ಧನ್ಯವಾದ ತಿಳಿಸುವ ನೆಪದಲ್ಲಿ ತಬ್ಬಿಕೊಂಡು ಚಿನ್ನದ ಸರವನ್ನು ಎಗರಿಸುವ ಲೇಡಿ! ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಮಹಿಳೆ ಜನರ ಗಮನವನ್ನು ಬೇರೆಡೆ ಸೆಳೆದು ಕ್ಷಣಾರ್ಧದಲ್ಲೇ ಬಂಗಾರದ ಸರವನ್ನು ಕದಿಯುತ್ತಾಳೆ. ಕಾರಿನಲ್ಲಿ ಪ್ರಯಾಣಿಸುವ ಶ್ರೀಮಂತರೇ ಇವಳಿಗೆ ಟಾರ್ಗೆಟ್ ಅಂತೆ. ಡ್ರಾಪ್ ಕೇಳುವ ನೆಪದಲ್ಲಿ ಕಾರು ಹತ್ತುತ್ತಾಳೆ. ಥ್ಯಾಂಕ್ಸ್ ಹೇಳಲು ತಬ್ಬಿಕೊಳ್ಳುತ್ತಾಳೆ.

ಧನ್ಯವಾದ ತಿಳಿಸುವ ನೆಪದಲ್ಲಿ ತಬ್ಬಿಕೊಂಡು ಚಿನ್ನದ ಸರವನ್ನು ಎಗರಿಸುವ ಲೇಡಿ! ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಜನರ ಚಿನ್ನದ ಸರವನ್ನು ಎಗರಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Follow us
TV9 Web
| Updated By: sandhya thejappa

Updated on:Feb 09, 2022 | 8:56 AM

ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬಳು ಧನ್ಯವಾದ ತಿಳಿಸುವ ನೆಪದಲ್ಲಿ ತಬ್ಬಿಕೊಂಡು ಚೈನ್ ಕಳ್ಳತನ (Chain Snatching) ಮಾಡುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಮಹಿಳೆ ಡ್ರಾಪ್ ಕೇಳಿ ವಕೀಲ ಪ್ರವೀಣ್ ಎಂಬುವವರ ಕಾರು ಹತ್ತಿದ್ದಳು. ಕಾರು ಇಳಿದ ಬಳಿಕ ಧನ್ಯವಾದ ತಿಳಿಸಿ ತಬ್ಬಿಕೊಂಡಿದ್ದಾಳೆ. ಈ ವೇಳೆ ಪ್ರವೀಣ್ ಎಂಬುವವರ ಚಿನ್ನದ ಸರವನ್ನು ಎಗರಿಸಿದ್ದಾಳೆ. ಈ ಘಟನೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದಿದ್ದು, ಕ್ಷಣಾರ್ಧದಲ್ಲಿ ಜನರ ಚಿನ್ನದ ಸರವನ್ನು ಎಗರಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ (CC Camera) ಸೆರೆಯಾಗಿದೆ.

ಮಹಿಳೆ ಜನರ ಗಮನವನ್ನು ಬೇರೆಡೆ ಸೆಳೆದು ಕ್ಷಣಾರ್ಧದಲ್ಲೇ ಬಂಗಾರದ ಸರವನ್ನು ಕದಿಯುತ್ತಾಳೆ. ಕಾರಿನಲ್ಲಿ ಪ್ರಯಾಣಿಸುವ ಶ್ರೀಮಂತರೇ ಇವಳಿಗೆ ಟಾರ್ಗೆಟ್ ಅಂತೆ. ಡ್ರಾಪ್ ಕೇಳುವ ನೆಪದಲ್ಲಿ ಕಾರು ಹತ್ತುತ್ತಾಳೆ. ಥ್ಯಾಂಕ್ಸ್ ಹೇಳಲು ತಬ್ಬಿಕೊಳ್ಳುತ್ತಾಳೆ. ಈ ವೇಳೆ ಕುತ್ತಿಗೆಯಲ್ಲಿರುವ ಬಂಗಾರದ ಸರವನ್ನು ಕದಿಯುತ್ತಾಳೆ. ಇದೇ ರೀತಿ ವಕೀಲ ಪ್ರವೀಣ್ ಸರವನ್ನು ಕದ್ದಿದ್ದಾಳೆ. ಏರ್ ಲೈನ್ಸ್ ಹೋಟೆಲ್ ಬಳಿ ಫೆಬ್ರವರಿ 3 ರಂದು ಈ ಘಟನೆ ನಡೆದಿದೆ.

ಪ್ರವೀಣ್ ಕುತ್ತಿಗೆಯಲ್ಲಿದ್ದ 24 ಗ್ರಾಂ ಚಿನ್ನದ ಸರವನ್ನು ಕದ್ದ ಮಹಿಳೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಾಕಿಂಗ್ ಹೋಗುತ್ತಿದ್ದ ವೃದ್ಧೆಯ ಸರ ಕಳ್ಳತನ: ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಆದರ್ಶ ನಗರದಲ್ಲಿ ವಾಕಿಂಗ್ ಹೋಗುತ್ತಿದ್ದ ವೃದ್ಧೆಯೊಬ್ಬರು ಸರ ಕಳ್ಳತನವಾಗಿದೆ. ಸೌಭಾಗ್ಯ(60) ಎಂಬುವವರ ಮಾಂಗಲ್ಯ ಸರ ಕಳ್ಳತನವಾಗಿದೆ. 60ಗ್ರಾಂ ತೂಕದ ಮಾಂಗಲ್ಯ ಸರ 2 ಲಕ್ಷಕ್ಕೂ ಹೆಚ್ಚು ಬೆಲೆಬಾಳುವತ್ತದೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ನೆಲಮಂಗಲ ಟೌನ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರೌಡಿಶೀಟರ್​ನಿಂದ ಹಲ್ಲೆ: ಹಣಕಾಸು ವಿಚಾರದಲ್ಲಿ ರೌಡಿಶೀಟರ್​ ರಸ್ತೆಯಲ್ಲೇ ಹಲ್ಲೆ ನಡೆಸಿರುವ ಘಟನೆ  ಬೆಂಗಳೂರಿನ ಅಟ್ಟೂರು ಲೇಔಟ್​ನಲ್ಲಿ ನಡೆದಿದೆ. ರೌಡಿಶೀಟರ್​ ಶ್ರೀಕಾಂತ್​ ಚರಣ್​ರಾಜ್​ ಮೇಲೆ ಹಲ್ಲೆ ಮಾಡಿದ್ದಾನೆ. ಗೂಡ್ಸ್​ ​ವಾಹನಕ್ಕೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾನೆ. ಆರೋಪಿ ಪರವಾಗಿ ಮತ್ತೊಬ್ಬ ರೌಡಿಶೀಟರ್​​ ಧಮ್ಕಿ ಹಾಕಿದ್ದಾನೆ. ಈ ಬಗ್ಗೆ ಯಲಹಂಕ‌ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ

ಕುಂಕುಮಾರ್ಚನೆ ಮಾಡುವುದರ ಮಹತ್ವ ಮತ್ತು ಪ್ರಾಮುಖ್ಯತೆ, ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು, ಶಾಸ್ತ್ರ ಏನು ಹೇಳುತ್ತದೆ?

Weather Today: ಪಂಜಾಬ್, ದೆಹಲಿ ಸೇರಿ 15 ರಾಜ್ಯಗಳಲ್ಲಿ ಇನ್ನೆರಡು ದಿನ ಭಾರೀ ಮಳೆ

Published On - 8:52 am, Wed, 9 February 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ