಮಿಕ ಮತ್ತು ದ್ವಿತೀಯ ಕ್ಷೇತ್ರಗಳನ್ನು ಬಲಪಡಿಸಲು, ಉದ್ಯೋಗ ಸೃಷ್ಟಿಸಲು ಸಹಕಾರಿಯಾಗಿದೆ. ಭಾರತದ ಕೋವಿಡ್ -19 ಚೇತರಿಕೆಯು ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾದ ಸಾಧನೆಯನ್ನು ಹೋಲುತ್ತದೆ. ಈ ವರ್ಷದ ಸಮೀಕ್ಷೆಯು ಎಲ್ಲಾ ಕೋವಿಡ್ ಯೋಧರಿಗೆ ಮೀಸಲಾಗಿರುತ್ತದೆ.ಅಪಾಯದಲ್ಲಿರುವ ಜೀವನವನ್ನು ಉಳಿಸುವುದು ಧರ್ಮದ ಮೂಲ ಎಂಬ ಮಹಾಭಾರತದ ನೀತಿಯನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ಅನ್ವಯಿಸಲಾಯಿತು ಎಂದಿದ್ದಾರೆ ಕೃಷ್ಣಮೂರ್ತಿ ಸುಬ್ರಮಣಿಯನ್.

Budget 2021 | ಮಂಡನೆಯಾಯ್ತು Economic Survey: ಕೃಷಿಯ ಭರವಸೆ, ಶೇ 11ರ ಜಿಡಿಪಿ ಪ್ರಗತಿ ನಿರೀಕ್ಷೆ

Published On - 4:26 pm, Fri, 29 January 21

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!