ಗ್ರಾ ಪಂ ಅಧ್ಯಕ್ಷ ಮತ್ತು ಸದಸ್ಯ ಬಾರ್ ಗರ್ಲ್ಗಳ ಸೊಂಟ ಹಿಡಿದು ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ
ಇವರು ಯಾವ ಸಂತೋಷಕ್ಕೆ ಇಷ್ಟು ಕೆಟ್ಟದಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ ಅಂತ ಗೊತ್ತಾಗಿಲ್ಲ, ಅದರೆ ಪಾರ್ಟಿಯಂತೂ ನಡೆಯುತ್ತಿದೆ. ಹಿಂಬದಿಯಲ್ಲಿ ಆರ್ಕೆಸ್ಟ್ರಾ ಕಾಣಿಸುತ್ತಿದೆ. ಮ್ಯೂಸಿಕಲ್ ನೈಟ್ ಮತ್ತು ಡ್ಯಾನ್ಸ್ ಪಾರ್ಟಿ! ನೆರೆದವರಿಗೆ ಮಜವೋ ಮಜ!
ಇಬ್ಬರು ನೃತ್ಯಗಾತಿಯರ (ಬಾರ್ ಗರ್ಲ್ಗಳು) (bar girls) ಸೊಂಟ ಹಿಡಿದು ತಮ್ಮ ಅಲ್ಲಾಡದ ಸೊಂಟವನ್ನು ಅಲ್ಲಾಡಿಸಲು ಪ್ರಯತ್ನಿಸುತ್ತಿರುವ ಗ್ರಾಮೀಣ ಭಾಗದ ಈ ನಾಯಕರು ಯಾವ ಪಕ್ಷದವರು ಅಂತ ನಮಗೆ ಗೊತ್ತಿಲ್ಲ. ಅದರೆ, ಅವರು ಪ್ರತಿನಿಧಿಸುವ ಪಕ್ಷ ಯಾವುದೇ ಆಗಿರಲಿ ಅದರ ಮಾನ ಮರ್ಯಾದೆ ಹರಾಜಿಗೆ ಹಾಕಿರುವುಂದಂತೂ ಸತ್ಯ ಮಾರಾಯ್ರೇ. ಅಂದಹಾಗೆ, ಈ ಮಹಾನುಭಾವರ ಪರಿಚಯವನ್ನೂ ನಿಮಗೆ ಹೇಳಿಬಿಡ್ತೀವಿ ಕೇಳಿ. ಇವರಲ್ಲಿ ಒಬ್ಬನ ಹೆಸರು ರಘು (Raghu) ಮತ್ತೊಬ್ಬನ ಹೆಸರು ರಾಜಣ್ಣ (Rajanna). ಆರ್ ಅಕ್ಷರದಿಂದ ಆರಂಭವಾಗುವ ಹೆಸರು ಹೊಂದಿದ ಇನ್ನೊಬ್ಬ ಇವರಿಬ್ಬರ ಜೊತೆ ಸೇರಿದ್ದರೆ, ‘ಆರ್ ಆರ್ ಆರ್’ ಸಿನಿಮಾ (RRR movie) ಆಗಿಬಿಟ್ಟಿರೋದು!! ರಾಘು ಮತ್ತು ರಾಜಣ್ಣ ಕೋಲಾರ ಜಿಲ್ಲೆ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶ್ರೀನಿವಾಸ ಸಂದ್ರ (Srinivas Sandra) ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಸದಸ್ಯರು. ಆಧ್ಯಕ್ಷನ ಹೆಸರು ರಘು ಮತ್ತು ಸದಸ್ಯನ ಹೆಸರು ರಾಜಣ್ಣ.
ಇವರು ಯಾವ ಸಂತೋಷಕ್ಕೆ ಇಷ್ಟು ಕೆಟ್ಟದಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ ಅಂತ ಗೊತ್ತಾಗಿಲ್ಲ, ಅದರೆ ಪಾರ್ಟಿಯಂತೂ ನಡೆಯುತ್ತಿದೆ. ಹಿಂಬದಿಯಲ್ಲಿ ಆರ್ಕೆಸ್ಟ್ರಾ ಕಾಣಿಸುತ್ತಿದೆ. ಮ್ಯೂಸಿಕಲ್ ನೈಟ್ ಮತ್ತು ಡ್ಯಾನ್ಸ್ ಪಾರ್ಟಿ! ನೆರೆದವರಿಗೆ ಮಜವೋ ಮಜ!
ಸಾಮಾನ್ಯವಾಗಿ ಇಂಥ ಕುಣಿತಗಳು, ಅಂದರೆ ರಾಜಕಾರಣಿಗಳು ಬಾರ್ ಗರ್ಲ್ಗಳೊಂದಿಗೆ ಕುಣಿಯುವುದು-ಉತ್ತರ ಪ್ರದೇಶದಲ್ಲಿ ಹೆಚ್ಚು ಕಾಣ ಸಿಗುತ್ತವೆ. ಈಗ ಅವೆಲ್ಲ ನಿಂತು ಹೋಗಿರುವುದು ನಿಜವಾದರೂ ಮೊದಲೆಲ್ಲ ಈ ಬಗೆಯ ಪಾರ್ಟಿಗಳು ಬಹಳ ವರದಿಯಾಗುತ್ತಿದ್ದವು. ಕರ್ನಾಟಕದಲ್ಲೂ ಆಗಾಗ ನಾಚ್ಗಳು ನಡೆಯುತ್ತಿರುತ್ತವೆ. ಅಧಿಕಾರ ಕೈಗೆ ಸಿಕ್ಕಕೂಡಲೇ ಮರಿ ಪುಢಾರಿಗಳು ಅತಿರೇಕಗಳಿಗೆ ಇಳಿಯೋದು ಹೊಸ ಸಂಗತಿಯೇನಲ್ಲ.
ರಘು ಮತ್ತು ರಾಜಣ್ಣನ ನಾಚ್ ವೈರಲ್ ಆಗಿದೆ ಮಾರಾಯ್ರೇ.
ಇದನ್ನೂ ಓದಿ: ಪಕ್ಕದ ಮನೆ ಮಹಿಳೆಯನ್ನು ಎಳೆದುಕೊಂಡು ಬಂದು ರೇಪ್ ಮಾಡಿದ ಪತಿ; ಮೊಬೈಲ್ನಲ್ಲಿ ವಿಡಿಯೋ ಮಾಡಿ ವಿಕೃತಿ ಮೆರೆದ ಪತ್ನಿ