ಬೆಂಗಳೂರು: ಕೆಲಸದಿಂದ ತೆಗೆದಿದ್ದಕ್ಕೆ ಅಂಗಡಿ ಮಾಲೀಕರ ವಿರುದ್ಧವೇ ಕೆಲಸಗಾರ ವಾಮಾಚಾರ ಮಾಡಿರುವ ಘಟನೆ ಕುರುಬರಹಳ್ಳಿಯ ಸರ್ಕಲ್ ಬಳಿ ನಡೆದಿದೆ. ಬೆಳಗಿನ ಜಾವ ಅಂಗಡಿ ಬಳಿ ಬಂದು ಮೂಳೆ, ಕಬ್ಬಿಣದ ಮೊಳೆ, ನಿಂಬೆಹಣ್ಣು, ಕರಿ ಎಳ್ಳು, ಅರಿಶಿಣ ಕುಂಕುಮ ಎರಚಿದ್ದಾರೆಂದು ಆರೋಪಿಸಲಾಗಿದೆ.
ಶ್ರೀನಿವಾಸ್ ಎಂಬಾತ ಕುರುಬರಹಳ್ಳಿ ಸರ್ಕಲ್ನ ಭುವನೇಶ್ವರಿ ಹಾರ್ಡ್ವೇರ್ನಲ್ಲಿ ಕೆಲಸ ಮಾಡ್ತಿದ್ದ. ಇತ್ತೀಚೆಗೆ ಅಂಗಡಿ ಮಾಲೀಕ ವಿಶ್ವನಾಥ್, ಶ್ರೀನಿವಾಸ್ನನ್ನು ಕೆಲಸದಿಂದ ತೆಗೆದಿದ್ರು. ಇದೇ ಕೋಪಕ್ಕೆ ಅಂಗಡಿ ಬಳಿ ಬಂದು ವಾಮಾಚಾರ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಬೆಳಗ್ಗೆ ಎಂದಿನಂತೆ ಅಂಗಡಿ ತೆರೆದಾಗ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.