‘ಕೃಷಿ ಹೊಂಡದ ಹಣ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ’ ನನ್ನ ಆತ್ಮಹತ್ಯೆಗೆ ಪಿಡಿಒ ಕಾರಣ ಎಂದು ಪತ್ರ ಬರೆದಿಟ್ಟ ರೈತ
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಗಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 60 ಸಾವಿರ ರೂಪಾಯಿ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಾಗಿತ್ತು. ಮನ್ರೇಗಾ ಯೋಜನೆಯಡಿ ಮಂಜುನಾಥ ಕಂಬಾರ ಎಂಬುವವರು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದರು.
ಕೊಪ್ಪಳ: ‘ಕೃಷಿ ಹೊಂಡದ ಹಣ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ’ ನನ್ನ ಆತ್ಮಹತ್ಯೆಗೆ ಪಿಡಿಒ ಕಾರಣರಾಗುತ್ತಾರೆಂದು ರೈತ ಪತ್ರ ಬರೆದಿದ್ದು ಕಾರ್ಮಿಕ ಆತ್ಮಹತ್ಯೆ ಪತ್ರಕ್ಕೆ ಗ್ರಾಮ ಪಂಚಾಯತ್ ಅಭಿವೃದ್ದಿ(ಪಿಡಿಒ) ಅಧಿಕಾರಿ ಸ್ವಿಕೃತಿ ಸಹಿ ಮಾಡಿಕೊಟ್ಟ ಘಟನೆ ನಡೆದಿದೆ. ರೈತನಿಂದ ಪತ್ರ ಪಡೆದು ಮಂಗಳೂರು ಗ್ರಾ.ಪಂ. ಪಿಡಿಒ ವೀರೇಶ್ ಸಹಿ ಮಾಡಿಕೊಟ್ಟಿದ್ದಾರೆ. ಪಿಡಿಒ ನಡೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಹೊಂಡದ ಹಣ ಪಾವತಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅದಕ್ಕೆ ನೀವೇ ಕಾರಣ ಎಂದು ಫಲಾನುಭವಿಯೊಬ್ಬರ ಗ್ರಾಮ ಪಂಚಾಯತ್ ಗೆ ಪತ್ರ ಬರೆದುಕೊಡುತ್ತಾರೆ, ಅದಕ್ಕೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯು ಸ್ವಿಕೃತಿ ಪತ್ರ ನೀಡಿದ್ದಾರೆ. ಹಾಗಾದರೆ ಫಲಾನುಭವಿ ಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರಿನ ತಾಲೂಕಿನ ಮಂಗಳೂರು ಗ್ರಾಮ ಪಂಚಾಯತ್ನ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಕಳೆದ ವರ್ಷದ ನರೇಗಾ ಯೋಜನೆಯಲ್ಲಿ ಸುಮಾರು 60 ಸಾವಿರ ರೂಪಾಯಿ ಖರ್ಚು ಮಾಡಿ ಕೃಷಿ ಹೊಂಡವನ್ನು ಮಂಗಳೂರಿನ ಮಂಜುನಾಥ ಕಂಬಾರ ಎಂಬುವವರು ನಿರ್ಮಿಸಿಕೊಂಡಿದ್ದಾರೆ. ಕೃಷಿ ಹೊಂಡ ನಿರ್ಮಾಣಕ್ಕಾಗಿ ಅವರು ತಮ್ಮ ಪತ್ನಿ ಆಭರಣಗಳನ್ನು ಸಹ ಒತ್ತೆ ಯಿಟ್ಟಿದ್ದಾರೆ.
ಈಗ ಕೃಷಿ ಹೊಂಡದ ಹಣ ನೀಡಿದರೆ ಒತ್ತೆ ಇಟ್ಟಿರುವ ಆಭರಣ ಬಿಡಿಸಿಕೊಳ್ಳಬಹುದು ಎಂದುಕೊಂಡು ಅವರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದ ಮಂಜುನಾಥ ಕಂಬಾರರು ಈಗ ಬೇಸತ್ತು ನೀವು ಕೂಲಿಕಾರರ ಹಣ ನೀಡದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅದಕ್ಕೆ ನೀವೇ ಕಾರಣರಾಗುತ್ತಿರಿ. ಇಂತಿ ನಿಮ್ಮ ಸಾವಿಗೆ ಕಾರಣಾಗುವ ವ್ಯಕ್ತಿ ಮಂಜುನಾಥ ಎಂದು ಮನವಿ ಪತ್ರ ನೀಡಿದ್ದಾರೆ. ಈ ಮನವಿ ಪತ್ರವನ್ನು ಸ್ವೀಕಾರ ಮಾಡಲಾಗಿದೆ. ಇದರಿಂದಾಗಿ ಕೂಲಿಕಾರ ಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಹಣ ಪಾವತಿಸುತ್ತಿಲ್ಲ. ಹಣ ಪಾವತಿಸಿ ಎಂದು ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ.
ನನಗೆ ಹಣಕ್ಕೆ ಅಲೆದಾಡಿ ಅಲೆದಾಡಿ ಸಾಕಾಗಿದೆ. ಕೃಷಿ ಹೊಂಡ ಮಾಡುವಾಗಲೇ ಸಾಲ ಸೋಲ ಮಾಡಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದೇನೆ. ಹೆಂಡತಿಯ ಓಲೆಯನ್ನು ಅಡ ಇಟ್ಟಿದ್ದೇನೆ. ದುಡ್ಡು ಕೊಡೋಕೆ ಅಲೆದಾಡಸ್ತೀದಾರೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಪತ್ರ ಕೊಟ್ಟಿದ್ದೇನೆ.ಅದಕ್ಕೆ PDO ಅಧಿಕಾರಿ ಸಹಿ ಮಾಡಿಕೊಟ್ಟಿದ್ದಾರೆ.ನನಗೇನಾದ್ರೂ ಆದ್ರೆ ಆವರೇ ಹೊಣೆ ಎಂದು ಮಂಜುನಾಥ ಕಂಬಾರ ಅಳಲು ತೋಡಿಕೊಂಡಿದ್ದಾರೆ.
ಇನ್ನು ಮತ್ತೊಂದು ಕಡೆ ಕೆಲ ತಾಂತ್ರಿಕ ತೊಂದರೆಗಳಿಂದ ಹಣ ಬಿಡುಗಡೆ ಆಗಿಲ್ಲ.ಹೀಗಾಗಿ ಸ್ವಲ್ಪ ತಡವಾಗಿದೆ..ಆತ್ಮಹತ್ಯೆ ಪತ್ರಕ್ಕೆ ಸ್ವೀಕೃತಿ ಸಹಿ ಮಾಡಿರೋದು ತಪ್ಪಾಗಿದೆ. ಅವರಿಗೆ ಆದಷ್ಟು ಬೇಗ ಹಣ ಬಿಡುಗಡೆ ಮಾಡ್ತೀವಿ ಎಂದು ಮಂಗಳೂರು ಗ್ರಾಪಂ PDO ವಿರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಣ್ಣಾವ್ರು ಡಾಕ್ಟರೇಟ್ ಪಡೆದ ಸಮಾರಂಭಕ್ಕೆ ಇಂದಿನ ಮೈಸೂರು ವಿವಿ ಕುಲಪತಿಗೂ ಸಿಕ್ಕಿರಲಿಲ್ಲ ಎಂಟ್ರಿ; ಇಲ್ಲಿದೆ ವಿವರ..
ಧನ್ಯವಾದ ತಿಳಿಸುವ ನೆಪದಲ್ಲಿ ತಬ್ಬಿಕೊಂಡು ಚಿನ್ನದ ಸರವನ್ನು ಎಗರಿಸುವ ಲೇಡಿ! ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Published On - 8:55 am, Wed, 9 February 22