ಇಂದು ವಿದ್ಯಾರಣ್ಯಪುರ, ವಿ.ವಿ.ಪುರಂ ಸೀಲ್​ಡೌನ್? ಲಾಕ್​ಡೌನ್ ಜೊತೆ ಪಾಲಿಸಲೇ ಬೇಕು ರೂಲ್ಸ್

|

Updated on: Jun 23, 2020 | 6:37 AM

ಬೆಂಗಳೂರು: ಬೆಂಗಳೂರು ಮತ್ತೆ ಲಾಕ್​.. ರಾಜಧಾನಿಯ ಏರಿಯಾ ಏರಿಯಾ.. ಗಲ್ಲಿ ಗಲ್ಲಿಗಳಿಗೂ ಕಂಪ್ಲೀಟ್​ ಸೀಲ್​. ಯಾವುದು ಮತ್ತೆ ಆಗಬಾರದು ಅಂತಾ ಎಲ್ಲರೂ ಬಯಸಿದ್ರೋ. ಇನ್ಯಾವತ್ತೂ ಇಂಥಾ ಸಂಕಷ್ಟ ಬರೋದು ಬೇಡಪ್ಪ ಅಂತ ಎಲ್ಲರೂ ಅಂದ್ಕೊಂಡಿದ್ರೋ ಅದೇ ಸಂಕಷ್ಟ. ಅದೇ ಕಂಟಕ. ಆ ಭೀಕರತೆ ಮತ್ತೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದೆರಗಿದೆ. ಇನ್ಮೇಲೆ ಲಾಕ್​ಡೌನ್ ಅನ್ನೋ ಲಗಾಮು ಬೆಂಗಳೂರಿನ ಗಲ್ಲಿ ಗಲ್ಲಿಗೂ ಬೀಳಲಿದೆ. ಯೆಸ್​.. ಬೆಂಗಳೂರಿನಂಥ ಬೆಂಗಳೂರೇ ಕೊರೊನಾದ ಕುಲುಮೆಗೆ ಸಿಲುಕಿ ಬೆಂದು ಹೋಗ್ತಿದೆ. ದಿನ ದಿನಕ್ಕೂ ನೂರಾರು […]

ಇಂದು ವಿದ್ಯಾರಣ್ಯಪುರ, ವಿ.ವಿ.ಪುರಂ ಸೀಲ್​ಡೌನ್? ಲಾಕ್​ಡೌನ್ ಜೊತೆ ಪಾಲಿಸಲೇ ಬೇಕು ರೂಲ್ಸ್
ಸೀಲ್​ ಡೌನ್
Follow us on

ಬೆಂಗಳೂರು: ಬೆಂಗಳೂರು ಮತ್ತೆ ಲಾಕ್​.. ರಾಜಧಾನಿಯ ಏರಿಯಾ ಏರಿಯಾ.. ಗಲ್ಲಿ ಗಲ್ಲಿಗಳಿಗೂ ಕಂಪ್ಲೀಟ್​ ಸೀಲ್​. ಯಾವುದು ಮತ್ತೆ ಆಗಬಾರದು ಅಂತಾ ಎಲ್ಲರೂ ಬಯಸಿದ್ರೋ. ಇನ್ಯಾವತ್ತೂ ಇಂಥಾ ಸಂಕಷ್ಟ ಬರೋದು ಬೇಡಪ್ಪ ಅಂತ ಎಲ್ಲರೂ ಅಂದ್ಕೊಂಡಿದ್ರೋ ಅದೇ ಸಂಕಷ್ಟ. ಅದೇ ಕಂಟಕ. ಆ ಭೀಕರತೆ ಮತ್ತೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದೆರಗಿದೆ. ಇನ್ಮೇಲೆ ಲಾಕ್​ಡೌನ್ ಅನ್ನೋ ಲಗಾಮು ಬೆಂಗಳೂರಿನ ಗಲ್ಲಿ ಗಲ್ಲಿಗೂ ಬೀಳಲಿದೆ.

ಯೆಸ್​.. ಬೆಂಗಳೂರಿನಂಥ ಬೆಂಗಳೂರೇ ಕೊರೊನಾದ ಕುಲುಮೆಗೆ ಸಿಲುಕಿ ಬೆಂದು ಹೋಗ್ತಿದೆ. ದಿನ ದಿನಕ್ಕೂ ನೂರಾರು ಹೊಸ ಕೇಸ್​​ಗಳು ಪತ್ತೆಯಾಗ್ತಿವೆ. ಅದ್ರಲ್ಲೂ ಬೆಂಗಳೂರಿನಲ್ಲೇ ದಿನವೊಂದಕ್ಕೇ 5, 8, 10 ಬಲಿಗಳು ಬೀಳ್ತಿರೋದು ಕಾಮನ್ ಆಗ್ಬಿಟ್ಟಿದೆ. ನಿಜಕ್ಕೂ ಬೆಂಗಳೂರು, ತನ್ನ ಇತಿಹಾಸದಲ್ಲೇ ಕಂಗಾಲಾಗಿರದ. ಯಾವತ್ತೂ ಕಾಣದ ಆತಂಕ.. ಭಯಕ್ಕೆ ಬೆಚ್ಚಿ ಬಿದ್ದಿದೆ. ಇದೀಗ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಕ್ರೂರಿ ನುಗ್ಗಿ ನರಕದರ್ಶನ ನೀಡ್ತಿದ್ರೆ ನಿನ್ನೆ 2 ಏರಿಯಾಗಳೂ ಸೀಲ್​​ಡೌನ್ ಆಗ್ಬಿಟ್ಟಿವೆ. ಇನ್ಮೇಲೆ ಒಂದೊಂದು ಪ್ರದೇಶ ಲಾಕ್​​ಡೌನ್​ ಆಗಲಿದ್ದು, ಒಂದೇ ಒಂದು ಕೊರೊನಾ ಕೇಸ್ ಬಂದ್ರೂ ಸೀಲ್​​ಡೌನ್ ಅನ್ನೋ ಬೀಗ ಬೀಳಲಿದೆ.

ಬೆಂಗಳೂರಿನಲ್ಲಿ ಮತ್ತೆ ಲಾಕ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗ!
ನಿಜ.. ಒಂದ್ಕಡೆ ಬೆಂಗಳೂರಿನಲ್ಲಿ ಹೆಮ್ಮಾರಿ ವೈರಸ್ ನಿಯಂತ್ರಣಕ್ಕೆ ಬರ್ತಿಲ್ಲ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಸಿಗ್ತಿಲ್ಲ. ಕ್ರಿಟಿಕಲ್ ಕಂಡೀಷನ್​ಗೆ ಹೋದವರಿಗೆ ವೆಂಟಿಲೇಟರ್​ಗಳೇ ಇಲ್ಲ. ಇದ್ರಿಂದ ಕಂಗೆಟ್ಟಿರೋ ಸರ್ಕಾರ ಹಳೆ ಸೂತ್ರ ಲಾಕ್​​​ಡೌನ್, ಸೀಲ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸೋಕೆ ಮುಂದಾಗಿದೆ. ನಿನ್ನೆ ಬೆಂಗಳೂರಿನಲ್ಲಿ 2 ಏರಿಯಾಗಳನ್ನ ಸೀಲ್​​ಡೌನ್ ಮಾಡಲಾಗಿದೆ. ಬೆಂಗಳೂರಲ್ಲಿ ಸೋಂಕಿನ ಆಬ್ಬರ ಹೆಚ್ಚಾಗಿರೋ ಕೆ.ಆರ್​.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಏರಿಯಾವನ್ನ 15 ದಿನಗಳ ಕಾಲ ಲಾಕ್​​ಡೌನ್ ಮಾಡಲಾಗಿದೆ. ಹಾಗಿದ್ರೆ, ಈ ಎರಡು ಏರಿಯಾಗಳು ಸೀಲ್​ಡೌನ್ ಆಗೋಯ್ತು. ಹಾಗಿದ್ರೆ ಇವತ್ತು ಯಾವ ವಾರ್ಡ್​ಗಳು ಲಾಕ್​ಡೌನ್ ಆಗ್ಬೋದು ಅನ್ನೋದನ್ನು ನೋಡೋದಾದ್ರೆ.

ಮತ್ತೆರಡು ಏರಿಯಾ ‘ಲಾಕ್​’!
ಇನ್ನು, ಬೆಂಗಳೂರಿನ ಫೇಮಸ್ ಏರಿಯಾ ವಿದ್ಯಾರಣ್ಯಪುರ ಇಂದು​ ಸೀಲ್​ಡೌನ್ ಆಗೋ ಲಿಸ್ಟ್​ನಲ್ಲಿದೆ. ಅಲ್ಲದೇ, ವಿ.ವಿ.ಪುರಂ ಕೂಡಾ ಸೀಲ್​ಡೌನ್ ಆಗೋದು ಪಕ್ಕಾ ಆಗಿದೆ.

ಇನ್ನೊಂದೆಡೆ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕ್ತಿದ್ರೆ, ಬೆಂಗಳೂರಿನ 3 ಠಾಣೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕಲಾಸಿಪಾಳ್ಯ ಪೊಲೀಸ್​​ ಠಾಣೆ, ವಿ.ವಿ.ಪುರಂ ಸಂಚಾರಿ ಠಾಣೆ ಹಾಗೂ ಅಶೋಕನಗರ ಸಂಚಾರಿ ಪೊಲೀಸ್​ ಠಾಣೆ ತಾತ್ಕಾಲಿಕ ಬಂದ್ ಮಾಡಲಾಗಿದೆ. ವಿದ್ಯಾರಣ್ಯಪುರ ಹಾಗೂ ವಿ.ವಿ.ಪುರಂ ಸೀಲ್​ಡೌನ್ ಮಾಡ್ತೀವಿ ಅಂತ ಖುದ್ದು ಭಾಸ್ಕರ್​ ರಾವ್ ಅವರೇ ಹೇಳಿದ್ದಾರೆ.

ಹಾಗಿದ್ರೆ ಸೀಲ್​ಡೌನ್ ಆಗಿರೋ ಏರಿಯಾದಲ್ಲಿ ಹಲವು ಕಟ್ಟುನಿಟ್ಟಿನ ರೂಲ್ಸ್ ಕೂಡ ಫಾಲೋ ಮಾಡ್ಬೇಕು. ಸರ್ಕಾರ ಜಾರಿಗೆ ತಂದಿರೋ ಆ ಹೊಸ ರೂಲ್ಸ್​ಗಳೇನು ಅನ್ನೋದನ್ನ ನೋಡೋದಾದ್ರೆ.

ಲಾಕ್​​ ಜೊತೆ ರೂಲ್ಸ್!
ಕೆ.ಆರ್.ಮಾರ್ಕೆಟ್​​​​ ಏರಿಯಾದ ಮಾರ್ಕೆಟ್​​​ ಜಾಗ ಲಾಕ್​​ಡೌನ್ ಮಾಡಿದ್ರೆ, ಕಲಾಸಿಪಾಳ್ಯ ಕೂಡ ಕಂಪ್ಲೀಟ್​​ ಸೀಲ್​​ಡೌನ್ ಆಗಲಿದೆ. ಹಾಗೆ, ಕ್ವಾರಂಟೈನ್​​ ಆಗಿರುವವರು ಮೊಬೈಲ್ ಮನೆಯಲ್ಲಿಟ್ಟು ಹೊರಗೆ ಹೋಗಂಗಿಲ್ಲ. ಒಂದ್ವೇಳೆ ಹೊರಗಡೆ ತಿರುಗಾಡಿದ್ರೆ ಕ್ರಿಮಿನಲ್​ ಕೇಸ್ ಹಾಕಲಾಗುತ್ತೆ. ಸೋಂಕು ಪತ್ತೆಯಾದ ಮನೆಯಿರೋ ರಸ್ತೆಗಳನ್ನ ಸೀಲ್​ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ. ವಾರ್ಡ್​​ಗಳ ರಸ್ತೆಗಳು ಸೀಲ್​​​​ಡೌನ್​ ಆಗಲಿವೆ. ಇನ್ನು, ತರಕಾರಿ ಮಾರಾಟಕ್ಕೆ ಬಿಬಿಎಂಪಿ ಆಯುಕ್ತರು ಸ್ಥಳ ನಿಗದಿ ಮಾಡಲಿದ್ದಾರೆ. ಹಾಗೆ, ಪ್ರತಿ ವಾರ್ಡ್​​​ನಲ್ಲೂ ಫೀವರ್​​ ಕ್ಲಿನಿಕ್ ತೆರೆಯಲು ಸರ್ಕಾರ ಪ್ಲ್ಯಾನ್ ಮಾಡಿದೆ.

ಒಟ್ನಲ್ಲಿ, ಸಿಲಿಕಾನ್​ ಸಿಟಿಯಲ್ಲಿ ಸೋಂಕಿನ ಸುನಾಮಿಯೇ ಅಪ್ಪಳಿಸ್ತಿದೆ. ಸಮುದಾಯ ಹಂತಕ್ಕೆ ಕ್ರೂರಿ ಕಾಲಿಟ್ಟಿದ್ದಾನಾ ಅನ್ನೋ ಅನುಮಾನ ಕಾಡ್ತಿದೆ. ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕೋ ಟೈಂನಲ್ಲಿ ಎಚ್ಚೆತ್ತಿರೋ ಸರ್ಕಾರ ಸದ್ಯ ಮತ್ತೆ ಕೊರೊನಾ ಕಟ್ಟಿ ಹಾಕಲು ಲಾಕ್​ಡೌನ್, ಸೀಲ್​ಡೌನ್ ಅಸ್ತ್ರಕ್ಕೆ ಮೊರೆಹೋಗ್ತಿದೆ. ಆದ್ರೆ, ಇದು ಕೇವಲ ಬರಿ ಬಾಯಿ ಮಾತಿನಲ್ಲಿ ಉಳಿಯದೆ ಕಟ್ಟು ನಿಟ್ಟಾಗಿ ರೂಲ್ಸ್ ಜಾರಿಗೆ ಬರದೇ ಇದ್ರೆ, ಕೊರೊನಾ ಯಮಪಾಶಕ್ಕೆ ಬೆಂಗಳೂರು ಸಿಲುಕೋದ್ರಲ್ಲಿ ನೋ ಡೌಟ್​.