ಪಕ್ಕದ ಮನೆ ಮಹಿಳೆಯನ್ನು ಎಳೆದುಕೊಂಡು ಬಂದು ರೇಪ್​ ಮಾಡಿದ ಪತಿ; ಮೊಬೈಲ್​​ನಲ್ಲಿ ವಿಡಿಯೋ ಮಾಡಿ ವಿಕೃತಿ ಮೆರೆದ ಪತ್ನಿ

ಆರೋಪಿ ದಂಪತಿ ದಿಲೀಪ್​ ಮತ್ತು ತುಳಸಿ. ಸಂತ್ರಸ್ತ ಮಹಿಳೆ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ ಮನೆಯ ಹಿಂಬದಿಯಲ್ಲೇ ಇವರೂ ವಾಸವಾಗಿದ್ದರು. ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ದಿಲೀಪ್ ಆ ಮಹಿಳೆಯನ್ನು ಎಳೆದುಕೊಂಡು ಬಂದಿದ್ದಾನೆ.

ಪಕ್ಕದ ಮನೆ ಮಹಿಳೆಯನ್ನು ಎಳೆದುಕೊಂಡು ಬಂದು ರೇಪ್​ ಮಾಡಿದ ಪತಿ; ಮೊಬೈಲ್​​ನಲ್ಲಿ ವಿಡಿಯೋ ಮಾಡಿ ವಿಕೃತಿ ಮೆರೆದ ಪತ್ನಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Feb 09, 2022 | 4:41 PM

ವಿವಾಹಿತ ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯವನ ಪತ್ನಿಯನ್ನು ಎಳೆದು ತಂದು ರೇಪ್​ ಮಾಡುತ್ತಿದ್ದರೆ, ಆತನ ಪತ್ನಿ ಅದನ್ನು ಮೊಬೈಲ್​​ನಲ್ಲಿ ವಿಡಿಯೋ (Mobile Video) ಮಾಡಿ ವಿಕೃತಿ ಮೆರೆದಿದ್ದಾಳೆ. ಈ ಘಟನೆ ನಡೆದದ್ದು ಆಂಧ್ರಪ್ರದೇಶದ ವಿಜಯವಾಡದಲ್ಲಿ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಮಹಿಳೆಯ ಪತಿ ಅಜಿತ್​ ಸಿಂಗ್​ ನಗರ ಸಮೀಪವೇ ಅಡುಗೆ ಕೆಲಸ ಮಾಡಿಕೊಂಡಿದ್ದ. ಅಂದರೆ ಅಡುಗೆ ಮಾಡಿ, ಪೂರೈಸುವ ಕೆಲಸ. ಎಂದಿನಂತೆ ಅವನು ಕೆಲಸಕ್ಕೆ ಹೋಗಿದ್ದ. ರಾತ್ರಿ ಮನೆಗೆ ಬಂದಿರಲಿಲ್ಲ. ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದರು. ಈ ವೇಳೆ ಪಕ್ಕದ ಮನೆಯಾತ ದುಷ್ಕೃತ್ಯ ನಡೆಸಿದ್ದಾನೆ.

ಆರೋಪಿ ದಂಪತಿ ದಿಲೀಪ್​ ಮತ್ತು ತುಳಸಿ. ಸಂತ್ರಸ್ತ ಮಹಿಳೆ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ ಮನೆಯ ಹಿಂಬದಿಯಲ್ಲೇ ಇವರೂ ವಾಸವಾಗಿದ್ದರು. ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ದಿಲೀಪ್ ಆ ಮಹಿಳೆಯನ್ನು ಎಳೆದುಕೊಂಡು, ತನ್ನ ಮನೆಗೆ ಕರೆತಂದಿದ್ದಾನೆ. ಆಕೆಗೆ ಎರಡು ಬಾರಿ ಹೊಡೆದಿದ್ದಾನೆ. ನಂತರ ಅತ್ಯಾಚಾರ ಎಸಗಿದ್ದಾನೆ. ಇವೆಲ್ಲವನ್ನೂ ತುಳಸಿ ವಿಡಿಯೋ ಮಾಡಿದ್ದಾಳೆ. ಅದೆಲ್ಲ ಮುಗಿದ ಮೇಲೆ, ಇಲ್ಲಿ ನಡೆದಿದ್ದನ್ನು ನೀನು ಯಾರಿಗಾದರೂ ಹೇಳಿದರೆ, ನಿನ್ನಿಬ್ಬರು ಮಕ್ಕಳು ಮತ್ತು ನಿನ್ನನ್ನು ಹತ್ಯೆ ಮಾಡುವುದಾಗಿ ಈ ಕ್ರಿಮಿನಲ್​ ದಂಪತಿ ಬೆದರಿಸಿದ್ದಾರೆ. ಹಾಗಿದ್ದಾಗ್ಯೂ ಕೂಡ ಮಹಿಳೆ ಹೆದರದೆ, ಸ್ಥಳೀಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ 3 ಹೆಣ್ಣುಮಕ್ಕಳ ತಾಯಿಯ ತಲೆಗೆ ಮೊಳೆ ಹೊಡೆದ ಚಿಕಿತ್ಸಕ; ಇಕ್ಕಳದಿಂದ ತೆಗೆಯಲು ಯತ್ನಿಸಿ ಆಸ್ಪತ್ರೆ ಸೇರಿದ ಗರ್ಭಿಣಿ