ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೊನಾ ಪಾಸಿಟಿವ್

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೊನಾ ಪಾಸಿಟಿವ್

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಂದೆಗೆ ಕೊರೊನಾ ಪಾಸಿಟಿವ್ ಇರುವುದು ನಿನ್ನೆ ದೃಢಪಟ್ಟಿತ್ತು. ಈ ಬಗ್ಗೆ ಸಚಿವರೇ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಇಂದು ಮತ್ತೆ ತಮ್ಮ ಪತ್ನಿ ಹಾಗೂ ಮಗಳಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿಸಿದ್ದಾರೆ. ಸಚಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುಧಾಕರ್​ ತಮ್ಮ ಕುಟುಂಬದವರಿಗೆ ಕೋವಿಡ್​ ಪರೀಕ್ಷೆ ಮಾಡಿಸಿದ್ದರು.

ಇದೀಗ ಅವರ 82 ವರ್ಷ ವಯಸ್ಸಿನ ತಂದೆಯವರಿಗೆ, ಪತ್ನಿ ಹಾಗೂ ಮಗಳಿಗೆ ಕೊರೊನಾ ಪಾಸಿಟಿವ್​ ಬಂದಿರುವುದು ವರದಿಯಾಗಿದೆ. ಮೂವರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಡಾ.ಕೆ.ಸುಧಾಕರ್​ ಟ್ವೀಟ್ ಮಾಡಿದ್ದಾರೆ.

ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.
-ಡಾ.ಕೆ.ಸುಧಾಕರ್

Click on your DTH Provider to Add TV9 Kannada