ಮೃತಪಟ್ಟ ಗಂಡನ ನಕಲಿ ದಾಖಲೆ ನೀಡಿ, ಮೂರು ಕೋಟಿ ವಿಮೆ ಕ್ಲೈಮ್! ಪತ್ನಿಗಾಗಿ ಕೋರಮಂಗಲ ಪೊಲೀಸರಿಂದ ಹುಡುಕಾಟ

ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುಪ್ರಿಯಾ ದಾಖಲೆ ಸಿಲ್ಲಿಸಿದ್ದರು. ಆದರೆ ಕೃಷ್ಣಪ್ರಸಾದ್ ಮೃತಪಟ್ಟಿದ್ದು ಕ್ಯಾನ್ಸರ್ ನಿಂದ. ಕ್ಯಾನ್ಸರ್ ನಿಂದ ಮೃತಪಟ್ಟರೆ ವಿಮೆ ಆನ್ವಯ ಆಗಲ್ಲ.

ಮೃತಪಟ್ಟ ಗಂಡನ ನಕಲಿ ದಾಖಲೆ ನೀಡಿ, ಮೂರು ಕೋಟಿ ವಿಮೆ ಕ್ಲೈಮ್! ಪತ್ನಿಗಾಗಿ ಕೋರಮಂಗಲ ಪೊಲೀಸರಿಂದ ಹುಡುಕಾಟ
ಮೃತಪಟ್ಟ ಗಂಡನ ನಕಲಿ ದಾಖಲೆ ನೀಡಿ, ಮೂರು ಕೋಟಿ ವಿಮೆ ಕ್ಲೈಮ್! ಪತ್ನಿಗಾಗಿ ಕೋರಮಂಗಲ ಪೊಲೀಸರು ಹುಡುಕಾಟ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 09, 2022 | 9:35 AM

ಬೆಂಗಳೂರು: ಮೃತಪಟ್ಟ ಗಂಡನ ವಿಮಾ ಪಾಲಿಸಿಯ (insurance) ನಕಲಿ ದಾಖಲೆ ಸೃಷ್ಟಿಸಿ, ಮೂರು ಕೋಟಿ ರೂಪಾಯಿ ವಿಮೆ ಕ್ಲೈಮ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಪತ್ನಿಯ ವಿರುದ್ದ ಇನ್ಶ್ಯೂರೆನ್ಸ್ ಕಂಪನಿಯು ಕೋರಮಂಗಲ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದೆ. ಕೃಷ್ಣಪ್ರಸಾದ್ ಗಾರಲಪಟ್ಟಿ ಎಂಬುವರು ಟಾಟಾ ಎ ಐ ಎ ಲೈಫ್​ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವಿಮೆ ಪಡೆದಿದ್ದರು. ವಾರ್ಷಿಕ 51,777 ರೂಪಾಯಿ ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನ ಕೃಷ್ಣ ಪ್ರಸಾದ್ ಮೃತಪಟ್ಟಿದ್ದರು. ಕೃಷ್ಣ ಪ್ರಸಾದ್ ಹೆಂಡತಿ ಸುಪ್ರಿಯಾರನ್ನ (wife) ನಾಮಿನಿ‌ ಮಾಡಿದ್ದರು.

ಈ ಬಾಬತ್ತಿನಲ್ಲಿ ಕೃಷ್ಣ ಪ್ರಸಾದ್ ಪತ್ನಿ ಸುಪ್ರಿಯಾ ಅನ್​ಲೈನ್ ನಲ್ಲಿ ಡೆತ್ ಕ್ಲೈಮ್ ಮಾಡಿದ್ದರು. ಇನ್ಸ್ಯೂರೆನ್ಸ್ ಕಂಪನಿ‌ಯೂ ಮೂರು ಕೋಟಿ ರೂಪಾಯಿ ಹಣವನ್ನ ಸುಪ್ರಿಯಾ ಖಾತೆಗೆ ವರ್ಗಾವಣೆ ಮಾಡಿತ್ತು. ಈ ಮಧ್ಯೆ ಬೆಳಕಿಗೆ ಬಂದ ವಿಷಯವೆಂದರೆ ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುಪ್ರಿಯಾ ದಾಖಲೆ ಸಿಲ್ಲಿಸಿದ್ದರು. ಆದರೆ ಕೃಷ್ಣಪ್ರಸಾದ್ ಮೃತಪಟ್ಟಿದ್ದು ಕ್ಯಾನ್ಸರ್ ನಿಂದ. ಕ್ಯಾನ್ಸರ್ ನಿಂದ ಮೃತಪಟ್ಟರೆ ವಿಮೆ ಆನ್ವಯ ಆಗಲ್ಲ. ಹೀಗಾಗಿ ನಕಲಿ ದಾಖಲೆ ನೀಡಿ ಸುಪ್ರಿಯಾ ವಿಮೆ ಕ್ಲೈಮ್ ಮಾಡಿರುವುದು ಪತ್ತೆಯಾಗಿದೆ. ಸದ್ಯ ಸುಪ್ರಿಯಾ ವಿರುದ್ದ ಕ್ರಮಕ್ಕೆ ವಿಮಾ ಕಂಪನಿಯಿಂದ ದೂರು ಬಂದಿದೆ. ಸುಪ್ರಿಯಾಗಾಗಿ ಕೋರಮಂಗಲ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪ್ರೇಮಿಗಾಗಿ ಒಂದೇ ಕುಟುಂಬದ ಐವರನ್ನು ಕೊಂದ ಕೊಲೆಗಾರ್ತಿ ಅರೆಸ್ಟ್, ಡಿಸೆಂಬರ್​ನಿಂದಲೇ ಮಚ್ಚು ಹಿಡಿದು ಸಿದ್ಧತೆ ನಡೆಸಿದ್ದಳು! ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ, ನಾಲ್ವರು ಮಕ್ಕಳನ್ನು ಕೊಂದಿದ್ದ ಹಂತಕಿ ಲಕ್ಷ್ಮೀಯನ್ನು ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫೆ.6ರಂದು ಕೆಆರ್‌ಎಸ್‌ ಗ್ರಾಮದಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರು ಮಕ್ಕಳು, ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಲಕ್ಷ್ಮೀ(26), ರಾಜ್(12), ಕೋಮಲ್(7), ಕುನಾಲ್(4), ಗೋವಿಂದ(8) ಕೊಲೆಯಾದವರು. ಸದ್ಯ ಪೊಲೀಸರು ಐವರನ್ನು ಕೊಲೆ ಮಾಡಿದ ಹಂತಕಿಯನ್ನು ಅರೆಸ್ಟ್ ಮಾಡಿದ್ದಾರೆ.

ಕೊಲೆಗೆ ಕಾರಣ ಕೊಲೆಯಾದ ಮಹಿಳೆ ಲಕ್ಷ್ಮೀಯ ಪತಿ ಗಂಗಾರಾಮ್ ಮೇಲೆ ಆರೋಪಿ ಲಕ್ಷ್ಮೀಗೆ ಕ್ರಷ್ ಇತ್ತು. ಈ ಹಿನ್ನೆಲೆ ಮದುವೆಯಾಗುವಂತೆ ಗಂಗಾರಾಮ್‌ನನ್ನು ಪೀಡಿಸ್ತಿದ್ದಳು. ಸದ್ಯ ಈ ಸಣ್ಣ ಸುಳಿವಿನಿಂದ ಪ್ರಕರಣ ಭೇದಿಸಿದ ಪೊಲೀಸರು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಕುಳಿತಿದ್ದ ಹಂತಕಿ ಮಹಿಳೆಯನ್ನು ಬಂಧಿಸಿದ್ದಾರೆ. ತಾನು ಪ್ರೀತಿಸಿದ ವ್ಯಕ್ತಿಯನ್ನು ಪಡೆಯಲು ಮುದ್ದಾದ ನಾಲ್ಕು ಮಕ್ಕಳು ಹಾಗೂ ಮಹಿಳೆಯನ್ನು ಕೊಂದು ಮೃತದೇಹದ ಮುಂದೆ ಅಳುತ್ತಾ ಕುಳಿತಿದ್ದ ಆರೋಪಿ ಲಕ್ಷ್ಮೀಯ ಬಣ್ಣ ಬಯಲಾಗಿದೆ. ಮೊದಲಿಗೆ ಕೊಲೆ ನಡೆದಾಗ ಹಂತಕರನ್ನು ಪತ್ತೆ ಹಚ್ಚಲು ಪೊಲೀಸರಿಗೆ ತಲೆನೋವಾಗಿತ್ತು. ಬಳಿಕ ಗಂಗಾರಾಮ್ ಮೇಲೆ ಲಕ್ಷ್ಮೀಗೆ ಕ್ರಷ್ ಇತ್ತು ಎಂಬ ಸುಳಿವು ಸಿಕ್ಕಿ ಮೇಲೆ ಸಣ್ಣ ಸುಳಿವಿನಿಂದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಡಿಸೆಂಬರ್ನಿಂದಲೇ ಕೊಲೆಗೆ ಸಂಚು ಹಾಕಿದ್ದ ಕೊಲೆಗಾರ್ತಿ ಆರೋಪಿ ಲಕ್ಷ್ಮೀ ಡಿಸೆಂಬರ್‌ನಿಂದಲೇ ಕೊಲೆ‌ ಮಾಡಲು ಸಂಚು ರೂಪಿಸಿದ್ದಳು. ಹರಿತವಾದ ಮಚ್ಚು ಖರೀದಿ ಮಾಡಿದ್ದಳು. ಕೊಲೆಯಾದ ಲಕ್ಷ್ಮಿ‌ ಮನೆಯ ಬಾತ್‌ರೂಂನಲ್ಲೇ ಮಚ್ಚು ಬಚ್ಚಿಟ್ಟಿದ್ದಳು. ಗಂಗಾರಾಮ್ ವ್ಯಾಪಾರಕ್ಕೆ ಹೋದ ನಂತರ ಮನೆಗೆ ಬಂದಿದ್ದ ಆರೋಪಿ ಲಕ್ಷ್ಮೀ ಶನಿವಾರ ಕೊಲೆಯಾದ ಲಕ್ಷ್ಮಿ ಮನೆಯಲ್ಲಿ ಉಳಿದುಕೊಂಡಿದ್ದಳು. ರಾತ್ರಿ ಊಟ ಆದ ನಂತರ ಬಚ್ಚಲು ಮನೆಯಿಂದ ಮಚ್ಚು ತಂದಿದ್ದಾಳೆ. ಅಷ್ಟರಲ್ಲಿ ಗಂಗಾರಾಮ್ ಅಣ್ಣನ ಮಗ ಗೋವಿಂದ ಮನೆಗೆ ಬಂದಿದ್ದಾನೆ. ಹೀಗಾಗಿ ಮತ್ತೆ ಮಚ್ಚು ವಾಪಸ್ಸು ಇಟ್ಟಿದ್ದಾಳೆ. ಎಲ್ಲರೂ ಮಲಗುವುದನ್ನು ಕಾದು ಎಲ್ಲರೂ ಮಲಗಿದ ನಂತರ ಲಕ್ಷ್ಮೀ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಶಬ್ಧ ಕೇಳಿ ಎಚ್ಚೆತ್ತ ಗೋವಿಂದನ‌ ಮೇಲೂ ಹಲ್ಲೆ ಮಾಡಿ ಬಳಿಕ ಮೂರು ಮಕ್ಕಳ ಮೇಲೂ ನಿರ್ದಯವಾಗಿ ಮಚ್ಚು ಬೀಸಿ ಕೊಲೆ ಮಾಡಿದ್ದಾಳೆ. ಹತ್ಯೆ ನಂತರ ಮುಂಜಾನೆವರೆಗೂ ಅಲ್ಲೇ ಇದ್ದು ಬೆಳಗಿನ ಜಾವ ಮೈಸೂರಿನ ಮನೆಗೆ ವಾಪಾಸ್ ಆಗಿದ್ದಾಳೆ. ಬಳಿಕ ರಕ್ತದ ಬಟ್ಟೆಯನ್ನು ವರುಣ ನಾಲೆಗೆ ಎಸೆದಿದ್ದಾಳೆ. ಮತ್ತೆ ಬೆಳಗ್ಗೆ 7 ಗಂಟೆ ಸುಮಾರಿಗೆ ಹತ್ಯೆ ನಡೆದ ಸ್ಥಳಕ್ಕೆ ಬಂದು ಎಲ್ಲರ ಜೊತೆ ಸೇರಿ ಅಳುವ ನಾಟಕವಾಡಿ ಡ್ರಾಮ ಮಾಡಿದ್ದಾಳೆ.

ಆರೋಪಿ ಲಕ್ಷ್ಮೀ, ಗಂಗಾರಾಮ್ ಸಂಬಂಧಿ. ಆಂಧ್ರ ಪ್ರದೇಶದಲ್ಲಿ ವಾಸವಿದ್ದ ಮಹಿಳೆ ಇದೀಗಾ ಎರಡು ತಿಂಗಳಿಂದ ಮೈಸೂರಿನಲ್ಲಿ ವಾಸ ಮಾಡುತ್ತಿದ್ರು. ಫೆಬ್ರವರಿ 06ರಂದು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಜನರ ಮಧ್ಯ ಅಳುತ್ತ ಯಾರಿಗೂ ಅನುಮಾನ ಬಾರದಂತೆ ಡ್ರಾಮ ಮಾಡಿದ್ದಳು. ಮೃತ ಲಕ್ಷ್ಮೀ ಪತಿ ಗಂಗಾರಾಮ್ ಘಟನೆ ನಡೆದ 10 ದಿನದ ಹಿಂದೆ ವ್ಯಾಪಾರಕ್ಕೆ ಹೋಗಿದ್ದರು. ಗಂಗಾರಾಮ್ ಪ್ಲಾಸ್ಟಿಕ್ ಹೂವು ಸೇರಿ ಹಲವು ವಸ್ತುಗಳ ಮಾರಾಟ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಕ್ಕೆ ಹೋದರೆ 15 ದಿನ, 1 ತಿಂಗಳು ಬಿಟ್ಟು ಬರುತ್ತಿದ್ದರು. ಗಂಗಾರಾಮ್ ಅಣ್ಣ ಗಣೇಶ್ ಪತ್ನಿ ಚಂಪಾಡಿ ಸಹಾ ವ್ಯಾಪಾರಕ್ಕೆ ತೆರಳಿದ್ದರು. ಇವರೆಲ್ಲಾ ಒಟ್ಟಿಗೆ ವಾಸವಾಗಿದ್ದರು

ಇದನ್ನೂ ಓದಿ: ‘ಕೃಷಿ ಹೊಂಡದ ಹಣ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ’ ನನ್ನ ಆತ್ಮಹತ್ಯೆಗೆ ಪಿಡಿಒ ಕಾರಣ ಎಂದು ಪತ್ರ ಬರೆದಿಟ್ಟ ರೈತ

ಇದನ್ನೂ ಓದಿ: ಪಾಂಡವರ ರಾಜಧಾನಿ ಹಸ್ತಿನಾಪುರದಲ್ಲಿ ಜಯ ಸಾಧಿಸುವವರೇ ಉತ್ತರ ಪ್ರದೇಶದಲ್ಲಿ ಸದಾ ಅಧಿಕಾರಕ್ಕೆ ಬರುವುದು, ಇದು ನಿಜ್ಜಾ!

Published On - 9:27 am, Wed, 9 February 22